ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಿ’ ಮೊದಲ ನೋಟ

Last Updated 13 ಜೂನ್ 2017, 19:30 IST
ಅಕ್ಷರ ಗಾತ್ರ

ಅನುಷ್ಕಾ ಶರ್ಮಾ ತಮ್ಮ ‘ಪರಿ’ ಸಿನಿಮಾದ ಪೋಸ್ಟರ್‌ನ ಫಸ್ಟ್‌ ಲುಕ್‌ ಅನ್ನು ಟ್ವಿಟರ್‌ ಖಾತೆಯಲ್ಲಿ ಬಿಡುಗಡೆ ಮಾಡಿಕೊಂಡಿದ್ದಾರೆ.

‘ಪರಿ’ಯ ನಿರ್ಮಾಪಕಿಯೂ ಆಗಿರುವ ಅನುಷ್ಕಾ, ಶೋಷಿತ ಹೆಣ್ಣುಮಗಳು ಪ್ರತೀಕಾರಕ್ಕೆ ನಿಂತಂತೆ  ಪೋಸ್ಟರ್‌ನಲ್ಲಿ ಕಾಣುತ್ತಿದ್ದಾರೆ.

‘ಇಂದಿನಿಂದ ‘ಪರಿ’ ಚಿತ್ರೀಕರಣ ಆರಂಭ’ ಎಂದೂ ಅನುಷ್ಕಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಗ್ಲಾಮರ್, ಮೇಕಪ್ ಇಲ್ಲದ ಈ ಫೋಟೊ ಅನುಷ್ಕಾ ಅವರ ಅಭಿನಯ ಕಲೆಯ ವಿಸ್ತರಣೆಯಂತೆ ಕಾಣುತ್ತದೆ. ‘ರಬ್‌ ನೆ ಬನಾದಿ ಜೋಡಿ’ ಸಿನಿಮಾದಿಂದಲೂ ವಿಭಿನ್ನ ಪಾತ್ರಗಳಲ್ಲಿ ತೊಡಗಿಕೊಂಡ ಅನುಷ್ಕಾ ‘ಪರಿ’ಯಲ್ಲೂ ಪ್ರಯೋಗ ಮಾಡಲು ತಯಾರಾಗಿದ್ದಾರೆ.

ಬೆಂಗಾಲಿ ಕಲಾವಿದ ಪರಮ್ರತಾ ಚಟರ್ಜಿ ‘ಪರಿ’ಯಲ್ಲಿ ಮುಖ್ಯಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಪರಮ್ರತಾ ಈ ಹಿಂದೆ ವಿದ್ಯಾ ಬಾಲನ್ ಜತೆ ‘ಕಹಾನಿ’ ಸಿನಿಮಾದಲ್ಲಿ ಅಭಿನಯಿಸಿದ್ದರು. ‘ಪಾರಿ’ ಸಿನಿಮಾವನ್ನು ಬಂಗಾಲ ಮೂಲದ ಪ್ರಾಸಿಟ್ ರಾಯ್ ನಿರ್ದೇಶಿಸಿದ್ದು, ಚಿತ್ರೀಕರಣ ಮುಂಬೈ, ಕೋಲ್ಕತ್ತಾದಲ್ಲಿ ನಡೆಯಲಿದೆ.

ಅನುಷ್ಕಾ ಅವರ ‘ಕ್ಲೀನ್ ಸ್ಲೇಟ್ ಫಿಲಂಸ್‌’ನಿಂದ ನಿರ್ಮಾಣವಾಗುತ್ತಿರುವ ಮೂರನೇ ಸಿನಿಮಾ ‘ಪರಿ’. ಈ ಮೊದಲು ‘ಎನ್‌ಎಚ್ 10’ ಹಾಗೂ ‘ಫಿಲ್ಲೌರಿ’ ಸಿನಿಮಾಕ್ಕೆ  ಅನುಷ್ಕಾ ನಿರ್ಮಾಪಕರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT