‘ಹೂಡಿಕೆ ಮಾಡುವ ಮುನ್ನ ಎಚ್ಚರಿಕೆ ವಹಿಸಿ’

7

‘ಹೂಡಿಕೆ ಮಾಡುವ ಮುನ್ನ ಎಚ್ಚರಿಕೆ ವಹಿಸಿ’

Published:
Updated:
‘ಹೂಡಿಕೆ ಮಾಡುವ ಮುನ್ನ ಎಚ್ಚರಿಕೆ ವಹಿಸಿ’

ಬೆಂಗಳೂರು: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ (ಐಐಎಂಬಿ) ‘ಎನ್‌.ಎಸ್‌. ರಾಘವನ್‌ ಉದ್ಯಮಶೀಲತಾ ಕಲಿಕಾ ಕೇಂದ್ರ’ವು (ಎನ್‌ಎಸ್‌ಆರ್‌ಸಿಇಎಲ್) ಮಂಗಳವಾರ ‘ಸಾಮಾಜಿಕ ರಂಗದಲ್ಲಿ ಹೂಡಿಕೆಯ ಭವಿಷ್ಯ ಕುರಿತು ಸಂವಾದ’ ಹಮ್ಮಿಕೊಂಡಿತ್ತು.

ಅಜೀಂ ಪ್ರೇಮ್‌ಜಿ ಪರೋಪಕಾರಿ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ತ್ರಿವಿಕ್ರಮ್‌ ಸೊನ್ನಿ ಮಾತನಾಡಿ, ‘ನವೋದ್ಯಮಗಳಿಗೆ ಹಣ ನೀಡಬಹುದು. ಆದರೆ, ಅವು ಸುಸ್ಥಿರವಾಗಿ ಮುನ್ನಡೆಯುತ್ತವೇ ಎಂಬುದು ಮುಖ್ಯವಾಗುತ್ತದೆ. ಬೇಕಾಬಿಟ್ಟಿಯಾಗಿ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ತೊಂದರೆ ಎದುರಿಸಬೇಕಾಗುತ್ತದೆ’ ಎಂದರು.

ಟಾಟಾ ಟ್ರಸ್ಟ್‌ನ ರೇಷ್ಮಾ ಆನಂದ್‌ ಮಾತನಾಡಿ, ‘ಯಾವುದೇ ಉದ್ಯಮದಲ್ಲಿ ಹೂಡಿಕೆ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕು. ಒಂದು ಉತ್ಪನ್ನಕ್ಕೆ ಇಂದು ಬೇಡಿಕೆ ಇದ್ದ ಮಾತ್ರಕ್ಕೆ ಅದರ ಮೇಲೆ ಹೆಚ್ಚು ಹೂಡಿಕೆ ಮಾಡಬಾರದು. ದೀರ್ಘಾವಧಿಯಲ್ಲಿ ಆ ಉತ್ಪನ್ನಕ್ಕೆ ಬೇಡಿಕೆ ಇರುತ್ತದೆಯೇ ಎಂಬುದನ್ನು ಗಮನಿಸಬೇಕು’ ಎಂದು ಹೇಳಿದರು.

‘ನಾವು ನವೋದ್ಯಮಗಳಿಗೆ ಹಣ ನೀಡುವ ಮುನ್ನ ಅವರ ಐಡಿಯಾ ಏನಿದೆ? ಉದ್ಯಮ ಸುಸ್ಥಿರವಾಗಿ ಕಾರ್ಯನಿರ್ವಹಿಸಲಿದೆಯೇ ಎಂಬುದನ್ನು ಗಮನಿಸುತ್ತೇವೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry