ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಲುವೆಯರ ಹಬ್ಬ

Last Updated 14 ಜೂನ್ 2017, 19:30 IST
ಅಕ್ಷರ ಗಾತ್ರ

ಎಲ್ಲಿ ನೋಡಿದರೂ ಗುಲಾಬಿ ಸುಂದರಿಯರೇ. ಪಿಂಕ್ ಬಟ್ಟೆ ತೊಟ್ಟು ಪೆರೇಡ್ ಹೊರಟ ಈ ಲಲನೆಯರ ದಂಡನ್ನು ನೋಡುವುದೇ ಸೊಗಸು. ಅದು ಸರಿ, ಈ ರೀತಿ ಪೆರೇಡ್ ಹೊರಡುವುದಾದರೂ ಏಕೆ? 

ಅದಕ್ಕೂ ಒಂದು ಉದ್ದೇಶವಿದೆ. ದೇಶದ ಆರ್ಥಿಕ ಬೆಳವಣಿಗೆಯನ್ನು ಹಾಗೂ ಅದರೆಡೆಗೆ ಜನರನ್ನು ಪ್ರೇರೇಪಿಸಲೆಂದೇ ಈ ಚೆಲುವೆಯರು ಜುಲೈ ತಿಂಗಳಿನಲ್ಲಿ ಒಂದು ದಿನ ಈ ರೀತಿ ಬೀದಿ ಬೀದಿ ಪೆರೇಡ್ ಹೋಗುತ್ತಾರಂತೆ. ಇದನ್ನೇ ಬ್ಲಾಂಡ್ಸ್‌ ಫೆಸ್ಟಿವಲ್ (ಕೆಂಚುಕೂದಲ ಹುಡುಗಿಯರ ಹಬ್ಬ) ಎಂದು ಆಚರಿಸುತ್ತಾರೆ.

ಇದು ಯುರೋಪಿನ ಲಾಟ್ವಿಯಾದಲ್ಲಿ ಪ್ರತಿ ವರ್ಷ ನಡೆಯುವ ಹಬ್ಬ. ‘ಲಾಟ್ವಿಯನ್‌ ಅಸೋಸಿಯೇಷನ್ ಆಫ್ ಬ್ಲಾಂಡ್ಸ್‌’ ಸಂಘ ಈ ಉತ್ಸವ ಆಯೋಜಿಸುವುದು. ಕೆಲವೇ ವರ್ಷಗಳ ಹಿಂದೆ ಆರಂಭಗೊಂಡ ಈ ಉತ್ಸವ, ಜನಪ್ರಿಯತೆಯನ್ನೂ ದಕ್ಕಿಸಿಕೊಂಡಿದೆ.

ಈ ದಿನ ಹಲವು ಸ್ಪರ್ಧೆಗಳೂ ನಡೆಯುತ್ತವೆ. ಸಾವಿರಾರು ಮಂದಿ ಇದರಲ್ಲಿ ಭಾಗವಹಿಸುತ್ತಾರೆ. ಬೀಚ್‌ನಲ್ಲಿ, ಕ್ರೀಡಾಂಗಣದಲ್ಲಿ ಸಾಕಷ್ಟು ಸ್ಪರ್ಧೆಗಳಿರುತ್ತವೆ. ರಾತ್ರಿಯಿಡೀ ಉತ್ಸವ ಅತಿ ಉಲ್ಲಾಸದಿಂದ ಸಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT