ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಚಿತ್ವ ಪಾಲನೆಯಿಂದ ರೋಗ ದೂರ

Last Updated 14 ಜೂನ್ 2017, 9:58 IST
ಅಕ್ಷರ ಗಾತ್ರ

ರೋಣ: ಭಾರತದಲ್ಲಿ ಐದು ವರ್ಷದ ಮಕ್ಕಳ ಮರಣ ದರ ಪ್ರತಿ ಸಾವಿರಕ್ಕೆ 43 ಇದ್ದು, ಕರ್ನಾಟಕದಲ್ಲಿ ಪ್ರತಿ ಸಾವಿರ ಮಕ್ಕಳಿಗೆ 31 ಮಕ್ಕಳು ಸಾವಿಗೀಡಾಗು ತ್ತಿದ್ದಾರೆ. ಈ ಮರಣ ಪ್ರಮಾಣಕ್ಕೆ  ಅತಿ ಸಾರ ಭೇದಿ ಮುಖ್ಯ ಕಾರಣಗಳಲ್ಲಿ ಒಂದಾಗಿದ್ದು, ಅತಿಸಾರ ಭೇದಿಯಿಂದ ಬಳಲುವ ಮಕ್ಕಳ ಪೈಕಿ ಶೇ 10ರಷ್ಟು ಮಕ್ಕಳು ಸಾವಿಗೀಡಾಗುತ್ತಿದ್ದಾರೆ.

ಅತಿ ಸಾರ ಭೇದಿಯನ್ನು ಸುಲಭವಾಗಿ ನಿಯಂತ್ರಿಸಬಹುದು ಎಂದು ರೋಣ ತಾಲ್ಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಎಚ್.ಎಲ್. ಗಿರಡ್ಡಿ ಹೇಳಿದರು. ಪಟ್ಟಣದ ಡಾ.ಭೀಮಸೇನ ಜೋಶಿ ತಾಲ್ಲೂಕು  ಆಸ್ಪತ್ರೆ ಆವರಣದಲ್ಲಿ ಏರ್ಪಡಿ ಸಿದ್ದ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜೂನ್ 12ರಿಂದ 24ರವರೆಗೆ ನಡೆಯುವ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ದೇಶದಾದ್ಯಂತ ನಡೆಯಲಿದ್ದು, ಈ ಕಾರ್ಯಕ್ರಮದ ಮೂಲಕ ಅತಿಸಾರ ಭೇದಿಯಿಂದಾಗುವ ಮಕ್ಕಳ ಸಾವನ್ನು  ಸೊನ್ನೆಗೆ ತರುವ ಉದ್ದೇಶವಿದೆ ಎಂದರು.

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ.ಹಾದಿಮನಿ ಮಾತನಾಡಿ, ರೋಣ ತಾಲ್ಲೂಕಿನಲ್ಲಿ  ಆಶಾ ಮತ್ತು ಅಂಗವಾಡಿ ಕಾರ್ಯಕರ್ತೆಯರು ಮತ್ತು ಆರೋಗ್ಯ ಕಾರ್ಯಕರ್ತರು ಮನೆ– ಮನೆಗೆ ಭೇಟಿ ನೀಡಿ, ಅತಿಸಾರ ಭೇದಿ ನಿಯಂತ್ರಣ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಅತಿಸಾರ ಭೇದಿ ಬರಲು ಅಶುದ್ಧ ಪರಿಸರ, ವೈಯಕ್ತಿಕ ಶುಚಿತ್ವದ ಕೊರತೆ, ಸರಿಯಾಗಿ ಕೈತೊಳೆಯದೇ ಇರುವುದು ಮತ್ತು ಬಯಲು ಮಲವಿಸರ್ಜನೆ ಕಾರಣವಾಗಿವೆ. ಆದ್ದರಿಂದ ಪರಿಸರ ನೈರ್ಮಲ್ಯ, ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳಬೇಕು.

ಆಹಾರ ಸೇವಿಸುವ ಮುನ್ನ ಮತ್ತು ಶೌಚಕ್ಕೆ ಹೋಗಿ ಬಂದ ನಂತರ ತಪ್ಪದೇ ಕೈತೊಳೆ ಯಬೇಕು. ಬಯಲು ಶೌಚವನ್ನು ತಪ್ಪಿಸ ಬೇಕು. ಇದರಿಂದ ಅತಿಸಾರ ಭೇದಿ ಸೇರಿ ಹಲವು ಸಾಂಕ್ರಾಮಿಕ ಕಾಯಿಲೆ ತಡೆಯ ಬಹುದು ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷ ಶಫೀಕ್ ಮೂಗ ನೂರ, ಡಾ.ರಮೇಶ ದೇವಗಿಹಳ್ಳಿ, ಡಾ.ಜಿ.ಬಿ. ಕೊಣ್ಣೂರ, ಡಾ.ನಿರ್ಮಲಾ, ನಾಶಿಪುಡಿ, ಹಿರಿಯ ಆರೋಗ್ಯ ಸಹಾಯ ಕರಾದ ಬಿ.ಆರ್.ಪಾಟೀಲ, ಮಲ್ಲಿಕಾ ರ್ಜುನ ಹಿರೇಮಠ, ವಿ.ಡಿ.ಕಾಳೆ, ರಾಮಜಿ ರಡ್ಡೇರ ಇದ್ದರು.

‘ಸೂಕ್ತ ಮನ್ನೆಚ್ಚರಿಕೆ ಅಗತ್ಯ’
ನರೇಗಲ್: ಪಾದಗಟ್ಟಿ ಹತ್ತಿರ ಇರುವ ನಂ. 127 ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಅತಿಸಾರ ಬೇಧಿ ಜಾಗೃತಿ– ನಿಯಂತ್ರಣ ಕುರಿತು ಕಾರ್ಯಕ್ರಮ ನಡೆಯಿತು.
ನರೇಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಭಾರ ವೈದ್ಯಾಧಿಕಾರಿ ಡಾ.ರೇಖಾ ಹೊಸಮನಿ ಮಾತನಾಡಿ, ಆರೋಗ್ಯ ಕೇಂದ್ರದಿಂದ 10 ಕಡೆ ಅತಿ ಸಾರ ಭೇದಿ ಜಾಗೃತಿ–ನಿಯಂತ್ರಣ ಕುರಿತು ತಿಳವಳಿಕೆ ಕೇಂದ್ರಗಳನ್ನು ತೆರೆಯಲಾಗಿದೆ. ನರೇಗಲ್ ವ್ಯಾಪ್ತಿಯಲ್ಲಿ 2,678 ಐದು ವರ್ಷದ ಒಳಗಿನ ಮಕ್ಕಳು ಇದ್ದು ಅವರ ಆರೋಗ್ಯದ ದೃಷ್ಟಿಯಿಂದ ಮುಂಜಾಗ್ರತೆ ವಹಿಸುವುದು ಅಗತ್ಯ ಎಂದರು.

ಕಿರಿಯ ಆರೋಗ್ಯ ಸಹಾಯಕ ಎಸ್.ಎಫ್. ಅಂಗಡಿ ಮಾತನಾಡಿ ಬೇಸಿಗೆ ಮತ್ತು ಪೂರ್ವ ಮುಂಗಾರು ಮಾಸಗಳಲ್ಲಿ ಅತಿಸಾರ ಬೇಧಿ ತಲೆದೋರುವ ಸಾಧ್ಯತೆ ಇದ್ದು, ಇದರಿಂದುಂಟಾಗುವ ನಿರ್ಜಲತೆ ಯನ್ನು ತಡೆಗೆ ಒ.ಆರ್.ಎಸ್ ಚಿಕಿತ್ಸೆ, ಜಿಂಕ್ ಮಾತ್ರೆ ಹಾಗೂ ಪೌಷ್ಟಿಕ ಆಹಾರ ಒದಗಿಸಬೇಕು.

ಶುದ್ಧ ಕುಡಿಯುವ ನೀರು, ತಾಯಿ ಎದೆಹಾಲು ಉಣಿಸುವಿಕೆ, ಸ್ವಚ್ಛತೆ ಕಾಪಾಡುವುದರಿಂದ ಅತಿಸಾರ ಭೇದಿ ತಡೆಯಬಹುದು ಎಂದರು. ಆರೋಗ್ಯ ಸಹಾಯಕ ಎಸ್.ಎನ್. ಪಾಟೀಲ, ಎಸ್.ವಿ.ಹಿರೆವಡೆಯರ, ಶಿವಾ ನಂದ ಗೋಗೆರಿ, ಜಯಶ್ರೀ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT