ರಿಯಲ್‌ ಎಸ್ಟೇಟ್‌ ಸಲಹೆಗೆ ‘ಪ್ರಾಪ್‌ ಅರ್ಬನ್‌’

7

ರಿಯಲ್‌ ಎಸ್ಟೇಟ್‌ ಸಲಹೆಗೆ ‘ಪ್ರಾಪ್‌ ಅರ್ಬನ್‌’

Published:
Updated:
ರಿಯಲ್‌ ಎಸ್ಟೇಟ್‌ ಸಲಹೆಗೆ ‘ಪ್ರಾಪ್‌ ಅರ್ಬನ್‌’

ರಿಯಲ್‌ ಎಸ್ಟೇಟ್‌ ರಂಗದ ಜಾಗತಿಕ ಹೂಡಿಕೆ ಸಲಹಾ ಮತ್ತು ವಹಿವಾಟು ಸಂಸ್ಥೆಯಾಗಿರುವ ಪ್ರಾಪ್‌ಅರ್ಬನ್‌ (PropUrban) ಒಂದು ವರ್ಷದ ಹಿಂದೆಯಷ್ಟೇ ಬೆಂಗಳೂರಿನಲ್ಲಿ ತನ್ನ ಕಚೇರಿ ಆರಂಭಿಸಿ ಯಶಸ್ಸಿನ ಹಾದಿಯಲ್ಲಿ ಸಾಗಿದೆ.

ಬೆಂಗಳೂರಿನವರೇ ಆಗಿರುವ ಜಾಫರ್ ಅಲಿ ಅವರು ಈ ಸಂಸ್ಥೆಯ ಸಹ ಸ್ಥಾಪಕರಾಗಿದ್ದಾರೆ. ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯೂ (ಸಿಇಒ) ಆಗಿರುವ ಅವರು ಬ್ಯಾಂಕಿಂಗ್‌, ಹಣಕಾಸು ಮತ್ತು ವಿದೇಶಿ ಸಿರಿವಂತ ಹೂಡಿಕೆದಾರರಿಗೆ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ ಅಪಾರ ಅನುಭವ ಹೊಂದಿದ್ದಾರೆ. ತಮ್ಮ ಬೆನ್ನಿಗೆ ಇರುವ ಈ ಅನುಭವ ಆಧರಿಸಿ ಈ ರಿಯಲ್‌ ಎಸ್ಟೇಟ್‌ ಸಲಹಾ   ಸ್ಟಾರ್ಟ್‌ಅಪ್‌ಗೆ ಚಾಲನೆ ನೀಡಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

ಬ್ಲ್ಯೂರಿಂಗ್ ರಿಯಲ್‌ಟೆಕ್‌ ಪ್ರೈವೇಟ್‌  ಲಿಮಿಟೆಡ್‌ನ ಅಂಗಸಂಸ್ಥೆಯಾಗಿ ಇದು ಕಾರ್ಯ ನಿರ್ವಹಿಸುತ್ತಿದೆ.  ವಸತಿ ಮತ್ತು ವಾಣಿಜ್ಯ ಆಸ್ತಿಗಳಲ್ಲಿ ಹಣ ಹೂಡಿಕೆ ಸಲಹೆ ಮತ್ತು ವಹಿವಾಟಿನ ಆನ್‌ಲೈನ್‌ ಮತ್ತು ಆಫ್‌ಲೈನ್‌ ವೇದಿಕೆ ಇದಾಗಿದೆ.

ವ್ಯಕ್ತಿಗಳು ಮತ್ತು ಸಾಂಸ್ಥಿಕ ಮಾರಾಟಗಾರರು ನಿರ್ಮಿಸಿದ ಮನೆ, ಫ್ಲ್ಯಾಟ್‌ ಮತ್ತು ವಸತಿ ಯೋಜನೆಗಳನ್ನು  ಜಾಗತಿಕ ಹೂಡಿಕೆದಾರರಿಗೆ ಪರಿಚಯಿಸಿ ವಹಿವಾಟು ಕುದುರಿಸುವ ದಲ್ಲಾಳಿ ಸಂಸ್ಥೆಯಾಗಿ ಇದು ಕೆಲಸ ಮಾಡುತ್ತಿದೆ.

ಆಸ್ತಿಗಳ ಮಾರಾಟ, ಗುತ್ತಿಗೆ, ಜಂಟಿಯಾಗಿ ಅಭಿವೃದ್ಧಿಪಡಿಸುವುದು, ಬೃಹತ್‌ ಪ್ರಮಾಣದ ಭೂಮಿ ವಹಿವಾಟು ಮತ್ತು  ಮನೆ ಖರೀದಿದಾರರಿಗೆ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಗೃಹ ಸಾಲ ಒದಗಿಸಲೂ ನೆರವಾಗುತ್ತಿದೆ.

‘ವಹಿವಾಟಿನಲ್ಲಿ ಉದ್ಯಮಶೀಲತೆ ಮತ್ತು ಪಾರದರ್ಶಕತೆ ಅಳವಡಿಸಿಕೊಂಡಿರುವುದರಿಂದ ಸ್ಥಳೀಯರಿಂದ ಹಿಡಿದು ಜಾಗತಿಕ ಮಟ್ಟದವರೆಗಿನ ಹೂಡಿಕೆದಾರರ ಗಮನ ಸೆಳೆಯುವಲ್ಲಿ ಸಂಸ್ಥೆ ಸಫಲವಾಗುತ್ತಿದೆ’ ಎಂದು ಸಿಇಒ ಜಾಫರ್‌ ಅಲಿ ಹೇಳುತ್ತಾರೆ.

‘ರಿಯಲ್‌ ಎಸ್ಟೇಟ್‌ ವಹಿವಾಟಿಗೆ ಸಂಬಂಧಿಸಿದ ಎಲ್ಲ ಬಗೆಯ ಸಮಸ್ಯೆಗಳಿಗೆ ಒಂದೆಡೆಯೇ ಪರಿಹಾರ ಒದಗಿಸುವ ಧ್ಯೇಯ ‘ಪ್ರಾಪ್‌ಅರ್ಬನ್‌’ದು ಆಗಿದೆ.  ವಹಿವಾಟಿನಲ್ಲಿ  ಜಾಗತಿಕ ಮಾನದಂಡಗಳನ್ನು ಗರಿಷ್ಠ ಮಟ್ಟದಲ್ಲಿ ಅಳವಡಿಸಿಕೊಂಡಿರುವುದರಿಂದ  ಹೂಡಿಕೆದಾರರ ಮೆಚ್ಚುಗೆಗೆ ಪಾತ್ರವಾಗಿದೆ’ ಎಂದು ಅವರು ಹೇಳುತ್ತಾರೆ

35 ವರ್ಷಗಳ ಕಾಲ ದುಬೈ, ಲಂಡನ್‌, ಸ್ವಿಟ್ಜರ್ಲೆಂಡ್‌ಗಳಲ್ಲಿನ ಹಣಕಾಸು ಸಂಸ್ಥೆಗಳಲ್ಲಿ ಕೆಲಸ ಮಾಡಿ ಬಂದಿರುವ  ಜಾಫರ್‌ ಅಲಿ ಅವರು ತಮ್ಮ ವೃತ್ತಿ ಬದುಕಿನ ವ್ಯಾಪಕ ಅನುಭವ ಬಳಸಿಕೊಂಡು ಈಗ ರಿಯಲ್‌ ಎಸ್ಟೇಟ್ ಸಲಹಾ ಸಂಸ್ಥೆ ಆರಂಭಿಸಿದ್ದಾರೆ.  2016ರ ಆಗಸ್ಟ್‌ನಲ್ಲಿ 16ರಂದು ಕಾರ್ಯಾರಂಭ ಮಾಡಿರುವ ಈ ಸಂಸ್ಥೆ ಅಲ್ಪಾವಧಿಯಲ್ಲಿ ರಿಯಲ್‌ ಎಸ್ಟೇಟ್‌ ರಂಗದಲ್ಲಿ ತನ್ನ ವಿಶಿಷ್ಟ ಛಾಪು ಮೂಡಿಸಿದೆ. 8 ತಿಂಗಳಲ್ಲಿ ಕೊಚ್ಚಿ, ಹೈದರಾಬಾದ್‌, ಚೆನ್ನೈ, ಪುಣೆ, ಮುಂಬೈನಲ್ಲಿ ಮೂರು ಕಚೇರಿಗಳನ್ನು ಆರಂಭಿಸಿರುವುದು ಇದರ ಆರಂಭಿಕ ಯಶಸ್ಸಿಗೆ ಕನ್ನಡಿ ಹಿಡಿಯುತ್ತದೆ.

ಅಲ್ಪಾವಧಿಯಲ್ಲಿ ₹ 70 ರಿಂದ ₹ 75 ಲಕ್ಷದವರೆಗಿನ  120 ವಹಿವಾಟುಗಳನ್ನು  ನಡೆಸಲಾಗಿದೆ. ದುಬೈ, ಇಂಗ್ಲೆಂಡ್‌, ಸಿಂಗಪುರ ಮತ್ತು ಹಾಂಕಾಂಗ್‌ಗಳಲ್ಲೂ ಕಚೇರಿ ತೆರೆಯಲು  ಜಾಫರ್‌ ಅಲಿ ಅವರು ಉತ್ಸುಕರಾಗಿದ್ದಾರೆ.  8 ತಿಂಗಳ ಹಿಂದೆ ಕಾರ್ಯಾರಂಭ ಮಾಡಿರುವ ಸಂಸ್ಥೆಯೊಂದು ಮೂರು ನಗರಗಳಿಗೆ ಸಂಬಂಧಿಸಿದಂತೆ – ಸಂಶೋಧನಾ ವರದಿ ಸಿದ್ಧಪಡಿಸಿರುವುದೂ ಇದರ ಇನ್ನೊಂದು ಹೆಗ್ಗಳಿಕೆಯಾಗಿದೆ.

‘ಗ್ರಾಹಕರು ಮತ್ತು ಡೆವಲಪರ್ಸ್‌ಗಳಿಗಾಗಿ  ಇಂತಹ ವರದಿಗಳು ಹೆಚ್ಚು ಉಪಯುಕ್ತವಾಗಿರುತ್ತವೆ. ಸಂಸ್ಥೆಯು 6 ಡೆವಲಪರ್ಸ್‌ಗಳಿಗಾಗಿ ಸಂಶೋಧನಾ ವರದಿ ಸಿದ್ಧಪಡಿಸಿಕೊಡುತ್ತಿದೆ’ ಎಂದು ಅವರು  ಹೇಳುತ್ತಾರೆ.

ಕೈಗೆಟುಕುವ, ಮಧ್ಯಮ ಹಂತದ, ಐಷಾರಾಮಿ ವಸತಿ ಯೋಜನೆಗಳನ್ನೂ ಮಾರಾಟ ಮಾಡಲು, ಹಣ ಹೂಡಿಕೆ ಮಾಡಲು ಸಲಹೆ ಮತ್ತು ನೆರವು ನೀಡುತ್ತಿದೆ. ಖರೀದಿದಾರರ ಅಗತ್ಯ ಮತ್ತು ಉದ್ದೇಶಗಳನ್ನು ತಿಳಿದುಕೊಂಡು  ಅದಕ್ಕೆ ತಕ್ಕಂತೆ ವಸತಿ ಯೋಜನೆಗಳನ್ನು ಪರಿಚಯಿಸುವುದು ಸಂಸ್ಥೆಯ ವಿಶೇಷತೆಯಾಗಿದೆ. ಗ್ರಾಹಕರನ್ನು ತಿಳಿದುಕೊಳ್ಳುವುದು (ಕೆವೈಸಿ), ಈ ಸಂಸ್ಥೆಯ ಇನ್ನೊಂದು ಹೆಗ್ಗಳಿಕೆಯಾಗಿದೆ.

‘ಸಂಸ್ಥೆಯಿಂದ ಸಲಹೆ ಪಡೆದವರು ಅದರಿಂದ ತೃಪ್ತರಾಗಿ ಒಳ್ಳೆಯ ಮಾತುಗಳನ್ನಾಡಿರುವುದೂ ವಹಿವಾಟು ವೃದ್ಧಿಗೆ ಕಾರಣವಾಗಿದೆ’ ಎಂದು ಜಾಫರ್‌  ಅವರು ಹೇಳುತ್ತಾರೆ. ಗ್ರಾಹಕರ ಅಗತ್ಯಗಳನ್ನೆಲ್ಲ ಅಧ್ಯಯನ ಮಾಡಿ ಅದಕ್ಕೆ ತಕ್ಕಂತೆ ಸಲಹೆ ನೀಡಲಾಗುವುದು. ಬೆಂಗಳೂರು, ಪುಣೆ ನಗರದ ರಿಯಲ್ ಎಸ್ಟೇಟ್‌ ಮಾರುಕಟ್ಟೆ ಪ್ರಬುದ್ಧತೆ ಹೊಂದಿವೆ. ಇಲ್ಲಿ ಗ್ರಾಹಕರ ಹಿತಾಸಕ್ತಿ ರಕ್ಷಣೆಗೆ ಹೆಚ್ಚು ಆದ್ಯತೆ ದೊರೆಯುತ್ತಿದೆ.

(ಜಾಫರ್‌ ಅಲಿ)

‘ರಿಯಲ್‌ ಎಸ್ಟೇಟ್‌ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಯು (ರೇರಾ) ರಾತ್ರಿ ಬೆಳಗಾಗುವುದರ ಒಳಗೆ ಯಶಸ್ವಿಯಾಗದು. ಅದಕ್ಕೆ ಸಾಕಷ್ಟು ಸಮಯ ಹಿಡಿಯಲಿದೆ.

‘ದುಬೈನಲ್ಲಿಯೂ 2006ರಲ್ಲಿಯೇ ಇಂತಹ ಚಿಂತನೆಗೆ ಚಾಲನೆ ನೀಡಲಾಗಿತ್ತು.  ಆದರೆ, ಅಲ್ಲಿನ ರಿಯಲ್‌ ಎಸ್ಟೇಟ್‌ ವಹಿವಾಟು ಎಲ್ಲರಿಗೂ ಒಪ್ಪಿತ ರೀತಿಯಲ್ಲಿ  ಕಾರ್ಯರೂಪಕ್ಕೆ ಬರಲು 2017ರವರೆಗೆ ಕಾಯಬೇಕಾಯಿತು’ ಎಂದು ಅಲಿ ಹೇಳುತ್ತಾರೆ.

‘ರಿಯಲ್‌ ಎಸ್ಟೇಟ್‌ ಉದ್ದಿಮೆಯಲ್ಲಿ ಭೂ ವ್ಯಾಜ್ಯಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗಳು ಸಿವಿಲ್‌ ಕೋರ್ಟ್‌ಗಳಲ್ಲಿ ವರ್ಷಗಟ್ಟಲೆ ನಡೆಯುತ್ತವೆ. ಇದು ಕೂಡ ವಸತಿ ಯೋಜನೆಗಳು ವಿಳಂಬವಾಗಲು ಕಾರಣವಾಗುತ್ತವೆ’ ಎಂದು ಹೇಳುತ್ತಾರೆ ಅವರು.

‘ರಿಯಲ್‌ ಎಸ್ಟೇಟ್‌ ವಹಿವಾಟನ್ನು ಸರಿಪಡಿಸಲು ‘ರೇರಾ’ ಅತ್ಯುತ್ತಮ  ಕ್ರಮವಾಗಿದೆ. ಆದರೆ, ಫಲಿತಾಂಶ ಬರಲು  ಇನ್ನೂ ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ. ರಿಯಲ್‌ ಎಸ್ಟೇಟ್‌ ವಹಿವಾಟಿನಲ್ಲಿಯೂ ಅನೇಕ ಸಮಸ್ಯೆಗಳಿವೆ. ಕಾರ್ಮಿಕರ ಅಲಭ್ಯತೆಯ ಕಾರಣಕ್ಕೆ ವಿಳಂಬ, ಕೋರ್ಟ್‌ ವಿಚಾರಣೆ ಮತ್ತಿತರ ವಿಷಯಗಳಿಗೂ ಪ್ರತ್ಯೇಕವಾಗಿ ಹಣ ತೆಗೆದು ಇರಿಸಲಾಗಿರುತ್ತದೆ.

‘ರೇರಾ’ ಕಾರಣಕ್ಕೆ ಅಸಂಘಟಿತ ವಲಯದ ವಹಿವಾಟುದಾರರು ಅಸ್ತಿತ್ವ ಕಳೆದುಕೊಳ್ಳಲಿದ್ದಾರೆ. ಮಾರುಕಟ್ಟೆ ನಿಯಂತ್ರಣಕ್ಕೆ ಒಳಪಟ್ಟರೆ, ವಹಿವಾಟಿನ ವಿಶ್ವಾಸಾರ್ಹತೆ , ಹಣ ಹೂಡಿಕೆ ಹೆಚ್ಚಲಿದೆ.

‘ಅನಿವಾಸಿ ಭಾರತೀಯನಾಗಿದ್ದಾಗ (ಎನ್‌ಆರ್‌ಐ) ಭಾರತದಲ್ಲಿ ರಿಯಲ್‌ ಎಸ್ಟೇಟ್‌ ವಹಿವಾಟಿನಲ್ಲಿ ಹಣ ತೊಡಗಿಸಿದಾಗ ನನಗೂ ಕೆಟ್ಟ ಅನುಭವ ಆಗಿತ್ತು.  ನನ್ನನ್ನು ಹಾದಿ ತಪ್ಪಿಸಲಾಗಿತ್ತು.  ಆರಂಭದಲ್ಲಿ ತೋರಿಸಿದ ಯೋಜನೆ ಮತ್ತು ಯೋಜನೆ ಪೂರ್ಣಗೊಂಡಾಗ ಹಸ್ತಾಂತರಿಸಿದ ಫ್ಲ್ಯಾಟ್‌ಗಳ ಸ್ವರೂಪವೇ ಬೇರೆಯಾಗಿದ್ದವು.  ಡೆವಲಪರ್ಸ್‌ಗಳು ಖರೀದಿದಾರರನ್ನು ಏಮಾರಿಸುವ ಅಸಂಖ್ಯ ನಿದರ್ಶನಗಳಿವೆ. ಹೂಡಿಕೆದಾರರಿಗೆ, ಖರೀದಿದಾರರಿಗೆ ಇಂತಹ ಅನುಭವಗಳು ಆಗದಂತೆ ನೋಡಿಕೊಳ್ಳುವ ಸದುದ್ದೇಶದಿಂದಲೇ ಈ ಸಂಸ್ಥೆ ಸ್ಥಾಪಿಸಲಾಗಿದೆ’ ಎಂದು ಜಾಫರ್‌ ಅಲಿ ಹೇಳುತ್ತಾರೆ.

‘ಹೂಡಿಕೆದಾರರು ತಮ್ಮ ಬಳಿ ಇರುವ ಹಣದ ಶೇ 60ರಷ್ಟನ್ನು ಬಂಡವಾಳ ಮಾರುಕಟ್ಟೆಯಲ್ಲಿ ಮತ್ತು ಉಳಿದ ಶೇ 40ರಷ್ಟನ್ನು  ರಿಯಲ್‌ ಎಸ್ಟೇಟ್‌ ವಹಿವಾಟಿನಲ್ಲಿ ತೊಡಗಿಸುತ್ತಾರೆ. ಹೀಗಾಗಿ  ವಿಶ್ವದಾದ್ಯಂತ ಅದೊಂದು ದೊಡ್ಡ ವಹಿವಾಟು ಆಗಿ ಬೆಳೆಯುತ್ತಿದೆ’ ಎಂದೂ ಅವರು ಹೇಳುತ್ತಾರೆ.

**

ಎಲ್‌ಆ್ಯಂಡ್‌ಟಿ ಫೈನಾನ್ಸ್‌ ವೆಲ್ತ್‌ ಮ್ಯಾನೇಜಮೆಂಟ್‌ ಜತೆ ಒಪ್ಪಂದ

ಎಲ್‌ಆ್ಯಂಡ್‌ಟಿ ಫೈನಾನ್ಸ್‌ ವೆಲ್ತ್‌ ಮ್ಯಾನೇಜಮೆಂಟ್‌ ಜತೆಗೆ ಇತ್ತೀಚೆಗೆ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದ ಫಲವಾಗಿ ಎಲ್‌ಆ್ಯಂಡ್‌ಟಿ ವೆಲ್ತ್‌ ಮ್ಯಾನೇಜ್‌ಮೆಂಟ್‌ನ ಖಾಸಗಿ ಶ್ರೀಮಂತ ಹೂಡಿಕೆದಾರರಿಗೆ ರಿಯಲ್‌ ಎಸ್ಟೇಟ್‌ ವಹಿವಾಟು ಕುರಿತು ಭಾರತದಲ್ಲಷ್ಟೇ ಅಲ್ಲದೆ, ಯುಎಇ, ಇಂಗ್ಲೆಂಡ್‌, ಹಾಂಕಾಂಗ್‌ಗಳಲ್ಲೂ ಸಲಹೆ ನೀಡಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry