ಮ್ಯೂನಿಚ್‌ ರೈಲು ನಿಲ್ದಾಣದಲ್ಲಿ ಗುಂಡಿನ ದಾಳಿ: ಹಲವರಿಗೆ ಗಾಯ

7

ಮ್ಯೂನಿಚ್‌ ರೈಲು ನಿಲ್ದಾಣದಲ್ಲಿ ಗುಂಡಿನ ದಾಳಿ: ಹಲವರಿಗೆ ಗಾಯ

Published:
Updated:
ಮ್ಯೂನಿಚ್‌ ರೈಲು ನಿಲ್ದಾಣದಲ್ಲಿ ಗುಂಡಿನ ದಾಳಿ: ಹಲವರಿಗೆ ಗಾಯ

ಮ್ಯೂನಿಚ್‌(ಜರ್ಮನಿ): ನಗರದ ಉತ್ತರ ಭಾಗದಲ್ಲಿರುವ ಬವೇರಿಯನ್‌ ಉಪನಗರದ ಎಸ್‌–ಬಾಹ್ನ್‌ ರೈಲು ನಿಲ್ದಾಣದಲ್ಲಿ ಅಪರಿಚಿತ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಹಲವರು ಗಾಯಗೊಂಡಿದ್ದಾರೆ.

ಮಂಗಳವಾರ ನಡೆದಿರುವ ಈ ಘಟನೆಯಲ್ಲಿ ಮಹಿಳಾ ಪೊಲೀಸ್‌ ಒಬ್ಬರು ಗಾಯಗೊಂಡಿದ್ದು, ದಾಳಿಕೋರನನ್ನು ಬಂಧಿಸಲಾಗಿದೆ.

ಈ ಬಗ್ಗೆ ಟ್ವೀಟರ್‌ ಮೂಲಕ ಪ್ರತಿಕ್ರಿಯೆ ನೀಡಿರುವ ಮ್ಯೂನಿಚ್‌ ಪೋಲೀಸರು, ‘ದಾಳಿಯಿಂದಾಗಿ ಹಲವರಿಗೆ ಗಾಯಗಳಾಗಿದ್ದು, ಒಬ್ಬ ಮಹಿಳಾ ಪೊಲೀಸ್‌  ತೀವ್ರವಾಗಿ ಗಾಯಗೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.

ಕಾರ್ಯಾಚರಣೆ ವೇಳೆ ದಾಳಿಕೋರನ ಪಿಸ್ತೂಲನ್ನು ವಶಕ್ಕೆ ಪಡೆಯಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry