ಮೇಲ್‌ ಐಡಿ ಬ್ಲಾಕ್‌ ಮಾಡುವುದು ಹೇಗೆ?

7

ಮೇಲ್‌ ಐಡಿ ಬ್ಲಾಕ್‌ ಮಾಡುವುದು ಹೇಗೆ?

Published:
Updated:
ಮೇಲ್‌ ಐಡಿ ಬ್ಲಾಕ್‌ ಮಾಡುವುದು ಹೇಗೆ?

ಪತ್ರ ವ್ಯವಹಾರ ಕಡಿಮೆಯಾಗಿರುವ ಇಂದಿನ ದಿನಗಳಲ್ಲಿ ಇಮೇಲ್‌ ಮೂಲಕ ನಡೆಯುವ ಸಂವಹನವೇ ಹೆಚ್ಚು. ಇಮೇಲ್‌ನಲ್ಲಿ ನಮಗೆ ಬೇಕಾದ ಮೇಲ್‌ಗಳ ಜತೆಗೆ ಬೇಕಿಲ್ಲದ ಮೇಲ್‌ಗಳೂ ಸಾಕಷ್ಟು ಸಂಖ್ಯೆಯಲ್ಲಿ ಇನ್‌ಬಾಕ್ಸ್‌ ತುಂಬಿಕೊಳ್ಳುತ್ತಿರುತ್ತವೆ.

ಪ್ರೊಮೋಷನ್‌ ಮೇಲ್‌ಗಳ ಜತೆಗೆ ಕೆಲವು ಅಪ್‌ಡೇಟ್‌ ಮೇಲ್‌ಗಳೂ ದಿನನಿತ್ಯ ರಾಶಿಗಟ್ಟಲೆ ಬರುತ್ತಿರುತ್ತವೆ. ನಿರ್ದಿಷ್ಟ ಮೇಲ್‌ ಐಡಿಯೊಂದರಿಂದ ಬರುವ ಇಮೇಲ್‌ ಅನ್ನು ಜಿಮೇಲ್‌ನಲ್ಲಿ ಬ್ಲಾಕ್‌ ಮಾಡುವುದು ಹೇಗೆ ಎಂಬ ಬಗ್ಗೆ ಈ ವಾರ ತಿಳಿಯೋಣ. ನಿಮಗೆ ಯಾವ ಇಮೇಲ್‌ ಐಡಿಯಿಂದ ಹೆಚ್ಚು ಕಿರಿಕಿರಿಯಾಗುತ್ತಿದೆಯೋ ಆ ಮೇಲ್‌ ತೆರೆಯಿರಿ. ಮೇಲ್‌ ತೆರೆದ ಬಳಿಕ ದಿನಾಂಕ, ಸಮಯ, ರಿಪ್ಲೇ ಆಯ್ಕೆಗಳ ಪಕ್ಕದಲ್ಲಿ ಕಾಣುವ More ಎಂಬಲ್ಲಿ ಕ್ಲಿಕ್ಕಿಸಿ. ಇಲ್ಲಿ ಕಾಣುವ ಆಯ್ಕೆಗಳಲ್ಲಿ Block ಮೇಲೆ ಕ್ಲಿಕ್‌ ಮಾಡಿ. ಈಗ ಆ ನಿರ್ದಿಷ್ಟ ‘ಮೇಲ್‌ ಐಡಿಯಿಂದ ಬರುವ ಮೇಲ್‌ಗಳನ್ನು ಬ್ಲಾಕ್‌ ಮಾಡಬೇಕೆ’ ಎಂಬ ಕನ್ಫರ್ಮೇಷನ್‌ ನೋಟಿಫಿಕೇಷನ್‌ ಕಾಣುತ್ತದೆ. ಇಲ್ಲಿ ಕಾಣುವ Block ಎಂಬಲ್ಲಿ ಕ್ಲಿಕ್‌ ಮಾಡಿದರೆ ಆ ಮೇಲ್‌ ಐಡಿಯಿಂದ ಮುಂದೆ ಯಾವ ಮೇಲ್‌ಗಳೂ ಬರುವುದಿಲ್ಲ.

ಒಂದು ವೇಳೆ ನೀವು ಮತ್ತೆ ಆ ನಿರ್ದಿಷ್ಟ ಮೇಲ್‌ ಐಡಿಯನ್ನು ಅನ್‌ಬ್ಲಾಕ್‌ ಮಾಡಬೇಕೆಂದರೆ ಮತ್ತೆ More ಮೇಲೆ ಕ್ಲಿಕ್ಕಿಸಿ, ಕೆಳ ಕಾಣುವ ಆಯ್ಕೆಗಳಲ್ಲಿ Unblock ಮೇಲೆ ಕ್ಲಿಕ್‌ ಮಾಡಿ. ‘ಈ ಮೇಲ್‌ ಐಡಿಯನ್ನು ಅನ್‌ಬ್ಲಾಕ್‌ ಮಾಡಬೇಕೆ’ ಎಂಬ ಕನ್ಫರ್ಮೇಷನ್‌ ನೋಟಿಫಿಕೇಷನ್‌ ಕಾಣಿಸಿಕೊಳ್ಳುತ್ತದೆ. ಅಲ್ಲಿ Unblock ಮೇಲೆ ಕ್ಲಿಕ್‌ ಮಾಡಿ. ಈಗ ಆ ನಿರ್ದಿಷ್ಟ ಮೇಲ್‌ ಐಡಿ ಅನ್‌ಬ್ಲಾಕ್ ಆಗುತ್ತದೆ. ನೀವು ಅನ್‌ಬ್ಲಾಕ್‌ ಮಾಡಿದ ಮೇಲ್‌ ಐಡಿಯಿಂದ ಮತ್ತೆ ಮೊದಲಿನಂತೆ ಮೇಲ್‌ಗಳು ಬರಲಾರಂಭಿಸುತ್ತವೆ.

ಮೇಲ್‌ ಐಡಿ ಬ್ಲಾಕ್‌ ಮಾಡುವುದಲ್ಲದೆ ನಿಮಗೆ ಬೇಕಿಲ್ಲದ ಮೇಲ್‌ಗಳನ್ನು Spam ಮಾಡಬಹುದು. ಇದಕ್ಕಾಗಿ ಇದೇ More ಆಯ್ಕೆಗಳ ಕೆಳಗೆ ಕಾಣುವ Report Spam ಮೇಲೆ ಕ್ಲಿಕ್ಕಿಸಿ. ನೀವು ಸ್ಪಾಮ್‌ ರಿಪೋರ್ಟ್‌ ಮಾಡಿದ ಇಮೇಲ್‌ ಸ್ಪಾಮ್‌ ಬಾಕ್ಸ್‌ ಸೇರುತ್ತದೆ. ಸ್ಪಾಮ್‌ನಲ್ಲಿರುವ ಮೇಲ್‌ಗಳು ಬಂದು ಅಲ್ಲಿ ಸೇರಿದ 30 ದಿನಗಳ ಬಳಿಕ ಆಟೊ ಡಿಲೀಟ್‌ ಆಗುತ್ತವೆ. ಇದರಿಂದ ಇನ್‌ಬಾಕ್ಸ್‌ ತುಂಬಿತುಳುಕುವುದನ್ನು ತಪ್ಪಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry