ಶೀಘ್ರವೇ ಅಲ್ಪ ಬದಲಾವಣೆಯೊಂದಿಗೆ ₹500ರ ನೋಟು ಚಲಾವಣೆಗೆ: ಆರ್‌ಬಿಐ

7

ಶೀಘ್ರವೇ ಅಲ್ಪ ಬದಲಾವಣೆಯೊಂದಿಗೆ ₹500ರ ನೋಟು ಚಲಾವಣೆಗೆ: ಆರ್‌ಬಿಐ

Published:
Updated:
ಶೀಘ್ರವೇ ಅಲ್ಪ ಬದಲಾವಣೆಯೊಂದಿಗೆ ₹500ರ ನೋಟು ಚಲಾವಣೆಗೆ: ಆರ್‌ಬಿಐ

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ(ಆರ್‌ಬಿಐ) ಶೀಘ್ರವೇ ಅಲ್ಪ ಬದಲಾವಣೆಯೊಂದಿಗೆ ಹೊಸ ₹500ರ ನೋಟನ್ನು ಬಿಡುಗಡೆ ಮಾಡುವುದಾಗಿ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.

₹500 ಮುಖಬೆಲೆ ನೋಟಿನ ಮುಂಭಾಗದಲ್ಲಿ ‘ಎ’ ಸಂಖ್ಯೆಯ ಸರಣಿಯನ್ನು ಒಳಗೊಂಡಿರಲಿದ್ದು, ಹೊಸ ನೋಟು ಹಾಗೂ ಹಳೆಯ ನೋಟಿನ ನಡುವೆ ಸಾಮಾನ್ಯ ಹೋಲಿಕೆ ಇರಲಿದೆ ಎಂದು ಆರ್‌ಬಿಐ ತಿಳಿಸಿದೆ.

2016ರ ನವೆಂಬರ್‌ 8ರಂದು ಆರ್‌ಬಿಐ ₹ 500, ₹ 1000 ಮುಖಬೆಲೆ ನೋಟುಗಳನ್ನು ರದ್ದು ಮಾಡಿ. ಹೊಸ ₹ 500 ಹಾಗೂ ₹ 2000 ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಿತ್ತು.

ಭ್ರಷ್ಟಚಾರ ಹಾಗೂ ಕಪ್ಪು ಹಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ  ಕೇಂದ್ರ ಸರ್ಕಾರ ನೋಟು ರದ್ದತಿ ಕ್ರಮವನ್ನು ಕೈಗೊಂಡಿತ್ತು.

ಪ್ರಸುತ್ತ ಚಾಲ್ತಿಯಲ್ಲಿರುವ ₹ 500ರ ನೋಟಿನ ಚಲಾವಣೆಯ ಬಗ್ಗೆ ಗೊಂದಲ ಬೇಡ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ಹೊಸ ₹500 ನೋಟಿನ ಲಕ್ಷಣಗಳು: ಮಹಾತ್ಮ ಗಾಂಧಿಯ ಭಾವಚಿತ್ರ, ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ಅವರ ಸಹಿ, ಪ್ರಸಕ್ತ ವರ್ಷ 2017, ಹಾಗೂ ಎರಡೂ ಬದಿ ನೋಟಿನ ಸಂಖ್ಯೆಯ ಆರಂಭದಲ್ಲಿ ‘ಎ’ ಅಕ್ಷರದಿಂದ ಪ್ರಾರಂಭವಾಗುವ ಅಂಶಗಳನ್ನು ಒಳಗೊಂಡ ನೋಟುಗಳನ್ನು ಮುದ್ರಿಸಲಾಗಿರುತ್ತದೆ ಎಂದು ಆರ್‌ಬಿಐ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry