ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾ.ಕ.ರ.ಸಾ. ಸಂಸ್ಥೆಗೆ ₹97 ಲಕ್ಷ ನಷ್ಟ

Last Updated 14 ಜೂನ್ 2017, 10:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಶಾಶ್ವತ ನೀರಾವರಿ ಯೋಜನೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದರಿಂದ ಬೆಳಗಾವಿ ವಿಭಾಗ ವ್ಯಾಪ್ತಿಯ ವಿವಿಧ ಜಿಲ್ಲೆಗಳಲ್ಲಿ ಬಸ್‌ ಸಂಚಾರ ಸ್ಥಗಿತ­ಗೊಂಡಿತ್ತು. ಇದರಿಂದಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ₹ 97 ಲಕ್ಷ ನಷ್ಟವಾಗಿದೆ.

ಮಹಾದಾಯಿ, ಕಳಸಾ–ಬಂಡೂರಿ ನಾಲಾ ಯೋಜನೆ ಜಾರಿ ಬೇಡಿಕೆ ಪ್ರಮು­ಖವಾಗಿದ್ದರಿಂದ ಧಾರವಾಡ ಜಿಲ್ಲೆಯಲ್ಲಿ ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತ­ವಾಗಿತ್ತು. ಅದರಲ್ಲೂ ಹುಬ್ಬಳ್ಳಿ, ನವಲ­ಗುಂದ, ನರಗುಂದದಲ್ಲಿ ಬಸ್‌ ಸಂಚಾರ ಸಂಪೂರ್ಣ ಸ್ಥಗಿತಗೊಂಡಿ­ದ್ದರಿಂದ ನಷ್ಟದ ಪ್ರಮಾಣ ಈ ಭಾಗದಲ್ಲಿ ಹೆಚ್ಚಾಗಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ನಿತ್ಯ 2,951 ಮಾರ್ಗಗಳಲ್ಲಿ ಸಂಸ್ಥೆಯ ವಾಹ­ನ­ಗಳು ಸಂಚರಿಸುತ್ತವೆ. ಜೂನ್‌ 12 ರಂದು ಕರ್ನಾಟಕ ಬಂದ್ ಇದ್ದುದ್ದರಿಂದ ಗಲಭೆ ಆಗಬಹುದು ಎಂದು ಬೆಳಿಗ್ಗೆ­ಯಿಂದಲೇ ಮುನ್ನೆಚ್ಚರಿಕೆ ಕ್ರಮವಾಗಿ ಬಂದ್ ಬಿರುಸಿದ್ದ ಕಡೆಗಳಲ್ಲಿ ಬಸ್‌ ಗಳು ರಸ್ತೆಗೆ ಇಳಿಯಲಿಲ್ಲ. ಒಟ್ಟು ಮಾರ್ಗಗಳಲ್ಲಿ 2,449 ಮಾರ್ಗಗಳಲ್ಲಿ ಬಸ್‌ ಸಂಚರಿಸಿದರೆ, 502 ಮಾರ್ಗಗಳಲ್ಲಿ ಬಸ್‌ ಮಧ್ಯಾಹ್ನದವರೆಗೂ ಸಂಚರಿಸಲಿಲ್ಲ.

ಉತ್ತರ ಕರ್ನಾಟಕದ ವಾಣಿಜ್ಯ ಕೇಂದ್ರವಾದ ಹುಬ್ಬಳ್ಳಿಯಿಂದ ಬೆಳಿಗ್ಗೆ 8 ಗಂಟೆಯವರೆಗೂ ವಾಹನಗಳು ನಿರಾ­ತಂಕ­ವಾಗಿ ಸಂಚರಿಸಿದವು. ಆ ನಂತರ ಪ್ರತಿಭಟನೆಯ ಕಾವು ಹೆಚ್ಚಾಗಿದ್ದರಿಂದ ಸಂಚಾರ ಸಾಧ್ಯವಾಗಲಿಲ್ಲ. ಹುಬ್ಬಳ್ಳಿ­ವೊಂದರಲ್ಲಿಯೇ 403 ಮಾರ್ಗಗಳಲ್ಲಿ ಬಸ್‌ ಸಂಚಾರ ರದ್ದಾಗಿದ್ದರಿಂದ ₹ 49 ಲಕ್ಷ ನಷ್ಟವಾಗಿದೆ.

ಗದಗ ಜಿಲ್ಲೆಯಲ್ಲಿಯೂ ಹೋರಾ­ಟದ ಕಾವು ಹೆಚ್ಚಿದ್ದರಿಂದ 25 ಮಾರ್ಗ­ಗಳಲ್ಲಿ ಬಸ್‌ ಸಂಚರಿಸಲಿಲ್ಲ. ಬೆಳಿಗ್ಗೆ ಸ್ವಲ್ಪ ಹೊತ್ತು ಬಸ್‌ ಸಂಚರಿಸಿದವು. ಆ ನಂತರ ಸಂಚಾರ ಹಿಂತೆಗೆದುಕೊಳ್ಳಲಾಯಿತು. ಅದರಿಂದ ಒಟ್ಟು ₹ 20 ಲಕ್ಷ ನಷ್ಟವಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಯಾಣಿಕರ ಪರದಾಟ: ಹುಬ್ಬಳ್ಳಿ, ನರಗುಂದ, ನವಲಗುಂದ ಪ್ರದೇಶದಲ್ಲಿ ಬಸ್‌ಗಳು ಮಧ್ಯಾಹ್ನದವರೆಗೆ ಸಂಚರಿ­ಸದ ಕಾರಣ ಪ್ರಯಾಣಿಕರು ಪರದಾಡ ಬೇಕಾಯಿತು. ಶಾಲಾ–ಕಾಲೇಜುಗಳಿಗೆ, ಕಚೇರಿಗಳಿಗೆ ರಜೆ ಇರಲಿಲ್ಲ. ಶಾಲೆ ಹಾಗೂ ಕಚೇರಿಗಳಿಗೆ ತೆರಳಲು ವಿದ್ಯಾರ್ಥಿ­ಗಳು, ನೌಕರರು ತೀವ್ರ ತೊಂದರೆ ಎದುರಿಸಬೇಕಾಯಿತು.

‘ಪ್ರತಿಭಟನೆ ತೀವ್ರವಾಗಿರುವ ಕಡೆ­ಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಬಸ್‌ ಸಂಚಾರ ಸ್ಥಗಿತಗೊಳಿಸಿದ್ದರಿಂದ ಯಾವುದೇ ಬಸ್‌ ಹಾನಿಗೀಡಾಗಿಲ್ಲ. ಪ್ರತಿ­ಭಟನೆಯ ಕಾವು ತಣ್ಣಗಾದ ಮೇಲೆ ಮಧ್ಯಾಹ್ನದ ನಂತರ ಸಂಚಾರ ಆರಂಭಿ­ಸ­ಲಾಯಿತು’ ಎಂದು ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ತಿಳಿಸಿದರು.

ಅಂಕಿ– ಅಂಶ

2,951 ಒಟ್ಟು ವಾಹನಗಳ ಮಾರ್ಗ

2,502 ಸಂಚರಿಸಿದ ವಾಹನಗಳ ಮಾರ್ಗ

502 ಸಂಚರಿಸದ ವಾಹನಗಳ ಮಾರ್ಗ

* * 

ಬಸ್‌ಗಳಿಗೆ ಹಾನಿಯಾಗ­ಬಾರದು ಎಂದು ಮಧ್ಯಾಹ್ನದ­ವರೆಗೆ ಕೆಲವು ಕಡೆ ವಾಹನ ಸಂಚಾರ ತಡೆ ಹಿಡಿಯಲಾಗಿತ್ತು. ಮಧ್ಯಾಹ್ನದ ನಂತರ ಎಂದಿನಂತೆ ಸಂಚರಿಸಿವೆ
ಸದಾನಂದ ಡಂಗನವರ
ಅಧ್ಯಕ್ಷ, ವಾಕರಸಾ ಸಂಸ್ಥೆ, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT