ಬಡವರಿಗೆ ರಿಯಾಯಿತಿ ದರದಲ್ಲಿ ಫ್ಲಾಟ್

7

ಬಡವರಿಗೆ ರಿಯಾಯಿತಿ ದರದಲ್ಲಿ ಫ್ಲಾಟ್

Published:
Updated:
ಬಡವರಿಗೆ ರಿಯಾಯಿತಿ ದರದಲ್ಲಿ ಫ್ಲಾಟ್

ಬೆಂಗಳೂರು: ಬಿಡಿಎ ಒಂದು ಬಿಎಚ್‌ಕೆ ಫ್ಲಾಟ್‌ಗಳ ಹಂಚಿಕೆಯಲ್ಲಿ ಪರಿಶಿಷ್ಟರಿಗೆ ಶೇ 44 ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ 25 ರಿಯಾಯ್ತಿ ನೀಡಲಾಗುವುದು ಎಂದು  ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು.

ವಿಧಾನಸಭೆಯಲ್ಲಿ ಜೆಡಿಎಸ್‌ನ ಶಿವಲಿಂಗೇಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ನೋಟು ರದ್ದತಿಯಿಂದ ಬಿಡಿಎ ಫ್ಲಾಟ್‌ಗಳ ಮಾರಾಟದಲ್ಲಿ ಇಳಿಕೆ ಆಗಿದೆ ಎಂದರು.

ಡ್ರೈವರ್‌, ಅಡುಗೆಯವರು, ವರ್ಕ್‌ಶಾಪ್‌ಗಳಲ್ಲಿ ಕೆಲಸ ಮಾಡುವವರಿಗಾಗಿ ಒತ್ತುವರಿ ತೆರವು ಮಾಡಿದ ಸರ್ಕಾರಿ ಜಮೀನಿನಲ್ಲಿ ಮನೆಗಳನ್ನು ಕಟ್ಟಿಸಿಕೊಡಲು ಉದ್ದೇಶಿಸಲಾಗಿದೆ. ಅಲ್ಲದೆ, ಮೆಟ್ರೊ ರೈಲು ಸಾಗುವ ಜಾಗದ ಸುತ್ತಮುತ್ತ ಟೌನ್‌ಶಿಪ್‌ಗಳನ್ನು ನಿರ್ಮಿಸುವ ಆಲೋಚನೆ ಇದೆ ಎಂದರು.

****

ಫ್ಲಾಟ್‌ ದರ

1 ಬಿಎಚ್‌ಕೆ ಫ್ಲಾಟ್‌ ದರ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ₹6.7 ಲಕ್ಷ, ಆರ್ಥಿಕವಾಗಿ ಹಿಂದುಳಿದವರಿಗೆ ₹9 ಲಕ್ಷ, ಇತರರಿಗೆ ₹12 ಲಕ್ಷ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry