ಮೊದಲ ಸೆಮಿಫೈನಲ್‌: ಟಾಸ್‌ ಗೆದ್ದ ಪಾಕಿಸ್ತಾನ ಬೌಲಿಂಗ್‌ ಆಯ್ಕೆ

7

ಮೊದಲ ಸೆಮಿಫೈನಲ್‌: ಟಾಸ್‌ ಗೆದ್ದ ಪಾಕಿಸ್ತಾನ ಬೌಲಿಂಗ್‌ ಆಯ್ಕೆ

Published:
Updated:
ಮೊದಲ ಸೆಮಿಫೈನಲ್‌: ಟಾಸ್‌ ಗೆದ್ದ ಪಾಕಿಸ್ತಾನ ಬೌಲಿಂಗ್‌ ಆಯ್ಕೆ

ಕಾರ್ಡಿಫ್‌: ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಪಾಕಿಸ್ತಾನ ತಂಡ ಬೌಲಿಂಗ್‌ ಆಯ್ದುಕೊಂಡಿದೆ.

ಲೀಗ್‌ ಹಂತದಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಗೆಲುವು ಕಂಡು ಅಜೇಯವಾಗಿ ಸೆಮಿಫೈನಲ್‌ ಪ್ರವೇಶಿಸಿರುವ ಆತಿಥೇಯ ಇಂಗ್ಲೆಂಡ್ ತಂಡ ಪಂದ್ಯ ಗೆಲ್ಲುವ ನೆಚ್ಚಿನ ತಂಡವೆನಿಸಿದೆ. ಆದರೆ, ಎಯಾನ್‌ ಮಾರ್ಗನ್‌ ಪಡೆಯ ಸವಾಲನ್ನು ಮೆಟ್ಟಿನಿಲ್ಲಲು ಸರ್ಫರಾಜ್ ಅಹಮ್ಮದ್ ನೇತೃತ್ವದ ಪಾಕಿಸ್ತಾನ ತಂಡ ಸಹ ತುದಿಗಾಲಲ್ಲಿ ನಿಂತಿದೆ.

ಉಭಯ ತಂಡಗಳು ಮಿನಿ ವಿಶ್ವಕಪ್‌ ಖ್ಯಾತಿಯ ಈ ಪಂದ್ಯವಾಳಿಯಲ್ಲಿ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಕಳೆದ ಬಾರಿ ಇಂಗ್ಲೆಂಡ್‌ ಫೈನಲ್‌ನಲ್ಲಿ ಭಾರತದ ಎದುರು ಫೈನಲ್‌ ಪಂದ್ಯದಲ್ಲಿ ಸೋಲು ಕಂಡು ರನ್ನರ್‌ ಅಪ್‌ ಸ್ಥಾನ ಗಳಿಸಿತ್ತು.

ಈ ಪಂದ್ಯದಲ್ಲಿ ಗೆಲ್ಲುವ ತಂಡ, ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಜಯಗಳಿಸುವ (ಭಾರತ–ಬಾಂಗ್ಲಾದೇಶ) ತಂಡದೆದುರು ಪೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಲಿದೆ.

ತಂಡಗಳು ಇಂತಿವೆ

ಇಂಗ್ಲೆಂಡ್:
ಏಯಾನ್ ಮಾರ್ಗನ್ (ನಾಯಕ), ಮೊಯಿನ್ ಅಲಿ, ಜಾನಿ ಬೆಸ್ಟೊ, ಜೇಕ್ ಬಾಲ್, ಸ್ಯಾಮ್ ಬಿಲ್ಲಿಂಗ್ಸ್‌, ಅಲೆಕ್ಸ್‌ ಹೇಲ್ಸ್‌, ಜಾಸ್ ಬಟ್ಲರ್, ಲಿಯಾಮ್ ಪ್ಲಂಕೆಟ್, ಆದಿಲ್ ರಶೀದ್, ಜೋ ರೂಟ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಸ್ಟೀವನ್ ಫಿನ್.

ಪಾಕಿಸ್ತಾನ: ಸರ್ಫರಾಜ್ ಅಹಮ್ಮದ್ (ನಾಯಕ), ಅಹಮದ್ ಶೆಹಜಾದ್, ಅಜರ್ ಅಲಿ, ಬಾಬರ್ ಆಜಂ, ಫಾಹೀಮ್ ಅಶ್ರಫ್, ಫಕ್ರ್ ಜಮಾನ್, ಹ್ಯಾರಿಸ್ ಸೊಹೈಲ್, ಹಸನ್ ಅಲಿ, ಇಮಾದ್ ವಾಸೀಂ, ಜುನೈದ್ ಖಾನ್, ಮೊಹಮ್ಮದ್ ಅಮೀರ್, ಮೊಹಮ್ಮದ್ ಹಫೀಜ್, ಶಾದಾಬ್ ಖಾನ್, ಶೋಯಬ್ ಮಲಿಕ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry