ಕಲ್ಲಿನ ಕ್ವಾರಿಗೆ ಕಸ: ಗ್ರಾಮಸ್ಥರ ಪ್ರತಿಭಟನೆ

7

ಕಲ್ಲಿನ ಕ್ವಾರಿಗೆ ಕಸ: ಗ್ರಾಮಸ್ಥರ ಪ್ರತಿಭಟನೆ

Published:
Updated:
ಕಲ್ಲಿನ ಕ್ವಾರಿಗೆ ಕಸ: ಗ್ರಾಮಸ್ಥರ ಪ್ರತಿಭಟನೆ

ಬೆಂಗಳೂರು: ಮಹದೇವಪುರ ಕ್ಷೇತ್ರದ ಮೀಟಗಾನಹಳ್ಳಿಯ ಕಲ್ಲಿನ ಕ್ವಾರಿಯಲ್ಲಿ ಕಸ ಸುರಿಯುತ್ತಿರುವುದನ್ನು ಖಂಡಿಸಿ ಗ್ರಾಮಸ್ಥರು ಧರಣಿ ನಡೆಸಿದರು.

ಕಣ್ಣೂರು ಗ್ರಾಮ ಪಂಚಾಯಿತಿ ಕಚೇರಿಯಿಂದ ಮೀಟಗಾನಹಳ್ಳಿಯ ಕಲ್ಲಿನ ಕ್ವಾರಿಯವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಕಸ ಸುರಿಯುತ್ತಿರುವ ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ನಗರದಲ್ಲಿ ಉತ್ಪತ್ತಿಯಾಗುವ ಕಸವನ್ನು ರಾತ್ರಿ ವೇಳೆ ಇಲ್ಲಿನ ಕ್ವಾರಿಗಳಲ್ಲಿ  ಹಾಕುತ್ತಿದ್ದಾರೆ. ಇದರಿಂದ ಮೀಟಗಾನಹಳ್ಳಿ, ಕಣ್ಣೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ತೊಂದರೆ ಉಂಟಾಗುತ್ತಿದೆ. ದುರ್ವಾಸನೆ ಹಾಗೂ ಸೊಳ್ಳೆಗಳ ಹಾವಳಿಯಿಂದ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಬದುಕುವಂತಾಗಿದೆ’ ಎಂದು ಕಣ್ಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಲ್.ಭಕ್ತಪಾಲ್ ದೂರಿದರು.

‘ಈ ಭಾಗದ ಅಂತರ್ಜಲ ಕಲುಷಿತಗೊಂಡಿದೆ. ಎಲ್ಲೇ ಕೊಳವೆಬಾವಿ ಕೊರೆಸಿದರೂ ಕೆಟ್ಟ ನೀರು ಬರುತ್ತಿದೆ. ಹೀಗಾಗಿ ಕಸ ಹಾಕುವುದನ್ನು ನಿಲ್ಲಿಸಬೇಕು. ಈಗಾಗಲೇ ಹಾಕಿರುವ ಕಸವನ್ನು ಕೂಡಲೇ ತೆರವುಗೊಳಿಸಬೇಕು’ ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry