‘ಮಾಲ್‌ಗೆ ಹೋಗುವ ಸೊಸೆ ಬೇಡ’

7

‘ಮಾಲ್‌ಗೆ ಹೋಗುವ ಸೊಸೆ ಬೇಡ’

Published:
Updated:
‘ಮಾಲ್‌ಗೆ ಹೋಗುವ ಸೊಸೆ ಬೇಡ’

ಪಟ್ನಾ: ಬೃಹತ್ ಶಾಪಿಂಗ್ ಮಾಲ್ ನಿರ್ಮಾಣ ವಿಷಯದಲ್ಲಿ ಬಿಹಾರ ಸರ್ಕಾರದ ಆರೋಗ್ಯ ಸಚಿವ ತೇಜ್ ಪ್ರತಾಪ್ ಅವರು ವಿವಾದದಲ್ಲಿದ್ದಾರೆ.ಆದರೆ ಅವರ ತಾಯಿ ರಾಬ್ಡಿ ದೇವಿ ಅವರು ಮಾತ್ರ ತಮ್ಮ ಮಗನಿಗೆ ಹೆಂಡತಿಯಾಗಿ ಬರುವವಳು ಶಾಪಿಂಗ್ ಮಾಲ್‌ಗೆ ಭೇಟಿ ನೀಡದ, ಸಿನಿಮಾ ನೋಡುವುದನ್ನು ಇಷ್ಟಪಡದವಳು ಆಗಿರಬೇಕು ಎಂದು ಷರತ್ತು ಇಟ್ಟಿದ್ದಾರೆ.‘ಸೊಸೆಯಾಗಿ ಬರುವವಳು ನನ್ನಂತೆ ಇರಬೇಕು. ಸುಸಂಸ್ಕೃತಳಾಗಿರಬೇಕು. ಮನೆ ವ್ಯವಹಾರಗಳನ್ನು ಸಮರ್ಥವಾಗಿ ನಿಭಾಯಿಸಬೇಕು. ಹಿರಿಯರನ್ನು ಗೌರವಿಸಬೇಕು. ಅಗತ್ಯಬಿದ್ದರೆ  ಮನೆ ಹೊರಗಿನ ಜವಾಬ್ದಾರಿಗಳನ್ನು ನಿಭಾಯಿಸಲೂ ಶಕ್ತಳಾಗಿರಬೇಕು’ ಎಂದು ಅವರು ದೊಡ್ಡ ಪಟ್ಟಿಯನ್ನೇ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry