ಬಸ್ ನಿಲ್ದಾಣದಲ್ಲಿ ಕ್ಯಾಮೆರಾ ಕಣ್ಗಾವಲು

7

ಬಸ್ ನಿಲ್ದಾಣದಲ್ಲಿ ಕ್ಯಾಮೆರಾ ಕಣ್ಗಾವಲು

Published:
Updated:
ಬಸ್ ನಿಲ್ದಾಣದಲ್ಲಿ ಕ್ಯಾಮೆರಾ ಕಣ್ಗಾವಲು

ಕಂಪ್ಲಿ/ ಕೊಟ್ಟೂರು: ಇಲ್ಲಿಯ ಹೊಸ ಬಸ್ ನಿಲ್ದಾಣ ದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸ ಲಾಗಿದ್ದು, ಪ್ರಯಾಣಿಕರ ಬಹುದಿನಗಳ ನಿರೀಕ್ಷೆ ಈಡೇರಿದೆ. ನಿಲ್ದಾಣದಲ್ಲಿ ಈಗಾಗಲೆ 9 ಕಡೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ, ಬಸ್ ನಿಲ್ದಾಣದೊಳಗೆ ಬಂದು ಹೋಗುವ ಪ್ರಯಾಣಿಕರು, ಬಸ್‌ಗಳ, ಇತರೆ ವಾಹನಗಳ ದೃಶ್ಯಾವಳಿಗಳು ಮಾನಿಟರ್‌ ನಲ್ಲಿ ಸೆರೆಯಾಗುವ ವ್ಯವಸ್ಥೆ ಮಾಡಲಾಗಿದೆ.

9 ಸಿಸಿ ಟಿವಿ ಕ್ಯಾಮೆರಾಗಳಲ್ಲಿ ಒಂದು ಪಿಟಿಜೆಡ್ 360ಡಿಗ್ರಿ ಸುತ್ತುವ ಕ್ಯಾಮೆರಾ, 4 ಸಿಸಿ ಟಿವಿ ಕ್ಯಾಮೆರಾಗಳು ನಿಲ್ದಾಣದ ಆಯ್ದ ಮೂಲೆಗಳಲ್ಲಿ ಮತ್ತು ಇನ್ನೂ 4 ಸಿಸಿ ಟಿವಿ ಕ್ಯಾಮೆರಾ ದೂರದ ಚಿತ್ರಗಳನ್ನು ಸೆರೆ ಹಿಡಿಯುವ ರೀತಿಯಲ್ಲಿ ಅಳವಡಿ ಸಿದ್ದು, ಈಗಾಗಲೇ ಕಾರ್ಯಾರಂಭವಾಗಿವೆ.

ಪ್ರತಿದಿನ ರಾಜ್ಯದ ವಿವಿಧ ಸಾರಿಗೆ ಘಟಕಗಳಿಂದ 400ಕ್ಕೂ ಹೆಚ್ಚು ಬಸ್‌ಗಳು ಇಲ್ಲಿನ ಬಸ್‌ ನಿಲ್ದಾಣಕ್ಕೆ ಬಂದು ಹೋಗುತ್ತವೆ. ಆದರೆ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಇಲ್ಲ ಎನ್ನುವ ಆರೋಪ ಜೊತೆಗೆ ವಿಶೇಷವಾಗಿ ಸಂಜೆಯ ನಂತರ ಮಹಿಳೆಯರು ನಿಲ್ದಾಣ ಪ್ರವೇಶಿಸಲು ಹಿಂದೇಟು ಹಾಕುವಂಥ ಪರಿಸ್ಥಿತಿ ಎದುರಾಗಿತ್ತು. ಇದೀಗ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿವುದರಿಂದ ಮಹಿಳೆ ಯರು ನಿರ್ಭಯವಾಗಿ ನಿಲ್ದಾಣದಲ್ಲಿ ಬಸ್‌ಗಳನ್ನು ನಿರೀಕ್ಷಿಸಬಹುದು.

ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನ ₹16ಲಕ್ಷ ವೆಚ್ಚದಲ್ಲಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ, ಕೂಡ್ಲಿಗಿ, ಸಂಡೂರು, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನಹಡಗಲಿ, ಸಿರುಗುಪ್ಪ ಮತ್ತು ಕಂಪ್ಲಿ ಬಸ್ ನಿಲ್ದಾಣಗಳಲ್ಲಿ ಹೈಟೆಕ್ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಮಯೂರ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್‌ಗೆ ವಹಿಸಿಕೊಂಡಿದೆ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ಮಾಹಿತಿ ನೀಡಿದರು.

ಅಕ್ರಮಕ್ಕೆ ಕಡಿವಾಣ

ಕೊಟ್ಟೂರು ಪಟ್ಟಣದ ಕೆಎಸ್‌ಆರ್‌ ಟಿಸಿ ಬಸ್ ನಿಲ್ದಾಣದಲ್ಲಿ 9 ಸಿ.ಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಅಕ್ರಮ ಚಟುವಟಿಕೆಗಳಿಗೆ ಇಲಾಖೆ ಕಡಿವಾಣ ಹಾಕಿದೆ.

ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಸ್ಥಳಾವಕಾಶದ ಕೊರತೆಯಿಂದ ಜನಸಂದಣಿ ಮಧ್ಯ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದರು.

ಇತ್ತೀಚೆಗೆ ಬಸ್‌ ನಿಲ್ದಾಣದ ಆವರಣದಲ್ಲಿ ಸಣ್ಣಪುಟ್ಟ ಕಳ್ಳತನ ಹಾಗೂ ಮಹಿಳಾ ಪ್ರಯಾಣಿಕರಿಗೆ ಕಿರುಕುಳ ನೀಡಿದ ಪ್ರಕರಣಗಳು ವರದಿಯಾಗಿದ್ದವು. ಈಗ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿರು ವುದರಿಂದ ಸಾರಿಗೆ ಸಂಸ್ಥೆ ಸಿಬ್ಬಂದಿ ಹಾಗೂ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ರಾತ್ರಿ ವೇಳೆ ನಿಲ್ದಾಣ ಆವರಣದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿ ದ್ದವು. ಇದನ್ನು ತಡೆಗಟ್ಟಲು ಹಾಗೂ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಸಿ.ಸಿ. ಕ್ಯಾಮೆರಗಳು ಉಪಯುಕ್ತವಾಗು ತ್ತಿವೆ. ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಮಂಜೂರಾಗಿರುವ ಅನುದಾನದಲ್ಲಿ ಒಟ್ಟು 9 ಹೈಟೆಕ್ ಸಿಸಿ ಟಿವಿ ಕ್ಯಾಮೆರಾಗಳನ್ನು ನಿಲ್ದಾಣದ ವಿವಿಧ ಸ್ಥಳಗಳಲ್ಲಿ ಅಳವಡಿಸಿರುವುದು ಉತ್ತಮ ಕಾರ್ಯ ಎಂದು ಸಾರ್ವಜನಿಕರು ಶ್ಲಾಘಿಸಿದ್ದಾರೆ.

* * 

ಬಸ್ ನಿಲ್ದಾಣದ ಆಯ್ದ 9 ಸ್ಥಳದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿರುವುದರಿಂದ ಅಪರಾಧ ತಡೆ ಮತ್ತು ಪತ್ತೆಗೆ ತುಂಬಾ ಅನುಕೂಲವಾಗಿದೆ

ನಾರಾಯಣರಾವ್,  ಬಸ್ ನಿಲ್ದಾಣ ಸಂಚಾರ ನಿಯಂತ್ರಕರು, ಕಂಪ್ಲಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry