ಚೆಲುವ ನೃತ್ಯಕೆ ಸೋತು!

7

ಚೆಲುವ ನೃತ್ಯಕೆ ಸೋತು!

Published:
Updated:
ಚೆಲುವ ನೃತ್ಯಕೆ ಸೋತು!

ಚೆಲುವ ನೃತ್ಯಕೆ ಸೋತು!

ಆ ದಿನ ರೊಮಾನಿಯಾದಲ್ಲಿ ರಾಷ್ಟ್ರೀಯ ಜನಪದ ದಿರಿಸಿನ ಹಬ್ಬ. ಇದೇ ನೆಪದೊಂದಿಗೇ ಬಿಸ್ಟ್ರಿಟಾ-ನಾಸೌದ್ ಸಮುದಾಯದ ಸಾವಿರಾರು ಯುವ ಮಂದಿ ತಮ್ಮ ರಾಷ್ಟ್ರಪ್ರೇಮವನ್ನು ಜನಪದ ದಿರಿಸು ತೊಟ್ಟು ಸಂಭ್ರಮಿಸಲು ಬೀದಿ ತುಂಬಾ ಸೇರಿಬಿಟ್ಟರು. ಇದೇ ಸಂಭ್ರಮದಲ್ಲಿ ಚೆಂದಕೆ ಹೆಜ್ಜೆಯನ್ನೂ ಹಾಕಿದರು. ಅವತ್ತು ಅವರಿಗೆ ಇನ್ನೂ ಒಂದು ಅಚ್ಚರಿ ಕಾದಿತ್ತು. ಒಟ್ಟು 9506 ಮಂದಿ ಸೇರಿ ಹೆಜ್ಜೆ ಹಾಕಿದ್ದಕ್ಕೆ ‘ಲಾರ್ಜೆಸ್ಟ್‌ ಟ್ರೆಡಿಷನಲ್ ರೊಮಾನಿಯನ್ ಫೋಕ್ ಡಾನ್ಸ್’ ಎಂಬ ಗಿನ್ನಿಸ್ ದಾಖಲೆ ಗರಿಯೂ ಮುಡಿಗೇರಿತು. ಈ ಸಂಭ್ರಮಕ್ಕೆ ಎಣೆಯುಂಟೇ ಎಂದು ಬೀಗಿದ ಯುವತಿಯರಿವರು...

***

ನೀರ ಧ್ಯಾನ

ನೆತ್ತಿ ಸುಡುವ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಪರದಾಟ ಅಷ್ಟಿಷ್ಟಲ್ಲ.

ಈ ಹುಡುಗನೂ ಅದೇ ಸಾಹಸದಲ್ಲಿದ್ದಾನೆ. ಇನ್ನು ಬಿಸಿಲ ತಾಪ ತಾಳಲು ಸಾಧ್ಯವೇ ಇಲ್ಲ ಅನ್ನಿಸಿ ಪೆಶಾವರದ ಬ್ರಿಡ್ಜ್ ಕೆಳಗೆ ತಣ್ಣಗೆ ಹರಿಯುವ ಕಾಲುವೆ ಬಳಿಯ ನೀರಿನ ಪೈಪ್‌ಗೆ ತಲೆಯಿಟ್ಟ ನೋಡಿ... ಅಷ್ಟೂ ದಿನ ಬಿಸಿಲಲ್ಲಿ ಬಳಲಿದ್ದ ಸುಸ್ತೆಲ್ಲಾ ಒಂದೇ ಬಾರಿಗೆ ನೀರಿನೊಂದಿಗೇ ಚಿಮ್ಮಿ ಹರಿದುಹೋಗಿದ್ದು ಈ ಪರಿ...

***

ಸ್ಪೈಡರ್ ಮ್ಯಾನ್ ಸೆಲ್ಫಿ

ಎಲ್ಲೆಲ್ಲೂ ಸೆಲ್ಫಿ ನಶೆ. ಇದಕ್ಕೆ ಉದಾಹರಣೆ ಎಂಬಂತೆ ಸ್ಪೈಡರ್ ಮ್ಯಾನ್ ವೇಷ ತೊಟ್ಟ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡ ಪರಿ ಇದು. ಸಿಂಗಪುರದ ಆರ್ಟ್‌ ಸೈನ್ಸ್ ಮ್ಯೂಸಿಯಂನಲ್ಲಿ ನಡೆದ ‘ಸ್ಪೈಡರ್ ಮ್ಯಾನ್- ಹೋಮ್‌ಕಮಿಂಗ್’ ಚಿತ್ರದ ಪ್ರೊಮೋಷನ್‌ಗೆ ಸ್ಪೈಡರ್ ಮ್ಯಾನ್ ಅಭಿಮಾನಿಗಳು ಸೇರಿ ಸಂಭ್ರಮವನ್ನು ಫೋನ್‌ನಲ್ಲಿ ತುಂಬಿಕೊಂಡಿದ್ದು ಹೀಗೆ...

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry