ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಜಲನಗರ ಠಾಣೆಯ ವಾಹನ ನಿಲುಗಡೆ ಸ್ಥಳದಲ್ಲಿ ಮದ್ಯದ ಪಾರ್ಟಿ – ಎಎಸ್‌ಐ, ಕಾನ್‌ಸ್ಟೆಬಲ್‌ ಅಮಾನತು

Last Updated 14 ಜೂನ್ 2017, 9:56 IST
ಅಕ್ಷರ ಗಾತ್ರ

ವಿಜಯಪುರ: ಇಲ್ಲಿನ ಜಲನಗರ ಪೊಲೀಸ್ ಠಾಣೆಯ ವಾಹನ ನಿಲುಗಡೆ ಸ್ಥಳದಲ್ಲಿ ನಡೆದಿರುವ ಮದ್ಯದ ಪಾರ್ಟಿ ಬಹಳ ದಿನಗಳ ಹಿಂದೆ ಆಗಿರುವ ಘಟನೆ. ಅಶಿಸ್ತು ಸಹಿಸಲು ಸಾಧ್ಯವಿಲ್ಲ. ಪ್ರಕರಣದಲ್ಲಿ ಆರೋಪಿಯಾಗಿರುವ ಎಎಸ್‌ಐ ಎಸ್‌.ಎಸ್‌. ಮಾಳೇಂಗಾವ್‌, ಪೊಲೀಸ್ ಕಾನ್‌ಸ್ಟೆಬಲ್‌ ಐ.ವೈ. ಸೊಡ್ಡಿ ಅಮಾನತು ಮಾಡಲಾಗಿದೆ ಎಂದು ಎಸ್‌ಪಿ ಕುಲದೀಪ್ ಕುಮಾರ್‌ ಜೈನ್ ಹೇಳಿದ್ದಾರೆ.

ಜಲನಗರ ಪೊಲೀಸರ ಮದ್ಯ ಪಾರ್ಟಿ ಪ್ರಕರಣ ಸಂಬಂಧ ಎಸ್‌ಪಿ ಕುಲದೀಪ್ ಕುಮಾರ್‌ ಜೈನ್ ಅವರು ಠಾಣೆಗೆ ಭೇಟಿನೀಡಿ ವಿಚಾರಣೆ ನಡೆಸಿದ್ದಾರೆ.

ಮದ್ಯ ಸರಬರಾಜು ಮಾಡಿದ ಆರೋಪ ಕೇಳಿ ಬಂದಿರುವ ಮಹಿಳಾ ಕಾನ್‌ಸ್ಟೆಬಲ್ ಪದ್ಮಾ ರಾಠೋಡ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ಪೊಲೀಸ್ ಠಾಣೆಯ ವಾನ ನಿಲುಗಡೆ ಸ್ಥಳದಲ್ಲಿ ಮದ್ಯ ಸೇವಿಸಿರುವುದು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕುಲದೀಪ್ ಕುಮಾರ್‌ ಜೈನ್ ಹೇಳಿದ್ದಾರೆ.

ಪಾರ್ಟಿ ನಡೆಸಿದ ಪೊಲೀಸರ ವಿರುದ್ಧ ಧಿಕ್ಕಾರ
ಘಟನೆ ಖಂಡಿಸಿ ಕನಾ೯ಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದ್ದು, ಪಾರ್ಟಿ ನಡೆಸಿದ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT