ಸಿ.ಎಂ ಭೇಟಿಯಾದ ತಿವಾರಿ ಕುಟುಂಬ

7
ಕಾನೂನು ವ್ಯಾಪ್ತಿಯಲ್ಲಿ ಸಾಧ್ಯವಾದ ಎಲ್ಲ ರೀತಿಯ ನೆರವಿನ ಭರವಸೆ

ಸಿ.ಎಂ ಭೇಟಿಯಾದ ತಿವಾರಿ ಕುಟುಂಬ

Published:
Updated:
ಸಿ.ಎಂ ಭೇಟಿಯಾದ ತಿವಾರಿ ಕುಟುಂಬ

ಬೆಂಗಳೂರು: ‘ಲಖನೌದಲ್ಲಿ ಸಾವನ್ನಪ್ಪಿದ ಐಎಎಸ್‌ ಅಧಿಕಾರಿ ಅನುರಾಗ್ ತಿವಾರಿ ಕುಟುಂಬಕ್ಕೆ ಕಾನೂನು ವ್ಯಾಪ್ತಿಯಡಿ ಸಾಧ್ಯವಾದ ಎಲ್ಲ ನೆರವು ದೊರಕಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಮಂಗಳವಾರ ತಮ್ಮನ್ನು ಭೇಟಿ ಮಾಡಿದ ಅನುರಾಗ್‌ ತಿವಾರಿ ತಂದೆ, ತಾಯಿ, ಸಹೋದರ ಮಯಾಂಕ್‌ ತಿವಾರಿ ಹಾಗೂ ಮಯಾಂಕ್‌ ಅವರ ಪತ್ನಿಗೆ ಸಿದ್ದರಾಮಯ್ಯ ಈ ಕುರಿತು ಭರವಸೆ ನೀಡಿದರು.

‘ನೆರವಿಗೆ ಸಂಬಂಧಿಸಿದಂತೆ ಕಾನೂನು ವ್ಯಾಪ್ತಿಯೊಳಗಿರುವ ಸಾಧ್ಯತೆಗಳನ್ನು ಪರಿಶೀಲಿಸಿ’ ಎಂದು ಸ್ಥಳದಲ್ಲೇ ಇದ್ದ ತಮ್ಮ ಪ್ರಧಾನ ಕಾರ್ಯದರ್ಶಿ ತುಷಾರ ಗಿರಿನಾಥ ಅವರಿಗೆ ಸಿದ್ದರಾಮಯ್ಯ ಸೂಚಿಸಿದರು.

‘ಅನುರಾಗ್‌ ಸಾವು ಕುರಿತಂತೆ ಸಿಬಿಐ ತನಿಖೆಗೆ ಸಹಕಾರ ನೀಡುವುದಾಗಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ತಿಳಿಸಿದ್ದೇನೆ’ ಎಂದೂ ಸಿದ್ದರಾಮಯ್ಯ ಕುಟುಂಬದ ಸದಸ್ಯರಿಗೆ ಮನವರಿಕೆ ಮಾಡಿಕೊಟ್ಟರು.

1981ರ ಮೇ 17ರಂದು ಜನಿಸಿದ್ದ ಅನುರಾಗ್ ತಿವಾರಿ, ಕಳೆದ ತಿಂಗಳು ತಮ್ಮ ಹುಟ್ಟುಹಬ್ಬದ ದಿನದಂದೇ ಸಾವನ್ನಪ್ಪಿದರು. ಇದು ಸಹಜ ಸಾವಲ್ಲ, ಕೊಲೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry