ಕ್ರಿಕೆಟ್‌ ತಂಡದ ನಾಯಕರೊಂದಿಗೆ ಸೆಲ್ಫಿ: ಚರ್ಚೆಗೆ ಗ್ರಾಸವಾದ ನಿರೂಪಕಿ ಝೈನಬ್‌ ಅಬ್ಬಾಸ್‌

7

ಕ್ರಿಕೆಟ್‌ ತಂಡದ ನಾಯಕರೊಂದಿಗೆ ಸೆಲ್ಫಿ: ಚರ್ಚೆಗೆ ಗ್ರಾಸವಾದ ನಿರೂಪಕಿ ಝೈನಬ್‌ ಅಬ್ಬಾಸ್‌

Published:
Updated:
ಕ್ರಿಕೆಟ್‌ ತಂಡದ ನಾಯಕರೊಂದಿಗೆ ಸೆಲ್ಫಿ: ಚರ್ಚೆಗೆ ಗ್ರಾಸವಾದ ನಿರೂಪಕಿ ಝೈನಬ್‌ ಅಬ್ಬಾಸ್‌

ಲಂಡನ್‌: ಟೀಂ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಹಾಗೂ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್‌ ಎ.ಬಿ. ಡಿವಿಲಿಯರ್ಸ್‌ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಸುದ್ದಿಯಾಗಿದ್ದ ಪಾಕಿಸ್ತಾನದ ಟಿ.ವಿ ನಿರೂಪಕಿ ಝೈನಬ್‌ ಅಬ್ಬಾಸ್‌ ಮತ್ತೆ ತಮ್ಮ ಹವ್ಯಾಸವನ್ನು ಮುಂದುವರಿಸಿದ್ದಾರೆ.

ಹೌದು ಈ ಬಾರಿ ಶ್ರೀಲಂಕಾ ತಂಡದ ನಾಯಕ ಮ್ಯಾಥ್ಯೂಸ್ ಅವರೊಂದಿಗೆ ಸೆಲ್ಫಿ ತೆಗಿಸಿಕೊಂಡಿದ್ದು, ಇದೀಗ ವ್ಯಾಪಕ ಚರ್ಚೆಗೆ ಕಾರಣರಾಗಿದ್ದಾರೆ.

ಸೋಮವಾರ ಕಾರ್ಡಿಫ್‌ನಲ್ಲಿ ನಡೆದ ಶ್ರೀಲಂಕಾ– ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಪಾಕ್‌ ಲಂಕಾ ವಿರುದ್ಧ 3 ವಿಕೆಟ್‌ ಜಯ ಸಾಧಿಸಿ ಸೆಮಿ ಫೈನಲ್ ಪ್ರವೇಶಿಸಿದೆ. 

ಪಂದ್ಯ ಆರಂಭಕ್ಕೂ ಮುನ್ನ ಝೈನಬ್‌ ಅಬ್ಬಾಸ್‌ ಶ್ರೀಲಂಕಾ ತಂಡದ ನಾಯಕ ಮ್ಯಾಥ್ಯೂಸ್ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.

ಜೂನ್‌ 11ರಂದು ಭಾರತ– ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದ ವೇಳೆ ಟೀಂ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಹಾಗೂ ದಕ್ಷಿಣ ಆಫ್ರಿಕಾ ತಂಡದ ನಾಯಕ ಎಬಿ ಡಿವಿಲಿರ್ಯಸ್‌ ಅವರೊಂದಿಗೆ ಝೈನಬ್‌ ಅಬ್ಬಾಸ್‌ ಸೆಲ್ಫಿ ತೆಗಿಸಿಕೊಂಡಿದ್ದರು. ಆದರೆ, ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಸೋತಿತ್ತು.

ಈ ಪಂದ್ಯದಲ್ಲಿ ಕೊಹ್ಲಿ ಹಾಗೂ ಡಿವಿಲಿರ್ಯಸ್‌ ಇಬ್ಬರು ಶೂನ್ಯಕ್ಕೆ ಔಟ್‌ ಆಗಿದ್ದರು. ಇದೀಗ ಶ್ರೀಲಂಕಾ ತಂಡದ ಸೋಲಿಗೂ ಝೈನಬ್‌ ಅಬ್ಬಾಸ್‌ ಅವರೇ ಕಾರಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್‌ ಅಭಿಮಾನಿಗಳ ಟೀಕೆಗೆ ಗುರಿಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry