ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗೈನಿಂದ ಹಾರಬಲ್ಲ ಸ್ಪಾರ್ಕ್‌ ಡ್ರೋನ್‌

Last Updated 13 ಜೂನ್ 2017, 19:30 IST
ಅಕ್ಷರ ಗಾತ್ರ

ಆಕಾಶದಲ್ಲಿ ಹಾರಾಡುವ ಡ್ರೋನ್‌ ಅನ್ನು ನೋಡಿ ಇದರ ವೆಚ್ಚ ಸಾಕಷ್ಟಿರಬಹುದು ಎಂದು ನೀವು ಅಂದುಕೊಂಡಿರಬಹುದು. ಸ್ವಲ್ಪ ತಾಳಿ. ಕಡಿಮೆ ವೆಚ್ಚದ ಡ್ರೋನ್‌ಗಳೂ ಶೀಘ್ರದಲ್ಲೇ ಸಿಗಲಿವೆ. ಅದರ ಬೆಲೆ ಐಫೋನ್‌ಗಳ ದರಕ್ಕಿಂತ ಅರ್ಧದಷ್ಟು ಕಡಿಮೆ ಇರಲಿದೆ.

ವಿಮಾನಗಳ ಪುಟ್ಟ ಪ್ರತಿಕೃತಿ (ಮಿನಿಯೇಚರ್‌) ಗಳಂತಿರುವ ಡ್ರೋನ್‌ಗಳನ್ನು ದೂರ ನಿಯಂತ್ರಣ ಸಾಧನದಿಂದ (ರಿಮೋಟ್‌) ಮೂಲಕ ನಿಯಂತ್ರಿಸಬಹುದು.

ವಿಶ್ವದಲ್ಲೇ ಅತಿದೊಡ್ಡ ಡ್ರೋನ್‌ ತಯಾರಕಾ ಕಂಪೆನಿ ಚೀನಾದ ಶೆನ್‌ಜೆನ್‌ನಲ್ಲಿರುವ ಡಿಜೆಐ ಇದೀಗ ‘ಸ್ಪಾರ್ಕ್‌ ಡ್ರೋನ್‌’ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ನಾನು ಈ ಡ್ರೋನ್‌ ಅನ್ನು ಪರೀಕ್ಷೆ ಮಾಡಿದ್ದೇನೆ. ನಿಜವಾಗಿಯೂ ಇದೊಂದು ಕಡಿಮೆ ವೆಚ್ಚದ ಡ್ರೋನ್‌. ಸಾಮಾನ್ಯವಾಗಿ ಎಲ್ಲ ಡ್ರೋನ್‌ಗಳನ್ನು ಕೈಯಲ್ಲಿ ಹಿಡಿದುಕೊಳ್ಳಬಹುದಾದ ರಿಮೋಟ್‌ಗಳ ಮೂಲಕ ನಿಯಂತ್ರಿಸುತ್ತಾರೆ. ಆದರೆ ‘499 ಡ್ರೋನ್‌’ ಸ್ಮಾರ್ಟ್‌ಫೋನ್‌ ಆ್ಯೊಪ್‌ನಿಂದಲೂ ಕೆಲಸ ಮಾಡಿಸಬಹುದು.

ಕೈಸನ್ನೆ ನೀಡಿದರೆ ಸೆಲ್ಫಿ ತೆಗೆಯುತ್ತದೆ. ಎಚ್‌ಡಿ ಗುಣಮಟ್ಟದ ವಿಡಿಯೊ ಮಾಡಿಕೊಡುತ್ತದೆ. ಇದರ ಬಳಕೆಯ ಮಾಹಿತಿ ಪುಸ್ತಕ ಓದಿಕೊಳ್ಳದೆ ಬಳಸುವುದು ಕಷ್ಟವಾಗುತ್ತದೆ. ಇದರ ಬ್ಯಾಟರಿ 15 ನಿಮಿಷಗಳವರೆಗೆ ಬರುತ್ತದೆ. ವೈಮಾನಿಕ ಚಿತ್ರಗಳನ್ನು ತೆಗೆಯಬಯಸುವವರಿಗೆ ಈ ಡ್ರೋನ್ ಅತಿಸೂಕ್ತ ಎಂದು ಶಿಫಾರಸು ಮಾಡಲು ನಾನು ಹಿಂದುಮುಂದು ನೋಡುವುದಿಲ್ಲ.

ಏನೇನು ಒಳಗೊಂಡಿದೆ

499 ಡ್ರೋನ್‌ ಪ್ರೊಫೆಲ್ಲರ್‌, ಮೋಟಾರ್ಸ್‌, ಒಂದು ಕ್ಯಾಮೆರಾ ಮತ್ತು ಬ್ಯಾಟರಿ ಒಳಗೊಂಡಿದೆ. ಇದನ್ನು ಸೆಟ್‌ ಮಾಡಲು ಬ್ಯಾಟರಿಯನ್ನು ಒಂದು ಬದಿಗೆ ಬಗ್ಗಿಸಿ, ಆನಂತರ ಸ್ಮಾರ್ಟ್‌ಫೋನ್‌ ಆ್ಯಪ್‌ ಅನ್ನು ಅಳವಡಿಸಬೇಕು. ಬಾರ್‌ಕೋಡ್‌ ಅನ್ನು ಸ್ಕ್ಯಾನ್‌ ಮಾಡಿ ವೈಫೈಗೆ ಸಂಪರ್ಕಿಸಬೇಕು. ಆನಂತರ ಆ್ಯಪ್‌ ಬಳಸಿ ಡ್ರೋನ್‌ ಸೆಟ್ಟಿಂಗ್‌ ಅನ್ನು ಬದಲಾಯಿಸಬಹುದು.

ಇದರಲ್ಲಿರುವ ಜಾಯ್‌ಸ್ಟಿಕ್‌ ಡ್ರೋನ್‌ ಅನ್ನು ಯಾವುದೇ ದಿಕ್ಕಿಗೆ ತಿರುಗಿಸಲು ಅನುಕೂಲವಾಗಿದೆ. ಮೊದಲಿಗೆ ಇದರ ಆ್ಯಪ್‌ ಕೆಲವು ಗೊಂದಲದಿಂದ ಕೂಡಿತ್ತು. ಆನಂತರ ಇದು ಪರಿಹಾರವಾಯಿತು.

ಇದರಲ್ಲಿ ಮತ್ತೊಂದು ಆಯ್ಕೆಯೂ ಇದೆ. ಅದುವೇ ಆ್ಯಪ್ ಅನ್ನು ಬಿಟ್ಟು ಕೆಲಸ ಮಾಡುವಂತೆ ಮಾಡುವುದು. ಕೈಯಿಂದಲೇ ಇದನ್ನು ನಿಯಂತ್ರಿಸುವುದು. ಈ ಮೋಡ್‌ನಲ್ಲಿ ಕೈಗಳ ಸನ್ನೆಯಂತೆ ಡ್ರೋನ್‌ ಕಾರ್ಯನಿರ್ವಹಿಸುತ್ತದೆ. ಮೊದಲಿಗೆ ಸ್ಪಾರ್ಕ್‌, ಕೈಗಳ ಸೂಚನೆಗಳಿಗೆ ಸರಿಯಾಗಿ ಕೆಲಸ ಮಾಡಲಿಲ್ಲ. ಕೆಲವು ವೇಳೆ ಸೂಚನೆಗಳನ್ನು ಗುರುತಿಸುವಲ್ಲಿ ವಿಫಲವಾಯಿತು.

ಹೊಸಬರಿಗೆ ಸೂಕ್ತ
ಸ್ಪಾರ್ಕ್ ಡ್ರೋನ್‌ ಹಲವು ವೈಶಿಷ್ಟ್ಯಗಳನ್ನು ಹೊಂದಿರುವುದರ ಜತೆಗೆ ಹೊಸಬರಿಗೆ ಇದು ಸೂಕ್ತವಾದುದು. ಇದರಲ್ಲಿರುವ ‘ಕ್ವಿಕ್‌ ಶಾಟ್‌’ ಮೆನು ಸ್ವಯಂಚಾಲಿತವಾಗಿದ್ದು, ಸಂದರ್ಭಕ್ಕೆ ತಕ್ಕಂತೆ ಚಲನೆಯನ್ನು ಬದಲಾಯಿಸಬಲ್ಲದು. ಇದು ವಿಡಿಯೊ ಮಾಡಲು ಅನುಕೂಲವಾಗುತ್ತದೆ. ವಿಷಯವನ್ನು ಆಯ್ಕೆ ಮಾಡಿಕೊಂಡರಾಯಿತು. ಅದು ಮನುಷ್ಯರಿಗೆ ಸಂಬಂಧಿಸಿದಾಗಿರಬಹುದು ಇಲ್ಲವೇ ಪ್ರಾಣಿಗಳ ವಿಡಿಯೊ ಆಗಿರಬಹುದು. ಕ್ವಿಕ್‌ಶಾಟ್‌ ಮೋಡ್‌ನಲ್ಲಿ ಡ್ರೋನ್‌ ಸ್ವಯಂಚಾಲಿತವಾಗಿ ವೃತ್ತಾಕಾರಕ್ಕೆ ತಿರುಗಬಲ್ಲದು. ನನ್ನ ಮೆಚ್ಚಿನ ಕ್ವಿಕ್‌ಶಾಟ್‌ ಮೋಡ್ ಅಂದರೆ ರಾಕೆಟ್‌.

ಸಾಮಾನ್ಯವಾಗಿ ಡ್ರೋನ್‌ ಅನ್ನು ಹಾರಿಬಿಟ್ಟು ಅದರಿಂದ ವಿಡಿಯೊ ಮಾಡಲು ಸಾಕಷ್ಟು ಕೌಶಲ ಇರಬೇಕು. ಅಂತಹ ಸಂದರ್ಭದಲ್ಲಿ ಕ್ವಿಕ್‌ ಶಾಟ್‌ ಮೋಡ್‌ ಹೊಸಬರಿಗೆ ನೆರವಾಗುತ್ತದೆ. ಕ್ವಿಕ್‌ಶಾಟ್‌ ಮೋಡ್‌ಗಳಲ್ಲಿ ಒಂದಾದ ಹೆಲಿಕ್ಸ್‌ ಎಂಬುದು ನಾನು ನಡೆಸಿದ ಪರೀಕ್ಷೆಗಳಲ್ಲಿ ಸರಿಯಾಗಿ ಕೆಲಸ ಮಾಡಲಿಲ್ಲ.

ಸಾರ್ಕ್‌ನ ಮತ್ತೊಂದು ವಿಶಿಷ್ಟಗಳಲ್ಲಿ ಇದರ ಕ್ಯಾರಿಬ್ಯಾಗ್‌. ಇದರ ಎರಡು ಬ್ಯಾಟರಿಗಳು ಮತ್ತು ಕೆಲವು ಪ್ರೊಪೆಲ್ಲರ್‌ ಬ್ಲೇಡ್‌ಗಳು ಇದರಲ್ಲಿ ಹಿಡಿಸುತ್ತವೆ. ಆದರೆ ಇತರೆ ಪ್ರೊಪೆಲ್ಲರ್‌ ಗಾರ್ಡ್‌ಗಳಿಗೆ ಸ್ಥಳವಿಲ್ಲ.

ಬ್ರಿಯಾನ್‌ ಎಕ್ಸ್ ಚೆನ್‌ , (ನ್ಯೂಯಾರ್ಕ್‌ ಟೈಮ್ಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT