ಆಂಗ್ಲ ಭಾಷೆ ಹೊರತಾಗಿ ಹೆಚ್ಚು ಹಣ ಗಳಿಸಿದ ಐದು ಸಿನಿಮಾಗಳ ಪೈಕಿ ‘ದಂಗಲ್‌’

7

ಆಂಗ್ಲ ಭಾಷೆ ಹೊರತಾಗಿ ಹೆಚ್ಚು ಹಣ ಗಳಿಸಿದ ಐದು ಸಿನಿಮಾಗಳ ಪೈಕಿ ‘ದಂಗಲ್‌’

Published:
Updated:
ಆಂಗ್ಲ ಭಾಷೆ ಹೊರತಾಗಿ ಹೆಚ್ಚು ಹಣ ಗಳಿಸಿದ ಐದು ಸಿನಿಮಾಗಳ ಪೈಕಿ ‘ದಂಗಲ್‌’

ಮೂಂಬೈ: ಬಾಲಿವುಡ್‌ ನಟ ಅಮೀರ್‌ಖಾನ್‌ ಅಭಿಯನದ ‘ದಂಗಲ್‌’ ಸಿನಿಮಾ ಭಾರತ –ಚೀನಾ ಸೇರಿದಂತೆ ವಿಶ್ವದಾದ್ಯಂತ ಬಿಡುಗಡೆಯಾಗಿ ಈವರೆಗೆ ₹ 1,930 ಕೋಟಿ ಗಳಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

ಚೀನಾದಲ್ಲಿ 9 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ದಂಗಲ್’ ಚಿತ್ರ ಪ್ರದರ್ಶನವಾಗಿತ್ತು. ಜತೆಗೆ, ಒಂದು ಸಾವಿರ ಕೋಟಿ ಹಣ ಗಳಿಸಿದ ಸಿನಿಮಾಗಳ ಪಟ್ಟಿಯಲ್ಲಿ ಸೇರ್ಪಡೆಯಾದ 33ನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

‘ದಂಗಲ್‌’ ಚಿತ್ರವನ್ನು ನಿತೇಶ್‌ ತಿವಾರಿ ನಿರ್ದೇಶಿಸಿದ್ದು, ಭಾರತಕ್ಕೆ ಕುಸ್ತಿಯಲ್ಲಿ ಚಿನ್ನದ ಪದಕ ದೊರಕಬೇಕೆಂಬ ಛಲದಲ್ಲಿ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕುಸ್ತಿಪಟುಗಳನ್ನಾಗಿಸುವ ಮಹಾವೀರ್‌ ಸಿಂಗ್‌ ಪಾತ್ರವನ್ನು ಅಮೀರ್‌ ಖಾನ್‌ ನಿರ್ವಹಿಸಿದ್ದರು.

ಮಹಾವೀರ್‌ ಸಿಂಗ್‌ನ ಮಕ್ಕಳಾದ ಗೀತಾ ಮತ್ತು ಬಬಿತಾ ಪಾತ್ರದಲ್ಲಿ ಫಾತಿಮಾ ಸನಾ ಶೇಖ್‌ ಮತ್ತು ಝೈರಾ ವಾಸಿಂ ಮಿಂಚಿದ್ದರು.

ಇಂಗ್ಲೀಷ್‌ ಭಾಷೆ ಹೊರತುಪಡಿಸಿ ಹೆಚ್ಚು ಹಣ ಗಳಿಸಿದ ಐದು ಸಿನಿಮಾಗಳ ಪೈಕಿ ‘ದಂಗಲ್‌’ ಕೂಡ ಒಂದಾಗಿದೆ. ಚೀನಿ ಭಾಷೆಯ ‘ದಿ ಮೆರ್ಮೇಯ್ಡ್’, ಮಾನಾಸ್ಟರ್‌ ಹಂಟ್‌, ಪ್ರಾನ್ಸ್‌ ಮೂಲದ ‘ದಿ ಇಂಟೆಚಬಲ್ಸ್’ ಜಪಾನ್‌ ಮೂಲದ ’ಯುವರ್‌ ನೇಮ್‌’ ನಂತರದ ಸ್ಥಾನವನ್ನು ದಂಗಲ್‌ ಪಡೆದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry