ಮನೆ ಮದ್ದು ಡೌನ್‌ಲೋಡ್‌ ಮಾಡ್ಕೊಳ್ಳಿ!

7

ಮನೆ ಮದ್ದು ಡೌನ್‌ಲೋಡ್‌ ಮಾಡ್ಕೊಳ್ಳಿ!

Published:
Updated:
ಮನೆ ಮದ್ದು ಡೌನ್‌ಲೋಡ್‌ ಮಾಡ್ಕೊಳ್ಳಿ!

ಈಗಂತೂ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ. ಎಷ್ಟು ಕಾಳಜಿ ವಹಿಸಿದರೂ ಸಾಲದು ಎಂಬಂತಾಗಿದೆ. ಆರೋಗ್ಯದ ಕಾಳಜಿ ಹೇಗಿರಬೇಕು. ಚಿಕ್ಕಪುಟ್ಟ ಸಮಸ್ಯೆಗಳಿಗೆ ಮನೆಯಲ್ಲಿ ಮದ್ದು ಮಾಡುವುದು ಹೇಗೆ ಎಂಬುದನ್ನು ತಿಳಿಸುತ್ತದೆ ‘ಆರೋಗ್ಯ ಸಲಹೆಗಳು’ (Health Tips In Kannada)  ಆ್ಯಪ್‌.

ಈ ಆ್ಯಪ್ ಬಹಳ ಉಪಯುಕ್ತವಾಗಿದ್ದು, ಹಲವು ಆರೋಗ್ಯದ ಸಮಸ್ಯೆಗಳಿಗೆ ಮನೆ ಮದ್ದನ್ನು ತಿಳಿಸುತ್ತದೆ.

ಕಡಿಮೆ ರಕ್ತದೊತ್ತಡ, ತೀವ್ರ ರಕ್ತದೊತ್ತಡ, ಅಸ್ತಮಾ, ಶೀತ ಮತ್ತು ಕೆಮ್ಮು, ತಲೆ ನೋವು, ಕಣ್ಣಿನ ಆರೈಕೆ, ನಿದ್ರಾಹೀನತೆ, ಕೂದಲು ಉದುರುವುದು, ಹಲ್ಲುನೋವು, ಬೆನ್ನು ನೋವಿನ ಸಮಸ್ಯೆಗಳಿಗೆ ಯಾವೆಲ್ಲ ಔಷಧಿಗಳಿವೆ ಎಂಬ ಮಾಹಿತಿ ಇದರಲ್ಲಿದೆ.

ಆರೋಗ್ಯದ ಸಮಸ್ಯೆಗಳಿಗೆ ನಿರ್ಲಕ್ಷ್ಯ ಮಾಡದಿರಿ, ಆರೋಗ್ಯದಲ್ಲಿ ಏರುಪೇರು ಆದ ತಕ್ಷಣಕ್ಕೆ ಮದ್ದನ್ನು ಮಾಡಿ ಎಂಬ ಸಲಹೆಯೂ ಇದರಲ್ಲಿದೆ.

ಸುಲಭವಾಗಿ ಮನೆಯಲ್ಲಿ ಹೇಗೆ ಮದ್ದು ತಯಾರಿಸುವುದು ಎಂಬುದನ್ನು ತಿಳಿಸಲಾಗಿದೆ. ನಿಯಮಿತ ವ್ಯಾಯಾಮದಿಂದ ಆರೋಗ್ಯ ಸಮಸ್ಯೆ ಯಿಂದ ಮುಕ್ತಿ ಪಡೆಯುವ ಬಗ್ಗೆ ತಿಳಿಸಲಾಗಿದೆ. 

ಕಂಪ್ಯೂಟರ್‌, ಟಿವಿ ನೋಡುವುದರಿಂದ ಈಗಿನವರಲ್ಲಿ ಕಣ್ಣಿನ ಸಮಸ್ಯೆ ಹೆಚ್ಚು.  ಕಣ್ಣಿಗೆ ಆಯಾಸವಾಗದಂತೆ ಕೆಲಸ ಮಾಡುವುದು ಹೇಗೆ ಎಂಬ ವಿವರವೂ ಇದರಲ್ಲಿದೆ. ಹತ್ತು ಸಾವಿರ ಮಂದಿ ಇದನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry