ಚಕ್ರದ ಮೇಲೆ ಹಸಿರ ಉಯ್ಯಾಲೆ

7

ಚಕ್ರದ ಮೇಲೆ ಹಸಿರ ಉಯ್ಯಾಲೆ

Published:
Updated:
ಚಕ್ರದ ಮೇಲೆ ಹಸಿರ ಉಯ್ಯಾಲೆ

ಇದು ‘ಮಿನಿಮಲಿಸಂ’ ಕಾಲ. ಇದರೊಂದಿಗೆ ಪರಿಸರದ ಬಗ್ಗೆ ಕಾಳಜಿಯೂ ಎಚ್ಚೆತ್ತುಕೊಳ್ಳುತ್ತಿದೆ. ಇವೆರಡೂ ಉದ್ದೇಶವನ್ನು ಸಾರಲಿಕ್ಕೆಂದೇ ಇತ್ತೀಚೆಗೆ ಲಂಡನ್‌ನ ಪ್ರಸಿದ್ದ ಐ ಫೆರ್ರಿಸ್ ವೀಲ್‌ಗೆ ಹೊಂದಿಕೊಂಡ ಕ್ಯಾಪ್ಸೂಲ್‌ಕೋಣೆಗಳನ್ನು ಸಂಪೂರ್ಣ ಹಸಿರಿನಿಂದ ಕಂಗೊಳಿಸುವಂತೆ ಮಾಡಲಾಗಿತ್ತು.

‘ಸ್ಕೈ ಹೈ ಸ್ಟೇ’ ಎಂಬ ಪ್ರಾಜೆಕ್ಟ್‌ನ ಪ್ರಮೋಷನಲ್ ಇವೆಂಟ್‌ನ ಭಾಗವಾಗಿ ಮಳೆಕಾಡುಗಳ ವಿಷಯಾಧಾರಿತ ವಿನ್ಯಾಸವನ್ನು ಈ ಕೋಣೆಗಳಿಗೆ ನೀಡಲಾಗಿತ್ತು. ಎತ್ತರದಲ್ಲಿ ಚಕ್ರಕ್ಕೆ ಅಂಟಿಕೊಂಡಂತೆ ತೂಗುವ ಈ ಕ್ಯಾಪ್ಸೂಲ್‌ಗಳ ಒಳಗೆಲ್ಲಾ ಹಸಿರುಮಯ.

ಮಧ್ಯದಲ್ಲಿ ಮಂಚ ಹಾಗೂ ಕೆಲವೇ ಕೆಲವು ಪೀಠೋಪಕರಣಗಳನ್ನು ಬಳಸಿ, ಜಿಯೊಮೆಟ್ರಿಕ್ ಹಾಗೂ ಪಾಮ್‌ ಪ್ರಿಂಟ್‌ ಟೆಕ್ಸ್‌ಚರ್‌ಗಳ ಆಧಾರದಲ್ಲಿ ಗಿಡಗಳಿಂದ ಹಸಿರು ವಿನ್ಯಾಸವನ್ನು ಮಾಡಲಾಗಿತ್ತು. 360 ಕೋನದಲ್ಲಿ ಹಸಿರಿನೊಂದಿಗೆ ಹಸಿರನ್ನು ಸವಿಯುವ ಅವಕಾಶವೂ ಕೆಲವರಿಗೆ ಒದಗಿಬಂದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry