ಲಂಡನ್‌: ಬಹು ಮಹಡಿಯ ಜನವಸತಿಯ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ದುರಂತ

7

ಲಂಡನ್‌: ಬಹು ಮಹಡಿಯ ಜನವಸತಿಯ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ದುರಂತ

Published:
Updated:
ಲಂಡನ್‌: ಬಹು ಮಹಡಿಯ ಜನವಸತಿಯ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ದುರಂತ

ಲಂಡನ್‌: ಲಂಡನ್‌ ನಗರದ ಜನವಸತಿಯ ಬಹುಮಡಿ ಕಟ್ಟಡದಲ್ಲಿ ಭೀಕರ ಬೆಂಕಿ ದುರಂತ ಸಂಭವಿಸಿದೆ. ಕಟ್ಟಡದಲ್ಲಿ ಹಲವು ಜನರು ಸಿಲುಕಿರುವ ಸಾಧ್ಯತೆ ಇದೆ.

ಲಂಡನ್‌ನ ಉತ್ತರ ಕೆನ್ಸಿಂಗ್ಟನ್‌ನಲ್ಲಿನ ಲಾಟಿಮರ್‌ ರಸ್ತೆಯ ಲ್ಯಾಂಕೆಸ್ಟರ್‌ ‘ವೆಸ್ಟ್‌ ಎಸ್ಟೇಟ್‌’ನ 24 ಮಹಡಿಯ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ದುರಂತ ಸಂಭವಿಸಿದೆ. 

ಬುಧವಾರ ಬೆಳಿಗ್ಗೆ ಭಾರತೀಯ ಕಾಲಮಾನ 5.45ಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ. 

ಘಟನೆಯಲ್ಲಿ 30 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

ಕಟ್ಟಡದ ಒಳಗೆ ನೂರಾರು ಜನರಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. 40ಕ್ಕೂ ಹೆಚ್ಚು ಅಗ್ನಿಶಾಮಕ ವಾಹನ ಹಾಗೂ 200ಕ್ಕೂ ಹೆಚ್ಚು ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ಕಟ್ಟಡದಲ್ಲಿ 100ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳಿವೆ ಎಂದು ಅಧಿಕಾರಿಗಳು ಹೇಳಿದ್ದು, ಸಾವಿನ ಬಗ್ಗೆ ವರದಿಯಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry