ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾದ ನಟಿ ಅಮಲಾ ಪೌಲ್‌ ಧಿರಿಸು

7

ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾದ ನಟಿ ಅಮಲಾ ಪೌಲ್‌ ಧಿರಿಸು

Published:
Updated:
ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾದ ನಟಿ ಅಮಲಾ ಪೌಲ್‌ ಧಿರಿಸು

ಮುಂಬೈ: ದಕ್ಷಿಣ ಭಾರತದ ನಟಿ ಅಮಲಾ ಪೌಲ್‌ ಇತ್ತೀಚಿಗೆ ‘ನನ್ನ ಸುತ್ತಲಿನ ಕಿಚ್ಚಿಗಿಂತ ನನ್ನೊಳಗಿನ ಕಿಚ್ಚು ಹೆಚ್ಚು ಪ್ರಕಾಶಮಾನವಾಗಿ ಉರಿಯುತ್ತಿರುವುದರಿಂದ ನಾನು ಇಲ್ಲಿವರೆಗೂ ಬದುಕುಳಿದಿದ್ದೇನೆ’ ಎಂದು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದರು.

ಪೋಸ್ಟ್ ಮಾಡಿದ ಚಿತ್ರದಲ್ಲಿ ಅಮಲಾ ಪೌಲ್‌ ಕಪ್ಪು ‘ಟಾಪ್‌’ ಹಾಗೂ ‘ಷಾಟ್ಸ್’ ಧರಿಸಿ, ಸ್ಟೂಲ್‌ವೊಂದರ ಮೇಲೆ ಕುಳಿತು ‘ಪೋಸ್‌’ ನೀಡಿದ್ದಾರೆ. ಈ ಪೋಸ್ಟ್‌ನ್ನು ಈವರೆಗೆ 66 ಸಾವಿರ ಮಂದಿ ವೀಕ್ಷಿಸಿದ್ದು, 497 ಮಂದಿ ಶೇರ್‌ ಮಾಡಿದ್ದಾರೆ. ಜತೆಗೆ, 2873 ಮಂದಿ ಕಾಮೆಂಟ್‌ ಮಾಡಿದ್ದಾರೆ. ಕಾಮೆಂಟ್‌ ಮಾಡಿರುವ ಬಹುತೇಕರು ಅಮಲಾ ಪೌಲ್‌ ಧಿರಿಸಿನ ಬಗ್ಗೆ ಟೀಕೆಗಳನ್ನು ಮಾಡಿದ್ದಾರೆ.

‘ಸಹೋದರಿ, ನಮ್ಮಲ್ಲಿ ಧರಿಸುವ ಉಡುಪಿಗೆ ಸಂಬಂಧಿಸಿದಂತೆ ನಮ್ಮದೇ ಆದ ಸಂಸ್ಕೃತಿ ಇದೆ. ನಿಮ್ಮನ್ನು ನೀವು ಮಲಯಾಳಿ ಎಂದು ಹೇಳಿಕೊಳ್ಳಲು ನಾಚಿಕೆ ಪಡುವಿರಾ?’ ಎಂದು ಪೌಲ್‌ ಅವರನ್ನು ಒಬ್ಬರು ಪ್ರಶ್ನಿಸಿದ್ದಾರೆ.

‘ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಛಾಯಾಚಿತ್ರಗಳನ್ನು ಪೋಸ್ಟ್‌ ಮಾಡುವುದರಿಂದ ಅತ್ಯಾಚಾರ ಪ್ರಕರಣಗಳಿಗೆ ಪ್ರಚೋದಿಸಿದಂತಾಗುತ್ತದೆ. 'ಹೆಣ್ಣಿಗೆ ಅಪಖ್ಯಾತಿಯನ್ನು ತರಬೇಡಿ' ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ.

25 ವರ್ಷದ ನಟಿ ಅಮಲಾ ಪೌಲ್‌ 2010ರಲ್ಲಿ ತೆರೆಕಂಡ ತಮಿಳಿನ ಮೈನಾ ಚಿತ್ರದ ಮೂಲಕ ಹೆಚ್ಚು ಖ್ಯಾತಿ ಪಡೆದ್ದರು. ಮಳಮಾಲಂ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ನಟಿಸಿದ್ದು, ಮಾಲಯಾಳಂ ನಟ ಮೋಹನ್‌ ಲಾಲ್‌, ತಮಿಳು ನಟ ವಿಜಯ್‌, ತೆಲುಗು ನಟ ಅಲ್ಲು ಅರ್ಜುನ್‌, ಕನ್ನಡದ ಹೆಬ್ಬುಲಿ ಚಿತ್ರದಲ್ಲಿ ಕಿಚ್ಚ ಸುದೀಪ್‌ ಅವರೊಂದಿಗೆ ಅಭಿನಯಿಸಿ ಪ್ರೇಕ್ಷಕರ ಮನ ಗೆದಿದ್ದರು.

‘ಪತಿಯಿಂದ ವಿಚ್ಛೇದನ ಪಡೆದ ನಂತರ ಈ ರೀತಿಯ ವರ್ತನೆ ಹೆಚ್ಚು ವ್ಯತಿರಿಕ್ತವಾದುದಾಗಿದ್ದು, ಇದು ನಾಚಿಕೆಗೆಡಿನ ಸಂಗತಿ’ ಎಂದು ಅಭಿಮಾನಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಲಯಾಳಂ ಚಿತ್ರ ನಿರ್ದೇಶಕ ಎ.ಎಲ್‌. ವಿಜಯ್ ನಿರ್ದೇಶನದ ‘ದೈವ ತಿರುಮಗಲ್ ’ಚಿತ್ರದಲ್ಲಿ ನಟಿಯಾಗಿ ಅಮಲಾ ಪೌಲ್ ನಟಿಸಿದ್ದರು. ಇಲ್ಲಿಂದ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು.

‘2014 ಜೂನ್‌ನಲ್ಲಿ ಪ್ರೀತಿಸಿ ವಿವಾಹವಾಗಿದ್ದ ಈ ಜೋಡಿ, 2016ರ ಆಗಸ್ಟ್‌ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಮೂಲಕ ತಮಿಳು ಚಿತ್ರರಂಗಕ್ಕೆ ಅಚ್ಚರಿಯುಂಟು ಮಾಡಿತ್ತು. ದಂಪತಿ ನಡುವೆ ಪರಸ್ಪರ ಹೊಂದಾಣಿಕೆ ಹಾಗೂ ನಂಬಿಕೆ ಇಲ್ಲದಿರುವುದು ವಿಚ್ಛೇದನೆಗೆ ಕಾರಣ’ ಎಂದು ಹೇಳಲಾಗಿತ್ತು.

ಫೇಸ್‌ ಬುಕ್‌ ಪೋಸ್ಟ್‌ನಿಂದ ಅಮಲಾ ಪೌಲ್‌ ಅವರ ವೈವಾಹಿಕ ಜೀವನದ ಏಳು ಬಿಳಿನ ಬಗ್ಗೆ ಹೆಚ್ಚು ಚರ್ಚೆಗೆ ಗ್ರಾಸವಾಗಿ ಅಭಿಮಾನಿಗಳ ಅಕ್ರೋಶಕ್ಕೆ ಕಾರಣವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry