ಜುಲೈ 1ರಿಂದ ಜೀವರಕ್ಷಕ ಔಷಧಿ ದುಬಾರಿ

7

ಜುಲೈ 1ರಿಂದ ಜೀವರಕ್ಷಕ ಔಷಧಿ ದುಬಾರಿ

Published:
Updated:
ಜುಲೈ 1ರಿಂದ ಜೀವರಕ್ಷಕ ಔಷಧಿ ದುಬಾರಿ

ನವದೆಹಲಿ: ಮುಂದಿನ ತಿಂಗಳಿನಿಂದ ಜಿಎಸ್‌ಟಿ ಬರುತ್ತಿದ್ದಂತೆ  ಬಹುತೇಕ ಔಷಧಿಗಳ ಬೆಲೆಗಳು ಶೇ 2.29ರಷ್ಟು ತುಟ್ಟಿಯಾಗಲಿವೆ.

ಅವಶ್ಯಕ ಔಷಧಿಗಳ ಮೇಲಿನ ಜಿಎಸ್‌ಟಿ ದರವನ್ನು ಶೇ 12ಕ್ಕೆ ನಿಗದಿಪಡಿಸಲಾಗಿದೆ. ಔಷಧಿಗಳ ಮೇಲಿನ ಸದ್ಯದ ತೆರಿಗೆ ಪ್ರಮಾಣ ಶೇ 9ರಷ್ಟಿದೆ.

ಇನ್ಸುಲಿನ್‌ನಂತಹ ಕೆಲ ಔಷಧಿಗಳ ಬೆಲೆಗಳು ಮಾತ್ರ ಅಗ್ಗವಾಗಲಿವೆ. ಇನ್ಸುಲಿನ್‌ ಮೇಲಿನ ಜಿಎಸ್‌ಟಿ ದರವನ್ನು ಶೇ 12 ರಿಂದ ಶೇ 5ಕ್ಕೆ ಇಳಿಸಲಾಗಿದೆ.

‘ಜಿಎಸ್‌ಟಿ ಜಾರಿಯು ಬಹುತೇಕ ಸುಸೂತ್ರವಾಗಿರಲಿದೆ. ಔಷಧಿಗಳ ಲಭ್ಯತೆ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರಲಾರದು’ ಎಂದು ರಾಷ್ಟ್ರೀಯ ಔಷಧಿ ಬೆಲೆ ಪ್ರಾಧಿಕಾರದ (ಎನ್‌ಪಿಪಿಎ) ಅಧ್ಯಕ್ಷ ಭೂಪೇಂದ್ರ ಸಿಂಗ್  ಹೇಳಿದ್ದಾರೆ.

ತೆರಿಗೆ ದರ ಇಳಿಸಿದ ಔಷಧಿಗಳ ವಿಷಯದಲ್ಲಿ, ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲಾಗುವುದು. ಜಿಎಸ್‌ಟಿಯಲ್ಲಿ ವಿಧಿಸಲಾಗಿರುವ ಲಾಭ ತಡೆ ನಿಬಂಧನೆಗೆ ಅನುಗುಣವಾಗಿ ಗ್ರಾಹಕರಿಗೆ ತೆರಿಗೆ ಕಡಿತದ ಪ್ರಯೋಜನ ವರ್ಗಾಯಿಸಲಾಗುವುದು ಎಂದು ಬೆಲೆ ಪ್ರಾಧಿಕಾರವು ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry