ಹುಬ್ಬಳ್ಳಿ: ಬಾಲಕಿ ಅಪಹರಿಸಿ ಅತ್ಯಾಚಾರ; ಆರೋಪಿ ಬಂಧನ

7

ಹುಬ್ಬಳ್ಳಿ: ಬಾಲಕಿ ಅಪಹರಿಸಿ ಅತ್ಯಾಚಾರ; ಆರೋಪಿ ಬಂಧನ

Published:
Updated:
ಹುಬ್ಬಳ್ಳಿ: ಬಾಲಕಿ ಅಪಹರಿಸಿ ಅತ್ಯಾಚಾರ; ಆರೋಪಿ ಬಂಧನ

ಹುಬ್ಬಳ್ಳಿ: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿದ ಆರೋಪದ ಮೇರೆಗೆ ಜೆಡಿಎಸ್ ಮುಖಂಡ ಮುಕ್ತುಂಸಾಬ್ ಸೋಗಲದ್ ಎಂಬುವವರನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೇ 5ರಂದು ಬೆಳಗಾವಿ ಜಿಲ್ಲೆಯ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿದ ಆರೋಪ ಸಂಬಂಧ ಬಂಧಿಸಲಾಗಿದೆ.

ಹುಬ್ಬಳ್ಳಿಯ ಹಳೇ ಬಸ್‌ನಿಲ್ದಾಣದಿಂದ ಬಾಲಕಿಯನ್ನ ಅಪಹರಿಸಿ, ವಿದ್ಯಾನಗರದ ಲಾಡ್ಜ್‌ವೊಂದಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ ಆರೋಪವಿದೆ.

ಪೊಲೀಸರು ಲಾಡ್ಜ್‌ಗೆ ಭೇಟಿ ನೀಡಿದ ವೇಳೆ ಹಿಂಬಾಗಿಲ ಮೂಲಕ ಆರೋಪಿ ಪರಾರಿಯಾಗಿದ್ದ. ವಿದ್ಯಾನಗರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿ ಬಂಧನಕ್ಕೆ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ವಿದ್ಯಾನಗರ ಠಾಣೆಯಿಂದ ಆಶೋಕನಗರ ಠಾಣೆಗೆ ವರ್ಗಾಯಿಸಲಾಗಿತ್ತು.

ಬಾಲಕಿ ನೀಡಿದ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಅಪಹರಣಕ್ಕೆ ಬಳಸಿದ ಕಾರೊಂದನ್ನು ವಶಕ್ಕೆ ಪಡೆಯಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry