ಕಡಿಮೆ ಕುಡಿದರೂ ಕಂಟಕ ತಪ್ಪದು

7

ಕಡಿಮೆ ಕುಡಿದರೂ ಕಂಟಕ ತಪ್ಪದು

Published:
Updated:
ಕಡಿಮೆ ಕುಡಿದರೂ ಕಂಟಕ ತಪ್ಪದು

ಮಿತವಾದ ಮದ್ಯ ಸೇವನೆಯೂ ಆರೋಗ್ಯಕ್ಕೆ ಹಾನಿಕಾರಕವೇ ಎಂಬ ಸಂಗತಿ ಹೊಸ ಅಧ್ಯಯನದಿಂದ ಗೊತ್ತಾಗಿದೆ.

ಅತಿಯಾದ ಕುಡಿತದಿಂದ ಕ್ಯಾನ್ಸರ್‌ ಸೇರಿದಂತೆ ವಿವಿಧ ಕಾಯಿಲೆಗಳು ಬರುವುದು ಈಗಾಗಲೇ ಗೊತ್ತಿರುವ ವಿಷಯ. ಆದರೆ ಮಿತವಾದ ಕುಡಿತವೂ ಹಲವು ಗಂಭೀರ ಕಾಯಿಲೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ. 

ಮೆದುಳಿಗೆ ಸಂಬಂಧಿಸಿದ ಕಾಯಿಲೆ, ಮರೆವು, ಚಿತ್ತ ವ್ಯತ್ಯಾಸದಂತಹ ಸಮಸ್ಯೆಗಳು ಮಿತವಾಗಿ ಕುಡಿಯುವವರನ್ನೂ ಕಾಡಲಿವೆ.

ಬಿಜಿಎಂ ಎಂಬ ವೈದ್ಯಕೀಯ ಪತ್ರಿಕೆ ಪ್ರಕಟಿಸಿರುವ ವರದಿಯ ಪ್ರಕಾರ ದಶಕದಿಂದ ವಾರದಲ್ಲಿ ಒಮ್ಮೆ ಮಾತ್ರ ನಿಗದಿತ ಪ್ರಮಾಣದಲ್ಲಿ ಮದ್ಯ ಸೇವಿಸುವ ವಿವಿಧ ವಯೋಮಾನದವರ ಬಗ್ಗೆ ನಡೆಸಲಾದ ಅಧ್ಯಯನದಿಂದ  ಈ ವಿಷಯ ತಿಳಿದುಬಂದಿದೆ. ಮೆದುಳಿಗೆ ಸಂಬಂಧಿಸಿದ ಕಾಯಿಲೆಯ ಜೊತೆಗೆ ಉಚ್ಛಾರಣೆ ಸಮಸ್ಯೆ ಮತ್ತು ಲೈಂಗಿಕ ಸಮಸ್ಯೆಗಳು ಮಿತ ಮದ್ಯಪಾನಿಗಳನ್ನೂ ಕಾಡಲಿವೆ. ಕೆಲವು ಮುಂದುವರೆದ ದೇಶಗಳು ಮದ್ಯದಲ್ಲಿನ ಆಲ್ಕೊಹಾಲ್ ಪ್ರಮಾಣವನ್ನು ಕಡಿಮೆ ಮಾಡಿದ ಬೆನ್ನಲ್ಲೇ ಈ ಅಧ್ಯಯನ ನಡೆಸಲಾಗಿತ್ತು. ಆಲ್ಕೊಹಾಲ್ ಪ್ರಮಾಣ ಕಡಿಮೆ ಮಾಡುವುದರಿಂದ ಆರೋಗ್ಯ ಸುಧಾರಣೆಗೆ ಹೆಚ್ಚೇನೂ  ಉಪಯೋಗವಾಗದು ಎಂಬುದನ್ನು ಮನಗಾಣಿಸುವ ಉದ್ದೇಶದಿಂದ ಈ ಅಧ್ಯಯನ ಮಾಡಲಾಗಿತ್ತು. ಕಳೆದ ವರ್ಷ ಬ್ರಿಟನ್ ಸರ್ಕಾರ ಮದ್ಯ ಸೇವನೆ ಪ್ರಮಾಣವನ್ನು ಇಳಿಸಿ ಆದೇಶ ಹೊರಡಿಸಿತ್ತು. ಆದೇಶದ ಪ್ರಕಾರ ಬ್ರಿಟನ್ ನಾಗರಿಕರು ವಾರಕ್ಕೆ ಸೇವಿಸುವ ಮದ್ಯ, 196 ಗ್ರಾಂ ಆಲ್ಕೊಹಾಲ್ ಅನ್ನು ಅಷ್ಟೆ ಹೊಂದಿರಬೇಕು.

ಬೇರೆ ದೇಶಗಳಲ್ಲಿ ಈ ಪ್ರಮಾಣ ಬೇರೆ ಬೇರೆಯಾಗಿದೆ. ಸ್ಪೇನ್‌ನಲ್ಲಿ 490 ಗ್ರಾಂ ಆಲ್ಕೋಹಾಲ್‌, ಅಮೆರಿಕದಲ್ಲಿ 343 ಗ್ರಾಂ, ಡೆನ್ಮಾರ್ಕ್‌ನಲ್ಲಿ 294, ನ್ಯೂಜಿಲೆಂಡ್‌ನಲ್ಲಿ 266. ಆರೋಗ್ಯದ ದೃಷ್ಟಿಯಿಂದ ಸ್ಪೇನ್‌ ಹೊರತುಪಡಿಸಿ ಮೇಲಿನ ಎಲ್ಲ ದೇಶಗಳಲ್ಲಿ ಮಹಿಳೆಯರಿಗೆ ವಾರಕ್ಕೆ 196ಗ್ರಾಂ ಆಲ್ಕೊಹಾಲ್‌ ಹೊಂದಿದ ಮದ್ಯವನ್ನಷ್ಟೇ ಸೇವಿಸುವಂತೆ ನಿರ್ಬಂಧ ಹೇರಲಾಗಿದೆ. ಪ್ರಸ್ತುತ ಹೊಸ ಅಧ್ಯಯನದಿಂದ ಮಿತ ಮದ್ಯಪಾನಿಗಳೂ ಕಳವಳಕ್ಕೊಳಗಾಗಿದ್ದು, ಮದ್ಯಪಾನ ತ್ಯಜಿಸುವುದೊಂದೇ ಆರೋಗ್ಯ ಕಾಪಾಡಿಕೊಳ್ಳುವ ದಾರಿ ಎನಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry