ಲಂಚ ಸ್ವೀಕಾರ: ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಎಸಿಬಿ ಬಲೆಗೆ

7

ಲಂಚ ಸ್ವೀಕಾರ: ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಎಸಿಬಿ ಬಲೆಗೆ

Published:
Updated:
ಲಂಚ ಸ್ವೀಕಾರ: ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಎಸಿಬಿ ಬಲೆಗೆ

ಚಿಕ್ಕಮಗಳೂರು: ಇ–ಸ್ವತ್ತು ಖಾತಾ ಪತ್ರ ನೀಡಲು ಲಂಚ ಪಡೆಯುತ್ತಿದ್ದಾಗ ಜಿಲ್ಲೆಯ ತರೀಕೆರೆ ತಾಲ್ಲೂಕಿನ ಎಂಸಿ ಹಳ್ಳಿ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಚಂದ್ರಹಾಸ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ಚಿಕ್ಕಮಗಳೂರಿನ ಎಸಿಬಿ ಅಧಿಕಾರಿಗಳು ಬುಧವಾರ ಮಧ್ಯಾಹ್ನ ಚಂದ್ರಹಾಸ ಅವರನ್ನು ಬಂಧಿಸಿದ್ದಾರೆ.

‘ಈ ಕಾರ್ಯದರ್ಶಿ ಗ್ರಾಮದ ವ್ಯಕ್ತಿಯೊಬ್ಬರಿಗೆ ಖಾತಾ ಪತ್ರ ನೀಡಲು ₹ 3,000 ಲಂಚಕ್ಕೆ ಬೇಡಿಕೆ ಇಟ್ಟು, ₹ 2,000 ಮುಂಗಡವಾಗಿ ಪಡೆದಿದ್ದರು. ಬುಧವಾರ ಖಾತಾಪತ್ರ ವಿತರಿಸುವಾಗ ಬಾಕಿ ₹ 1,000 ಲಂಚ ಪಡೆಯುತ್ತಿದ್ದಾಗ ದಾಳಿ ಮಾಡಿ ಬಂಧಿಸಲಾಯಿತು’ ಎಂದು ಡಿವೈಎಸ್ಪಿ ಚಂದ್ರಶೇಖರ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry