ಫೈನಲ್‌ ಪಂದ್ಯದಲ್ಲಿ ‘ಭಾರತ–ಇಂಗ್ಲೆಂಡ್‌’ ತಂಡಗಳ ಪೈಪೋಟಿ ಪ್ರತಿಯೊಬ್ಬರ ಅಶಯ: ವಿರಾಟ್‌ ಕೊಹ್ಲಿ

7

ಫೈನಲ್‌ ಪಂದ್ಯದಲ್ಲಿ ‘ಭಾರತ–ಇಂಗ್ಲೆಂಡ್‌’ ತಂಡಗಳ ಪೈಪೋಟಿ ಪ್ರತಿಯೊಬ್ಬರ ಅಶಯ: ವಿರಾಟ್‌ ಕೊಹ್ಲಿ

Published:
Updated:
ಫೈನಲ್‌ ಪಂದ್ಯದಲ್ಲಿ ‘ಭಾರತ–ಇಂಗ್ಲೆಂಡ್‌’ ತಂಡಗಳ ಪೈಪೋಟಿ ಪ್ರತಿಯೊಬ್ಬರ ಅಶಯ: ವಿರಾಟ್‌ ಕೊಹ್ಲಿ

ಲಂಡನ್‌: ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ– ಇಂಗ್ಲೆಂಡ್‌ ಉಭಯ ತಂಡಗಳ ಈಗಾಗಲೇ ಸೆಮಿಫೈನಲ್‌ ಪ್ರವೇಶಿಸಿವೆ.

ಇದರ ಬೆನಲ್ಲೇ ಟೀಂ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ‘ಫೈನಲ್‌ ಪಂದ್ಯದಲ್ಲಿ ಭಾರತ– ಇಂಗ್ಲೆಂಡ್‌ ತಂಡಗಳು ಮುಖಾಮುಖಿಯಾಗುವುದು ಪ್ರತಿಯೊಬ್ಬರ ಅಶಯವಾಗಿದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕಾರ್ಡಿಫ್‌ನಲ್ಲಿ ಬುಧವಾರ ನಡೆಯಲಿರುವ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ –ಪಾಕಿಸ್ತಾನ ತಂಡಗಳು ಗೆಲುವಿಗಾಗಿ ಹೋರಾಟ ನಡೆಸಲಿವೆ. ಅದೇ ರೀತಿ ಗುರುವಾರ ಎಡ್ಜ್‌ಬಾಸ್ಟನ್‌ನಲ್ಲಿ ಭಾರತ– ಬಾಂಗ್ಲಾದೇಶ ತಂಡಗಳು ನಡುವೆ ಎರಡನೇ ಸೆಮಿಫೈನಲ್‌ ಪಂದ್ಯ ನಡೆಯಲಿದೆ.

ಸೋಮವಾರ ಲಾಡ್ಸ್‌ ಕ್ರಿಕೆಟ್‌ ಅಂಗಳದಲ್ಲಿ ಭಾರತ– ಇಂಗ್ಲೆಂಡ್‌ ನಡುವಿನ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭಾರತೀಯ ಹೈಕಮಿಷನ್ ವಿಶೇಷ ಔತಣ ಕೂಟವನ್ನು ಏರ್ಪಡಿಸಿತ್ತು. ಕಾರ್ಯಕ್ರಮ ವಿರಾಟ್‌ ಕೊಹ್ಲಿ ಸೇರಿದಂತೆ ಎಂ.ಎಸ್‌.ದೋನಿ, ಶಿಖರ್‌ ಧವನ್‌, ರಹಾನೆ, ಭುವನೇಶ್ವರ್‌ ಕುಮಾರ್‌, ಕೋಚ್‌ ಅಬಿಲ್‌ ಕುಂಬ್ಳೆ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕೋಹ್ಲಿ, ‘ಈ ಬಾರಿಯ ಚಾಂಪಿಯನ್ಸ್‌ ಟ್ರೋಫಿಯ ಲೀಗ್‌ ಪಂದ್ಯಗಳು ಕಠಿಣವಾಗಿತ್ತು. ಸೆಮಿಫೈನಲ್‌ ಪಂದ್ಯದಲ್ಲಿ ಬಾಂಗ್ಲಾ ಎದುರು ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸುವುದು ನಮ್ಮ ಗುರಿಯಾಗಿದೆ’ ಎಂದಿದ್ದಾರೆ.

‘ಫೈನಲ್‌ ಪಂದ್ಯ ಭಾರತ– ಇಂಗ್ಲೆಂಡ್‌ ತಂಡಗಳು ಮುಖಾಮುಖಿಯಾಗುವುದು ಪ್ರತಿಯೊಬ್ಬರ ಅಶಯವಾಗಿದೆ’ ಎಂದರು.

‘ಎರಡು ದೇಶಗಳ ನಡುವೆ ಉತ್ತಮ ಸಂಪರ್ಕ ಏರ್ಪಡುವ ನಿಟ್ಟಿನಲ್ಲಿ ಕ್ರಿಕೆಟ್‌ ಪ್ರಮುಖ ಪಾತ್ರವಹಿಸುತ್ತದೆ. ಚಾಂಪಿಯನ್ಸ್‌ ಟ್ರೋಫಿಯ ಫೈನಲ್‌ ಪಂದ್ಯದಲ್ಲಿ ಭಾರತ– ಇಂಗ್ಲೆಂಡ್‌ ತಂಡಗಳು ಮುಖಾಮುಖಿಯಾಗಲಿವೆ ಎನ್ನುವುದು ಎಲ್ಲರ ನಿರೀಕ್ಷೆಯಾಗಿದೆ, ಆದರಂತೆ ಉತ್ತಮ ಪ್ರದರ್ಶನ ತೋರುವ ತಂಡ ಜಯಶಾಲಿಯಾಗಲಿದೆ’ ಎಂದು ಭಾರತದ ಹೈಕಮೀಷನರ್‌ ಯಶ್‌ವರ್ಧನ್‌ ಸಿಂಗ್‌ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry