ಹಾಲು ತರಲು ಹೋಗಿದ್ದ ಯುವತಿ ಮೇಲೆ ಅತ್ಯಾಚಾರ: ಆರೋಪಿ ಬಂಧನ

7

ಹಾಲು ತರಲು ಹೋಗಿದ್ದ ಯುವತಿ ಮೇಲೆ ಅತ್ಯಾಚಾರ: ಆರೋಪಿ ಬಂಧನ

Published:
Updated:
ಹಾಲು ತರಲು ಹೋಗಿದ್ದ ಯುವತಿ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಕಾರವಾರ: ಹಾಲು ತರಲು ಮನೆಯೊಂದಕ್ಕೆ ಹೋಗಿದ್ದ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಹೊನ್ನಾವರ ತಾಲ್ಲೂಕಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ.

21 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಲಾಗಿದೆ. ಈ ಸಂಬಂಧ ಹೊನ್ನಾವರ ಠಾಣಾ ಪೊಲೀಸರು ಆರೋಪಿ ಸುಬ್ರಹ್ಮಣ್ಯ ರೊಬೆಲ್ ಶೆಟ್ಟಿ (29)ಯನ್ನು ಬಂಧಿಸಿದ್ದಾರೆ.

ಎರಡು ದಿನಗಳ ಹಿಂದೆ ಘಟನೆ ನಡೆದಿದೆ. ಆರೋಪಿಯ ಮನೆಗೆ ಹಾಲು ತರಲು ಬಂದಿದ್ದಾಗ ಅತ್ಯಾಚಾರ ಎಸಗಿರುವ ಕುರಿತು ಆರೋಪಿಸಲಾಗಿದೆ.

ಈ ಸಂಬಂಧ ಹೊನ್ನಾವರ ಠಾಣೆಗೆ ಯುವತಿಯ ತಾಯಿ ದೂರು ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry