ಜೆಐಟಿ ಎದುರು ಹಾಜರಿಗೆ ಷರೀಫ್‌ ನಿರ್ಧಾರ

7
ವಿಚಾರಣೆ ಎದುರಿಸುತ್ತಿರುವ ಮೊದಲ ಪ್ರಧಾನಿ

ಜೆಐಟಿ ಎದುರು ಹಾಜರಿಗೆ ಷರೀಫ್‌ ನಿರ್ಧಾರ

Published:
Updated:
ಜೆಐಟಿ ಎದುರು ಹಾಜರಿಗೆ ಷರೀಫ್‌ ನಿರ್ಧಾರ

ಇಸ್ಲಾಮಾಬಾದ್‌: ಪನಾಮ ದಾಖಲೆ ಸೋರಿಕೆಗೆ ಸಂಬಂಧಿಸಿದಂತೆ  ಜಂಟಿ ತನಿಖಾ ಸಮಿತಿ (ಜೆಐಟಿ) ಎದುರು ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್‌ ಗುರುವಾರ ವಿಚಾರಣೆಗೆ ಹಾಜರಾಗಲಿದ್ದಾರೆ.ಪ್ರಕರಣದ ತನಿಖೆಗಾಗಿ ಆರು ಸದಸ್ಯರ ಜೆಐಟಿಯನ್ನು ಸುಪ್ರೀಂಕೋರ್ಟ್‌ ರಚಿಸಿದೆ. ಅಧಿಕಾರದಲ್ಲಿದ್ದ ಪ್ರಧಾನಿಯೊಬ್ಬರು  ಉನ್ನತ ಮಟ್ಟದ ತನಿಖಾ ಸಮಿತಿಯ ಎದುರು ವಿಚಾರಣೆಗೆ ಹಾಜರಾಗುತ್ತಿರುವುದು ಇದೇ ಮೊದಲು.ಜೂನ್‌ 15ರಂದು ಬೆಳಿಗ್ಗೆ 11 ಗಂಟೆಗೆ  ಸಂಬಂಧಪಟ್ಟ ಎಲ್ಲ ದಾಖಲೆಗಳೊಂದಿಗೆ  ಸಮಿತಿ ಎದುರು ಹಾಜರಾಗ ಬೇಕು ಎಂದು  ಜೆಐಟಿ ಮುಖ್ಯಸ್ಥ ವಾಜಿದ್‌ ಜಿಯಾ ಅವರು  ಪ್ರಧಾನಿ ಷರೀಫ್‌ ಅವರಿಗೆ ಶನಿವಾರ ಸಮನ್ಸ್‌ ಜಾರಿ ಮಾಡಿದ್ದರು.ಈ ಸಮನ್ಸ್‌ ತಲುಪಿದ ಬಳಿಕ ಷರೀಫ್‌ ಅವರು ತಮ್ಮ ಆಪ್ತರೊಂದಿಗೆ ಭಾನುವಾರ ಸಮಾಲೋಚನೆ ನಡೆಸಿದ್ದು , ಜೆಐಟಿ ಎದುರು ವಿಚಾರಣೆಗೆ ಹಾಜರಾಗಲು ನಿರ್ಧರಿಸಿದ್ದಾರೆ ಎಂದು ‘ಡಾನ್‌  ನ್ಯೂಸ್‌’ ವರದಿ ಮಾಡಿದೆ.ಷರೀಫ್‌ ಕುಟುಂಬ ಬ್ರಿಟನ್‌ನಲ್ಲಿ ಆಸ್ತಿ ಹೊಂದಿದೆ ಎಂದು ಪನಾಮ ದಾಖಲೆ ಬಹಿರಂಗವಾದಾಗ ತಿಳಿದುಬಂದಿತ್ತು.ಲಂಡನ್‌ನಲ್ಲಿ ಷರೀಫ್‌ ಕುಟುಂಬ ಒಡೆತನ ಹೊಂದಿರುವ ಅಸ್ತಿಗಳಿಗೆ ಸಂಬಂಧಿಸಿದಂತೆ ಜೆಐಟಿ ತನಿಖೆ ನಡೆಸಲಿದೆ.  ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಷರೀಫ್‌ ಅವರ ಪುತ್ರರಾದ ಹುಸೇನ್‌ ಮತ್ತು ಹಸನ್‌ ಅವರನ್ನು ಜೆಐಟಿ ಕಳೆದವಾರ ವಿಚಾರಣೆ ನಡೆಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry