ತ್ರಿವಳಿ ತಲಾಖ್‌ ನೀಡಿದ ವ್ಯಕ್ತಿಗೆ ₹2 ಲಕ್ಷ ದಂಡ

7

ತ್ರಿವಳಿ ತಲಾಖ್‌ ನೀಡಿದ ವ್ಯಕ್ತಿಗೆ ₹2 ಲಕ್ಷ ದಂಡ

Published:
Updated:
ತ್ರಿವಳಿ ತಲಾಖ್‌ ನೀಡಿದ ವ್ಯಕ್ತಿಗೆ ₹2 ಲಕ್ಷ ದಂಡ

ಸಂಭಾಲ್‌, ಉತ್ತರ ಪ್ರದೇಶ: ಪತ್ನಿಗೆ ತ್ರಿವಳಿ ತಲಾಖ್‌ ನೀಡಿದ ವ್ಯಕ್ತಿಗೆ ಇಲ್ಲಿನ ಪಂಚಾಯಿತಿ ₹2 ಲಕ್ಷ ದಂಡ ವಿಧಿಸಿದೆ.ಕೆಲವೇ ದಿನಗಳ ಹಿಂದೆ ಮದುವೆಯಾಗಿದ್ದ ಮುಸಾಪುರ ಗ್ರಾಮದ ವ್ಯಕ್ತಿ ಪತ್ನಿಗೆ ತ್ರಿವಳಿ ತಲಾಖ್‌ ಮೂಲಕ ವಿಚ್ಛೇದನ ನೀಡಿದ್ದ. ಇದನ್ನು ಪ್ರಶ್ನಿಸಿ ಯುವತಿಯ ಪಾಲಕರು ಪಂಚಾಯಿತಿ ಮೊರೆ ಹೋಗಿದ್ದರು.50 ಗ್ರಾಮಗಳಿಂದ ಬಂದ ಪಂಚಾಯಿತಿ ಸದಸ್ಯರು ಇಲ್ಲಿನ ಮದರಸಾದಲ್ಲಿ ಚರ್ಚೆ ನಡೆಸಿ ದಂಡ ವಿಧಿಸಿದ್ದಾರೆ.ಮದುವೆ ಸಂದರ್ಭದಲ್ಲಿ ಪಡೆದ ಎಲ್ಲಾ ಉಡುಗೊರೆಗಳನ್ನು ಯುವತಿಗೆ ನೀಡಲು ಆದೇಶಿಸಿದ್ದಾರೆ. ₹60,000 ವಧುದಕ್ಷಿಣೆಯನ್ನು ನೀಡುವಂತೆಯೂ ಪಂಚಾಯಿತಿ ಸೂಚಿಸಿದೆ.‘ತ್ರಿವಳಿ ತಲಾಖ್‌ ಸ್ವೀಕಾರಾರ್ಹವಲ್ಲ. ಅದನ್ನು ರದ್ದು ಮಾಡಬೇಕು. ವ್ಯಕ್ತಿಯ ಆರ್ಥಿಕ ಸ್ಥಿತಿಯನ್ನು ಗಮನಿಸಿ ₹2 ಲಕ್ಷ ದಂಡ ವಿಧಿಸಿದ್ದೇವೆ’ ಎಂದು ಪಂಚಾಯಿತಿಯ ಹಿರಿಯ ಸದಸ್ಯ ಲಿಯಾಖತ್‌ ಹುಸೈನ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry