ಹ್ಯಾಂಗ್‌ ಓವರ್‌ ಆದಂತೆ ಕಾಣುವ ಮೇಕಪ್

7

ಹ್ಯಾಂಗ್‌ ಓವರ್‌ ಆದಂತೆ ಕಾಣುವ ಮೇಕಪ್

Published:
Updated:
ಹ್ಯಾಂಗ್‌ ಓವರ್‌ ಆದಂತೆ ಕಾಣುವ ಮೇಕಪ್

ಅತಿಯಾಗಿ ಆಲ್ಕೊಹಾಲ್ ಕುಡಿದು ನಶೆ ಇಳಿದ ನಂತರವೂ ಕಾಡುವ ಹ್ಯಾಂಗ್‌ ಓವರ್‌ನಿಂದ ಹೊರಬರಲು ಪಥ್ಯ ಅಥವಾ ಹ್ಯಾಂಗ್‌ ಓವರ್‌ ಆದಂತೆ ಕಾಣದಿರಲು, ಬಿಳಚಿಕೊಂಡ ಚರ್ಮ ಹಾಗೂ ಊದಿಕೊಂಡ ಕಣ್ಣುಗಳನ್ನು ಮರೆಮಾಚುವಂಥ ಮೇಕಪ್ ಮಾಡಿಕೊಳ್ಳುವವರನ್ನು ಕಂಡಿರುತ್ತೇವೆ.

ಆದರೆ ಹ್ಯಾಂಗ್ ಓವರ್ ಆದಂತೆ ಕಾಣಲೂ ಮೇಕಪ್ ಮಾಡಿಕೊಳ್ಳುವವರಿದ್ದಾರೆ. ಈ ಮೇಕಪ್ ಟ್ರೆಂಡ್‌ ಜಪಾನ್‌ನೆಲ್ಲೆಡೆ ಸುದ್ದಿಯಾಗುತ್ತಿದೆ. 2016ರಿಂದ ‘ಹ್ಯಾಂಗ್‌ ಓವರ್ ಮೇಕಪ್ ಟ್ರೆಂಡ್’ ಹುಟ್ಟಿಕೊಂಡು ಜಗಜ್ಜಾಹೀರಾಗಿದ್ದು.

  ಜಪಾನ್‌ನಲ್ಲಿ, ಸುಸ್ತಾದಂತೆ ಕಾಣಿಸುವ ಮೇಕಪ್ ಪ್ರಚಲಿತದಲ್ಲಿದ್ದರೆ, ಕೊರಿಯನ್ನರಿಗೆ, ಕಣ್ಣು ಊದಿಕೊಂಡಂತೆ ಕಾಣುವ ಮೇಕಪ್‌ ಮಾಡಿಕೊಳ್ಳುವುದೆಂದರೆ ತುಂಬಾ ಖುಷಿಯಂತೆ. ಈ ಹ್ಯಾಂಗ್‌ ಓವರ್‌ ಮೇಕಪ್ ಟ್ರೆಂಡ್ ಅನ್ನು ಇನ್ನಷ್ಟು ಪ್ರಚುರಪಡಿಸಲೆಂದೇ ಯೂಟ್ಯೂಬ್ ಟುಟೋರಿಯಲ್‌ಗಳ ಸಂಖ್ಯೆಯೂ ಹೆಚ್ಚುತ್ತಿದೆಯಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry