‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ಟ್ರೇಲರ್‌ಗೆ ಮೋದಿ ಪ್ರಶಂಸೆ

7

‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ಟ್ರೇಲರ್‌ಗೆ ಮೋದಿ ಪ್ರಶಂಸೆ

Published:
Updated:
‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ಟ್ರೇಲರ್‌ಗೆ ಮೋದಿ ಪ್ರಶಂಸೆ

ನವದೆಹಲಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ಸಿನಿಮಾದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರೇಪಣೆ ಪಡೆದು ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ಚಿತ್ರ ಮಾಡಲಾಗಿದೆ. ಸ್ವಚ್ಛತೆ ಬಗ್ಗೆ ಉತ್ತಮ ಸಂದೇಶ ಬಿತ್ತರಿಸಲಾಗುತ್ತಿದೆ. ಇದೊಂದು ಅತ್ಯುತ್ತಮ ಪ್ರಶಂಸನೀಯ ಕಾರ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.‌

ದೇಶದ 125 ಕೋಟಿ ಜನರು ಸ್ವಚ್ಛ ಭಾರತಕ್ಕಾಗಿ ಕೈ ಜೋಡಿಸಿ ಕೆಲಸವನ್ನು ಮುಂದುವರಿಸಬೇಕು ಎಂದು ಮೋದಿ ಅವರು ಟ್ವೀಟ್‌ ಮಾಡಿದ್ದಾರೆ. 

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದ ಅಕ್ಷಯ್ ಕುಮಾರ್ ಚಿತ್ರದ ಕುರಿತು ಅವರೊಂದಿಗೆ ಚರ್ಚಿಸಿದ್ದರು .

‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ಚಿತ್ರವನ್ನು ಶ್ರೀ ನಾರಾಯಣ ಸಿಂಗ್ ನಿರ್ದೇಶಿಸಿದ್ದು, ಪ್ರೇಮ ಕಥೆಯೊಂದಿಗೆ ಸ್ವಚ್ಛ ಭಾರತ ಅಭಿಯಾನದ ವೈಫಲ್ಯಗಳನ್ನು ಬಿಂಬಿಸುವ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ. ಅಕ್ಷಯ್ ಕುಮಾರ್‌ಗೆ ಜೋಡಿಯಾಗಿ ಭೂಮಿ ಪಡ್ನೇಕರ್ ನಟಿಸಿದ್ದಾರೆ.

ಅನುಪಮ್ ಖೇರ್ ಮತ್ತು ಸನಾ ಖಾನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ಆಗಸ್ಟ್‌ 11ರಂದು ಬಿಡುಗಡೆಯಾಗಲಿದೆ.

ಭಾನುವಾರ ಯುಟ್ಯೂಬ್‌ನಲ್ಲಿ ಬಿಡುಗಡೆಯಾದ ಟ್ರೇಲರ್‌ ಈವರೆಗೆ 11 ಲಕ್ಷ 78 ಸಾವಿರ ಮಂದಿ ವೀಕ್ಷಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry