ಒಬ್ಬಂಟಿಗಳಿಗೆ ಮಾತ್ರ ಈ ಹೋಟೆಲ್‌

7

ಒಬ್ಬಂಟಿಗಳಿಗೆ ಮಾತ್ರ ಈ ಹೋಟೆಲ್‌

Published:
Updated:
ಒಬ್ಬಂಟಿಗಳಿಗೆ ಮಾತ್ರ ಈ ಹೋಟೆಲ್‌

ಸಾಮಾನ್ಯವಾಗಿ ಹೋಟೆಲ್‌ಗೆ ಮನೆಯವರು ಇಲ್ಲವೇ ಸ್ನೇಹಿತರೊಂದಿಗೆ ಹೋಗುವುದು ಹೆಚ್ಚಿನವರ ರೂಢಿ. ಬಿಸಿನೆಸ್‌, ಚರ್ಚೆಗಳ ತಾಣವಾಗಿಯೂ ಹಲವರು ಒಟ್ಟುಗೂಡಿ ಹೋಟೆಲ್‌ಗೆ ಹೋಗುತ್ತಾರೆ. ಹೋಟೆಲ್‌ಗಳಲ್ಲೂ ಅಷ್ಟೆ. ಎರಡು, ನಾಲ್ಕು, ಆರು, ಎಂಟು ಹೀಗೆ ಸಮ ಸಂಖ್ಯೆಯಲ್ಲೇ ಸೀಟುಗಳನ್ನೂ ಇಟ್ಟಿರುತ್ತಾರೆ. ಒಂದೇ ಕುರ್ಚಿಯಿರುವುದಂತೂ ವಿರಳವೇ.

ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ನೆದರ್‌ಲೆಂಡ್‌ನಲ್ಲಿ ಹೋಟೆಲೊಂದು ಹುಟ್ಟಿಕೊಂಡಿದೆ. ಇಲ್ಲಿ ಎಲ್ಲಿ ನೋಡಿದರೂ ಒಂಟಿ ಸೀಟ್‌ಗಳೇ. ‘ಒಂದು’ ಎನ್ನುವುದೇ ಏಕಾಂತ ಸೂಚಿಸುವ ಸಂಖ್ಯೆಯಾಗಿದ್ದು, ಅದಕ್ಕೆ  ಇಲ್ಲಿ ಪ್ರಾಶಸ್ತ್ಯ ನೀಡಲಾಗಿದೆಯಂತೆ. ಆದ್ದರಿಂದ ಏಕಾಂಗಿ ಅಥವಾ ಒಬ್ಬಂಟಿ ಇರುವವರೇ ಇಲ್ಲಿನ ಗಿರಾಕಿಗಳಂತೆ.

ತಿನ್ನುವುದನ್ನು ಮನಸಾರೆ ಅನುಭವಿಸಬೇಕು, ಹಾಗಾಗಬೇಕಾದರೆ ಒಬ್ಬರೇ ಕೂತು ತಿನ್ನಬೇಕು ಎಂಬುದನ್ನು ಸಾರುವ ಈ ಹೋಟೆಲ್‌ನಲ್ಲಿ ಒಬ್ಬರು ಬಂದರೆ ಮಾತ್ರ ಪ್ರವೇಶ ಲಭ್ಯ. ಒಬ್ಬರೇ ಅತಿ ಆರಾಮದಾಯಕವಾಗಿ ತಿನ್ನಲಿ ಎಂಬ ಕಾರಣಕ್ಕೆ ಒಂದೊಂದೇ ಟೇಬಲ್ ಕುರ್ಚಿಯನ್ನು ಇಡಲಾಗಿದೆ.

ಏಕಾಂತಪ್ರಿಯ ಗಿರಾಕಿಗಳೂ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದಾರಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry