ಸಮೃದ್ಧ ಬೆಳೆಗೆ ‘ನೀರು ಸಂಗ್ರಹ’ ತಂತ್ರ

7

ಸಮೃದ್ಧ ಬೆಳೆಗೆ ‘ನೀರು ಸಂಗ್ರಹ’ ತಂತ್ರ

Published:
Updated:
ಸಮೃದ್ಧ ಬೆಳೆಗೆ ‘ನೀರು ಸಂಗ್ರಹ’ ತಂತ್ರ

ಶಕ್ತಿನಗರ: ಜಮೀನಿನಲ್ಲಿದ್ದ ತೆರೆದಬಾವಿ ಬೇಸಿಗೆಯಲ್ಲಿ ಖಾಲಿಯಾಗುತ್ತಿತ್ತು. ಇದರಿಂದ ಬೇಸಿಗೆ ಬೆಳೆಗಳಿಗೆ ನೀರೇ ಸಿಗುತ್ತಿರಲಿಲ್ಲ. ಕೊಳವೆಬಾವಿಯ ಹೆಚ್ಚುವರಿ ನೀರನ್ನು ಬಾವಿಯಲ್ಲಿ ಸಂಗ್ರಹಿಸುವ ‘ನೀರು ಸಂಗ್ರಹ ತಂತ್ರ’  ಆರಂಭಿಸಿದ ಮೇಲೆ ವರ್ಷಪೂರ್ತಿ ನೀರು ಸಿಗುತ್ತಿದೆ.

ರಾಯಚೂರು ತಾಲ್ಲೂಕಿನ ಶಿವವಿಲಾಸ ನಗರದ ರೈತ ಮೂಲಿಮನಿ ಬಸವರಾಜ ನಾಯಕ ಅವರು ಯಶಸ್ವಿ ಕೃಷಿಕರಾಗುವುದಕ್ಕೆ ನೀರು ಸಂಗ್ರಹ ತಂತ್ರವೇ ಕಾರಣ. ಜಮೀನಿನಲ್ಲಿ ಇರುವ 50 ಅಡಿಯ ಆಳದ ಬಾವಿಯಲ್ಲಿ ನೀರು ಸಂಗ್ರಹಿಸಿಕೊಂಡು ನೀರಿನ ಕೊರತೆಯಿಲ್ಲದೆ  ಭತ್ತ ಬೆಳೆಯುತ್ತಿದ್ದಾರೆ.

ಈ ವರ್ಷ ಬರಗಾಲ ಇರುವುದರಿಂದ ಕೃಷ್ಣಾ ನದಿ ಸಂಪೂರ್ಣ ಬತ್ತಿ ಹೋಗಿದೆ. ಸುತ್ತಮುತ್ತಲಿನ ರೈತರು ಕಂಗಾಲಾಗಿದ್ದಾರೆ. ಆದರೆ ರಾಯಚೂರು ತಾಲ್ಲೂಕು ಇಬ್ರಾಹಿಂದೊಡ್ಡಿ ಗ್ರಾಮದ ರೈತ ಮೂಲಿಗಿರಿ ಬಸವರಾಜ ನಾಯಕ ಎದೆಗುಂದಿಲ್ಲ. ಮೂರು ಎಕರೆಯ ಜಮೀನಿನಲ್ಲಿ ಎರಡು ಕೊಳವೆಬಾವಿಗಳಿವೆ. ಬಾವಿಯಲ್ಲಿ ಸಂಗ್ರಹಿಸುವ ನೀರಿನಿಂದ  ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗುತ್ತಿಲ್ಲ.

ನೀರು ಸಂಗ್ರಹದಿಂದ ಕೊಳವೆ ಬಾವಿ ಹಾಗೂ ಬಾವಿ ನೀರಾವರಿಗೆ ಒಂದಕ್ಕೊಂದು ಪೂರಕವಾಗಿವೆ. ‘ಮುತ್ತಜ್ಜರ ಕಾಲದಿಂದಲೂ ಬರಗಾಲದ ಕಷ್ಟ ಅನುಭವಿಸಿದ್ದೇವೆ. ಬರುವ ದಿನಗಳಲ್ಲಿ ಮಕ್ಕಳು, ಮೊಮ್ಮಕ್ಕಳಿಗೆ ಕಷ್ಟ ಪಡಬಾರದು ಎಂಬ ಉದ್ದೇಶದಿಂದ ಜಮೀನಿನಲ್ಲಿ ಬಾವಿ ತೋಡಿಸಿದ್ದೇವೆ. ಆದರೂ ಬೇಸಿಗೆಯಲ್ಲಿ ಬತ್ತಬಾರದು ಎನ್ನುವ ಕಾರಣದಿಂದ ಅದರಲ್ಲಿ ನೀರು ಸಂಗ್ರಹಿಸುತ್ತೇನೆ.

ಎಂದೂ ನೀರಿನ ಸಮಸ್ಯೆಯಾಗಿಲ್ಲ’ ಎಂದು  ಬಸವರಾಜ ನಾಯಕ ಹೇಳುವ ಮಾತಿದು.‘ಈ ನೀರು ಸಂಗ್ರಹದಿಂದ ಭತ್ತ, ಶೇಂಗಾ ಬೆಳೆಯುತ್ತೇವೆ. ಇದು ನಮಗೆ ಸಂತಸದ ವಿಷಯ. ನೀರಿಗಾಗಿ ಸರ್ಕಾ ರದ ಕಡೆಗೆ ಎಂದೂ ನೋಡಿಲ್ಲ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಅವರು.

* * 

ಕೃಷ್ಣಾ ನದಿ ಸಂಪೂರ್ಣ ಬತ್ತಿ ಹೋಗಿದೆ. ಕೊಳವೆಬಾವಿಯಿಂದ ಹೆಚ್ಚುವರಿ ನೀರನ್ನು ಬಾವಿಯಲ್ಲಿ ಸಂಗ್ರಹಿಸಿದ್ದರಿಂದ ಬೇಸಿಗೆಯಲ್ಲೂ ಬಸವರಾಜನಿಗೆ ನೀರು ಸಿಗುತ್ತಿದೆ

ನರಸಿಂಹಲು ವಡ್ಡೆಪಲ್ಲಿ  ಸ್ಥಳೀಯ ನಿವಾಸಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry