ನಟನೆಯ ಜೊತೆ ಹವ್ಯಾಸದ ಹಾದಿ

7

ನಟನೆಯ ಜೊತೆ ಹವ್ಯಾಸದ ಹಾದಿ

Published:
Updated:
ನಟನೆಯ ಜೊತೆ ಹವ್ಯಾಸದ ಹಾದಿ

ಅಕ್ಷಯ್‌ ಕುಮಾರ್‌: ನಟನಾ ಕ್ಷೇತ್ರಕ್ಕೆ ಬರುವ ಮುಂಚೆ ಶೆಫ್‌ ಆಗಿದ್ದವರು ಅಕ್ಷಯ್‌. ಹೀಗಾಗಿ ಇವರು ರುಚಿಯಾದ ಅಡುಗೆ ಮಾಡಬಲ್ಲರು.  ಇದರ ಜೊತೆಗೆ ಸಮರ ಕಲೆಗಳಲ್ಲೂ ಇವರು ಪರಿಣಿತಿ ಪಡೆದಿದ್ದಾರೆ.  ಅಕ್ಷಯ್‌ ಉತ್ತಮ ಛಾಯಾಗ್ರಾಹಕ ಎಂಬುದು ಬಹಳ ಮಂದಿಗೆ ತಿಳಿದಿರಲಿಕ್ಕಿಲ್ಲ.

**

ಜೂಹಿ ಚಾವ್ಲಾ: ಶಾಸ್ತ್ರೀಯ ಸಂಗೀತದ ಜೊತೆಗೆ ಕಥಕ್‌ ನೃತ್ಯ ಕಲಾವಿದೆ ಜೂಹಿ. ಎಷ್ಟೇ ಬ್ಯುಸಿಯಾಗಿದ್ದರೂ, ಇವರು ಬೆಳಿಗ್ಗೆ ಸಂಗೀತಾಭ್ಯಾಸ ತಪ್ಪಿಸುವುದಿಲ್ಲ. ಇವರು ಮೂರು ವರ್ಷ ಕಥಕ್‌ ಮತ್ತು ಆರು ವರ್ಷ ಸಂಗೀತಾಭ್ಯಾಸ ಮಾಡಿದ್ದಾರೆ.

**

ವಿದ್ಯಾ ಬಾಲನ್‌: ಇವರು ಒಳ್ಳೆಯ ಕವಯಿತ್ರಿ ಕೂಡ. ಮನಸ್ಸಿನ  ತುಮುಲಗಳನ್ನು ಪದಗಳಲ್ಲಿ ಸೆರೆಹಿಡಿಯುವುದು ಇವರಿಗೆ ಇಷ್ಟವಂತೆ. ಹಾಗಾಗಿ  ಬಿಡುವು ದೊರಕಿದಾಗಲೆಲ್ಲ ಪೆನ್ನು, ಪೇಪರ್‌ ಹಿಡಿದು ಕವನ ಬರೆಯಲು ಆರಂಭಿಸುತ್ತಾರೆ. ಇದರ ಜೊತೆಗೆ ಮಿಮಿಕ್ರಿ ಕೂಡ ಮಾಡುತ್ತಾರೆ!

**

ರಣದೀಪ್‌ ಹೂಡಾ: ಪ್ರತಿಭಾವಂತ ನಟ ರಣದೀಪ್‌ ಹೂಡಾ ಉತ್ತಮ ಪೋಲೊ ಆಟಗಾರ. ಬಿಡುವು ಸಿಕ್ಕಾಗಲೆಲ್ಲ ಇವರು ಕುದುರೆ ಏರಿ ಆಟದ ಅಂಗಳಕ್ಕೆ ಇಳಿಯುತ್ತಾರೆ. ಶಾಲಾ ದಿನಗಳಲ್ಲಿ ಇವರು ಈಜು ಸೇರಿದಂತೆ ಹಲವು ಕ್ರೀಡಾ ಚಟುವಟಿಕೆಗಳಲ್ಲಿ ಲೆಕ್ಕವಿಲ್ಲದಷ್ಟು ಪದಕಗಳನ್ನು ಗೆದಿದ್ದರು.

**

ಅಮೀರ್‌ ಖಾನ್‌: ಮಿಸ್ಟರ್‌ ಪರ್ಫೆಕ್ಟ್‌ ಎಂದು ಜನಪ್ರಿಯರಾಗಿರುವ ಅಮೀರ್‌ ಉತ್ತಮ ಚೆಸ್‌ ಆಟಗಾರ. ಚೆಸ್‌ ಮಾಂತ್ರಿಕ ವಿಶ್ವನಾಥನ್‌ ಆನಂದ್‌ಗೆ ಸಡ್ಡು ಹೊಡೆಯುವ ರೀತಿಯಲ್ಲಿ ಹಿಂದೊಮ್ಮೆ ಅಮೀರ್‌ ಚೆಸ್‌ ಆಡಿ ಸುದ್ದಿಯಾಗಿದ್ದರು. ಇವರ ಆಟದ ಮೋಡಿಗೆ ಮರುಳಾಗಿದ್ದ ವಿಶ್ವನಾಥನ್‌, ‘ಅಮೀರ್‌ ಅದ್ಭುತ ಚೆಸ್‌ ಆಟಗಾರ. ಆಟದ ಕೊನೆಯವರೆಗೂ ಸಮಬಲ ಪ್ರದರ್ಶನ ನೀಡಿದರು’ ಎಂದು ಮೆಚ್ಚುಗೆಯ ಮಾತನ್ನಾಡಿದ್ದರು.

**

ಸೈಫ್‌ ಅಲಿ ಖಾನ್‌: ಹಲವು ಬಾರಿ ಗಿಟಾರ್‌ ಹಿಡಿದು ಸೈಫ್‌ ವೇದಿಕೆ ಏರಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಸೈಫ್‌್ ಕಾಲೇಜು ದಿನಗಳಲ್ಲಿ ಹುಡುಗಿಯರನ್ನು ಇಂಪ್ರೆಸ್‌ ಮಾಡಲು ಗಿಟಾರ್‌ ನುಡಿಸುತ್ತಿದ್ದರಂತೆ. ‘ಹಲವು ಕಾರ್ಯಕ್ರಮಗಳಲ್ಲಿ ಗಿಟಾರ್‌ ನುಡಿಸಿ ಹೆಂಗಳೆಯರ ಮನ ಗೆದ್ದಿದ್ದೇನೆ’ ಎಂದು ಅಭಿಮಾನದಿಂದ ಹೇಳಿಕೊಳ್ಳುತ್ತಾರೆ ಸೈಫ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry