ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಲೂರು ಅರಣ್ಯ: ಉರುಳಿಗೆ ಸಿಲುಕಿದ್ದ ಜಿಂಕೆಗಳನ್ನು ರಕ್ಷಿಸಿದ ಯುವಕರು

Last Updated 13 ಜೂನ್ 2017, 17:50 IST
ಅಕ್ಷರ ಗಾತ್ರ
ADVERTISEMENT

ಬೆಂಗಳೂರು: ಚಿಕ್ಕಲೂರು ಸಂಗಮ ಅರಣ್ಯ ಪ್ರದೇಶದಲ್ಲಿ ತಂತಿಯ ಉರುಳಿಗೆ ಸಿಲುಕಿದ್ದ ಎರಡು ಜಿಂಕೆಗಳನ್ನು ಯುವಕರ ತಂಡವೊಂದು ರಕ್ಷಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಸಂದೀಪ್‌ ವೈವಿಎಸ್‌ ಎಂಬುವರ ಫೇಸ್‌ಬುಕ್‌ ಪೇಜ್‌ನಲ್ಲಿ ಈ ವಿಡಿಯೊ ಪ್ರಕಟಿಸಲಾಗಿದೆ. ಜಿಂಕೆಗಳನ್ನು ರಕ್ಷಿಸಿದ ಯುವಕರ ತಂಡಕ್ಕೆ ಸಾಕಷ್ಟು ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ಅರಣ್ಯ ಪ್ರದೆಶದಲ್ಲಿ ಜಿಂಕೆಗಳು ಹಾಗೂ ವನ್ಯಜೀವಿಗಳ ಬೇಟೆಗಾಗಿ  ಕಿಡಿಗೇಡಿಗಳು ತಂತಿಯ ಉರುಳು ಹಾಕಿದ್ದಾರೆ.  ಈ ಉರುಳಿಗೆ ಸಿಲುಕಿ ಎರಡು ಜಿಂಕೆಗಳು ನರಳಾಡುತ್ತಿರುವುದನ್ನು ಗಮನಿಸಿದ ಯುವಕರು ಆ ಜಿಂಕೆಗಳನ್ನು ರಕ್ಷಿಸಿದ್ದಾರೆ.

ವನಪಾಲಕರು ಮತ್ತು ಅರಣ್ಯ ಅಧಿಕಾರಿಗಳು ಏನು ಕೆಲಸ ಮಾಡುತ್ತಿದ್ದಾರೆ ಎಂದು ಹಲವರು ಈ ವಿಡಿಯೊ ಪೊಸ್ಟ್‌ಗೆ ಕಮೆಂಟ್‌ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT