ಸವಿ ಸವಿ ನೆನಪು, ಜಾತ್ರೆಯ ನೆನಪು...

7

ಸವಿ ಸವಿ ನೆನಪು, ಜಾತ್ರೆಯ ನೆನಪು...

Published:
Updated:
ಸವಿ ಸವಿ ನೆನಪು, ಜಾತ್ರೆಯ ನೆನಪು...

ಜಾತ್ರೆಯ ನೆನಪುಗಳೇ ಹಾಗೆ. ರಥ ಸಾಗುವಾಗ ಸೇರುವ ಜನಜಂಗುಳಿಯಂತೆ, ತುಂಬಿದ ಅಣೆಕಟ್ಟೆಯಿಂದ ಧುಮ್ಮಿಕ್ಕುವ ನೀರಿನ ಪ್ರವಾಹದಂತೆ ಜಾತ್ರೆಯ ನೆನಪುಗಳು ನಾ ಮುಂದು, ತಾ ಮುಂದು ಎನ್ನುತ್ತಾ ಒತ್ತರಿಸಿಬರುತ್ತವೆ.

ರಾಜಗಾಂಭೀರ್ಯದಿಂದ ಹೊರಟ ರಥಕ್ಕೆ ಉತ್ತತ್ತಿ–ಬಾಳೆಹಣ್ಣು ಎಸೆದ ನೆನಪು, ಹೊಸ ಅಂಗಿ–ಚೊಣ್ಣ ಹಾಕಿ ಸಂಭ್ರಮಿಸಿದ ನೆನಪು, ಅಜ್ಜನನ್ನು ಪೀಡಿಸಿ ಪೀಪಿ ಕೊಡಿಸಿಕೊಂಡ ನೆನಪು, ಅವ್ವ ಮಾಡಿಟ್ಟ ಸಿಹಿ ತಿಂಡಿಯನ್ನು ತಟ್ಟೆ ತುಂಬಾ ಹರಡಿಕೊಂಡು ಹೊಟ್ಟೆ ಹಿಗ್ಗಿಸಿ ಹೊಡೆದ ನೆನಪು, ಅತ್ತೆಯ ಕೈಹಿಡಿದು ಜಾತ್ರೆಯಲ್ಲಿ ಸುತ್ತಾಡಿ, ಗಾಜಿನ ಬಳೆ ಹಾಕಿಸಿಕೊಂಡ ನೆನಪು, ಶೆಟ್ಟರ ಅಂಗಡಿಯಲ್ಲಿ ಬೆಂಡು–ಬತ್ತಾಸ ಖರೀದಿಸಿದ ನೆನಪು, ರಾತ್ರಿ ಪೂರಾ ನಿದ್ದೆಗೆಟ್ಟು ನಾಟಕ ನೋಡಿದ ನೆನಪು...

ಜೀವನೋತ್ಸಾಹದ ಪ್ರತೀಕವಾದ ಜಾತ್ರೆಯ ಇಂತಹ ನೆನಪುಗಳು ನಿಮ್ಮನ್ನು ಕಾಡುತ್ತಿವೆಯೇ? ‘ಕಾಮನಬಿಲ್ಲು’ ಜತೆ ಅಂತಹ ನೆನಪುಗಳನ್ನು ಹಂಚಿಕೊಳ್ಳಬಹುದು. ನಿಮ್ಮ ಪತ್ರಗಳು ಜೂನ್‌ 30ರೊಳಗೆ ನಮ್ಮ ಕೈಸೇರಬೇಕು. ವಿಳಾಸಕ್ಕೆ ಏಳನೇ ಪುಟದ ಅಂಚನ್ನು ನೋಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry