ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು ಚಟ ಬಿಡುವವರ ಪ್ರಮಾಣ ಹೆಚ್ಚಳ

Last Updated 13 ಜೂನ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ಏಳು ವರ್ಷಗಳಲ್ಲಿ ಸುಮಾರು 81 ಲಕ್ಷ ಭಾರತೀಯರು ತಂಬಾಕು ಚಟವನ್ನು (ಧೂಮಪಾನ ಮತ್ತು ತಂಬಾಕು ಜಗಿಯುವುದು) ತ್ಯಜಿಸಿದ್ದಾರೆ.  ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಹಮ್ಮಿಕೊಂಡಿದ್ದ ತಂಬಾಕು ವಿರೋಧಿ ಅಭಿಯಾನಗಳಿಂದ ಇದು ಸಾಧ್ಯವಾಗಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

ಆದರೆ, ಈ ಅಭಿಯಾನಗಳು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರನ್ನು  ತಲುಪಿಲ್ಲ. ಸಣ್ಣ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ಜನರು ಈಗಲೂ ಜಗಿಯುವ ತಂಬಾಕು ಮತ್ತು ಬೀಡಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಾರೆ ಎಂದು ಸಮೀಕ್ಷೆ ವಿವರಿಸಿದೆ.
****
ಎಲ್ಲೆಲ್ಲಿ ಸಮೀಕ್ಷೆ?
30 ರಾಜ್ಯಗಳು/ 2 ಕೇಂದ್ರಾಡಳಿತ ಪ್ರದೇಶಗಳು


* 74,037 ಸಮೀಕ್ಷೆಯಲ್ಲಿ ಭಾಗವಹಿಸಿದ ಜನರ ಸಂಖ್ಯೆ
* 34.6% 2009–10ರ ಅವಧಿಯಲ್ಲಿ ಭಾರತದಲ್ಲಿದ್ದ ತಂಬಾಕು ವ್ಯಸನಿಗಳ ಪ್ರಮಾಣ
* 28.6% 2016–17ರಲ್ಲಿದ್ದ ತಂಬಾಕು ವ್ಯಸನಿಗಳ ಪ್ರಮಾಣ
* 6% ಏಳು ವರ್ಷಗಳ ಅವಧಿಯಲ್ಲಿ ತಂಬಾಕು ಚಟ ತ್ಯಜಿಸಿದವರ ಪ್ರಮಾಣ
****
2ನೇ ಹಂತದ ಸಮೀಕ್ಷೆ
‘ಜಾಗತಿಕ ವಯಸ್ಕ ತಂಬಾಕು ವ್ಯಸನ ಸಮೀಕ್ಷೆ’ ಹೆಸರಿನಲ್ಲಿ 2016–17ರಲ್ಲಿ 2ನೇ ಹಂತದ ಸಮೀಕ್ಷೆ ನಡೆಸಲಾಗಿದೆ (ಜಿಎಟಿಎಸ್‌–2). 2009–10ರಲ್ಲಿ ಮೊದಲ ಹಂತದ ಸಮೀಕ್ಷೆ ನಡೆದಿತ್ತು.

15ಕ್ಕಿಂತ ಹೆಚ್ಚು ವಯಸ್ಸಿನವರನ್ನು ಇದಕ್ಕಾಗಿ ಸಂಪರ್ಕಿಸಲಾಗಿದೆ. ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಸೋಷಿಯಲ್‌ ಸೈನ್ಸ್‌ನ ಅಧ್ಯಯನಕಾರರು ಸಮೀಕ್ಷೆ ನಡೆಸಿದ್ದಾರೆ.

2016ರ ಆಗಸ್ಟ್‌ ಮತ್ತು 2017ರ ಫೆಬ್ರುವರಿ ನಡುವೆ ಜನರ ಅಭಿಪ್ರಾಯ ಸಂಗ್ರಹಿಸಲಾಗಿದೆ.

****
ಕಾರಣಗಳೇನು?
* ತಂಬಾಕು ನಿಯಂತ್ರಣ ಕಾನೂನು
* ತಂಬಾಕು ಉತ್ಪನ್ನಗಳ ಪೊಟ್ಟಣಗಳಲ್ಲಿ ಎಚ್ಚರಿಕೆಯ ಸಂದೇಶಬಿಂಬಿಸುವ ಚಿತ್ರಗಳನ್ನು ಶೇ 85ರಷ್ಟು ಗಾತ್ರದಲ್ಲಿ ಮುದ್ರಿಸಿರುವುದು
* ಗುಟ್ಕಾ ನಿಷೇಧ
* ಕೆಲವು ರಾಜ್ಯಗಳಲ್ಲಿ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ ನಿಗದಿ
****
ಹೆಚ್ಚು ವೆಚ್ಚ
2009–10ಕ್ಕೆ ಹೋಲಿಸಿದರೆ ಸಿಗರೇಟ್‌ಗಾಗಿ ಜನರು ಈಗ ಪ್ರತಿದಿನ ಮಾಡುವ ವೆಚ್ಚ ಮೂರು ಪಟ್ಟು ಹೆಚ್ಚಾಗಿದೆ. ಬೀಡಿ ಮತ್ತು ಜಗಿಯುವ ತಂಬಾಕಿಗಾಗಿ 2 ಪಟ್ಟು ಹೆಚ್ಚು ಖರ್ಚು ಮಾಡುತ್ತಿದ್ದಾರೆ.
****
2017ರ ರಾಷ್ಟ್ರೀಯ ಆರೋಗ್ಯ ನೀತಿಯು, ತಂಬಾಕು ಬಳಕೆ ಪ್ರಮಾಣವನ್ನು 2020ರ ವೇಳೆಗೆ ಶೇ 15ರಷ್ಟು ಮತ್ತು 2025ರ ಹೊತ್ತಿಗೆ ಶೇ 30ರಷ್ಟು ಕುಗ್ಗಿಸುವ ಗುರಿ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT