ದಕ್ಷಿಣ ಆಫ್ರಿಕಾ ಟಿ–20 ತಂಡಕ್ಕೆ ಡಿವಿಲಿಯರ್ಸ್‌ ನಾಯಕ

7

ದಕ್ಷಿಣ ಆಫ್ರಿಕಾ ಟಿ–20 ತಂಡಕ್ಕೆ ಡಿವಿಲಿಯರ್ಸ್‌ ನಾಯಕ

Published:
Updated:
ದಕ್ಷಿಣ ಆಫ್ರಿಕಾ ಟಿ–20 ತಂಡಕ್ಕೆ ಡಿವಿಲಿಯರ್ಸ್‌ ನಾಯಕ

ಜೋಹಾನ್ಸ್‌ಬರ್ಗ್‌ : ಎಬಿ ಡಿವಿಲಿಯರ್ಸ್‌ ಅವರು ಇಂಗ್ಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಟಿ–20 ಕ್ರಿಕೆಟ್‌ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಲಿದ್ದಾರೆ. ಕ್ರಿಕೆಟ್‌ ದಕ್ಷಿಣ ಆಫ್ರಿಕಾ (ಸಿಎಸ್‌ಎ) ಮಂಗಳವಾರ 14 ಸದಸ್ಯರ ತಂಡವನ್ನು ಪ್ರಕಟಿಸಿದೆ.

ಟಿ–20 ತಂಡದ ನಾಯಕ ಫಾಫ್‌ ಡು ಪ್ಲೆಸಿಸ್‌ ಅವರು ಗಾಯದ ಕಾರಣ ಸರಣಿಗೆ ಅಲಭ್ಯರಾಗಿದ್ದಾರೆ. ಹೀಗಾಗಿ ಆಯ್ಕೆ ಸಮಿತಿ ಡಿವಿಲಿಯರ್ಸ್‌ ಅವರಿಗೆ ನಾಯಕತ್ವದ ಜವಾಬ್ದಾರಿ ವಹಿಸಿದೆ.

ಇಂಗ್ಲೆಂಡ್‌ ವಿರುದ್ಧದ ಸರಣಿಯ ಮೊದಲ ಪಂದ್ಯ ಜೂನ್‌ 21ರಂದು ಸೌಥಾಂಪ್ಟನ್‌ನಲ್ಲಿ ನಡೆಯಲಿದೆ. ನಂತ ರದ ಪಂದ್ಯಗಳು ಕ್ರಮವಾಗಿ ಟೌಂಟನ್‌ (ಜೂನ್‌ 23) ಮತ್ತು ಕಾರ್ಡಿಫ್‌ (ಜೂನ್‌ 25) ನಲ್ಲಿ ಜರುಗಲಿವೆ.

ಡಿವಿಲಿಯರ್ಸ್‌ ಅವರು ಚಾಂಪಿಯನ್ಸ್‌ ಟ್ರೋಫಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿದ್ದರು. ಅವರ ಸಾರಥ್ಯದಲ್ಲಿ ಹರಿಣಗಳ ನಾಡಿನ ತಂಡ ಪಾಕಿಸ್ತಾನ ಮತ್ತು ಭಾರತದ ವಿರುದ್ಧ ಸೋಲು ಕಂಡು ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸುವ ಅವಕಾಶ ಕಳೆದುಕೊಂಡಿತ್ತು.

ತಂಡ  ಇಂತಿದೆ: ಎಬಿ ಡಿವಿಲಿಯರ್ಸ್‌ (ನಾಯಕ), ಫರ್ಹಾನ್‌ ಬೆಹಾರ್ಡೀನ್‌,  ರೀಜಾ ಹೆಂಡ್ರಿಕ್ಸ್‌, ಇಮ್ರಾನ್‌ ತಾಹಿರ್‌, ಡೇವಿಡ್‌ ಮಿಲ್ಲರ್‌, ಮಾರ್ನೆ ಮಾರ್ಕೆಲ್‌, ಕ್ರಿಸ್‌ ಮೊರಿಸ್‌, ಮಂಗಲಿಸೊ ಮೊಸೆಹ್ಲೆ, ವೇಯ್ನ್‌ ಪಾರ್ನೆಲ್‌, ಡೇನ್‌ ಪ್ಯಾಟರ್‌ಸನ್‌, ಆ್ಯಂಡಿಲ್ಲೆ ಪೆಹ್ಲುಕ್ವಾಯೊ, ಡ್ವೈನ್‌ ಪ್ರಿಟೋರಿಯಸ್‌, ತಬ್ರೇಜ್‌ ಶಂಶಿ ಮತ್ತು ಜಾನ್‌ ಜಾನ್‌ ಸ್ಮುಟ್ಸ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry