‘ದೀಪಿಕಾಗೆ ವಸ್ತ್ರವಿನ್ಯಾಸ ಮಾಡಬೇಕು’

7

‘ದೀಪಿಕಾಗೆ ವಸ್ತ್ರವಿನ್ಯಾಸ ಮಾಡಬೇಕು’

Published:
Updated:
‘ದೀಪಿಕಾಗೆ ವಸ್ತ್ರವಿನ್ಯಾಸ ಮಾಡಬೇಕು’

–ಅನಿಲ್ ಕುರಿಯನ್

***

* ವಿಕ್ಟೋರಿಯಾ ಶೈಲಿಯಿಂದ ಪ್ರಭಾವಿತರಾಗಿ ವಸ್ತ್ರ ವಿನ್ಯಾಸ ಮಾಡಿದ್ದೀರಂತೆ?

ಹೌದು. ನಾನು ಬಹಳಷ್ಟು ಪ್ರವಾಸ ಕೈಗೊಳ್ಳುತ್ತೇನೆ. ಯುರೋಪ್‌ನಲ್ಲಿದ್ದಾಗ ವಿಕ್ಟೋರಿಯಾ ಶೈಲಿ ನನ್ನ ಮೇಲೆ ಬಹಳ ಪ್ರಭಾವ ಬೀರಿತು. ಯುರೋಪ್ ಒಂದು ಅದ್ಭುತ ಸ್ಥಳ ಹಾಗೂ ವೈವಿಧ್ಯಮಯ ಪರಂಪರೆಯನ್ನು ಹೊಂದಿದೆ. ಹಾಗಾಗಿ ವಿಕ್ಟೋರಿಯನ್‌ ಪ್ರಭಾವದ ವಸ್ತ್ರಗಳ ಸಂಗ್ರಹವನ್ನು ಪರಿಚಯಿಸಬೇಕೆಂದಿದ್ದೇನೆ.

* ಈ ಸಂಗ್ರಹದಲ್ಲಿ ಬಳಸಿದ ಬಣ್ಣಗಳ ಬಗ್ಗೆ ತಿಳಿಸಿ?

ಈ ಸಂಗ್ರಹದಲ್ಲಿನ ಉಡುಪುಗಳು ಪುರಾತನ ಮತ್ತು ಆಧುನಿಕ ಜೀವನಶೈಲಿಯ  ಮಿಶ್ರಣವಾಗಿ  ಮೂಡಿಬರಲಿವೆ. ಮುಂಬರುವ ಹಬ್ಬಗಳ ಋತುವಿಗೆ ಸೂಕ್ತವಾಗುವಂತಹ ಬಣ್ಣಗಳನ್ನು ಅಂದರೆ ಕೆಂಪು, ಗುಲಾಬಿ ಸೇರಿದಂತೆ ಹಲವು ಬಣ್ಣಗಳನ್ನು ಬಳಸುತ್ತೇನೆ.

* ಯಾವ ಶೈಲಿಯ ಬಗ್ಗೆ ನೀವು ಗಮನಹರಿಸುವಿರಿ?

ಭಾರತೀಯ ಉಡುಪುಗಳಿಗೆ ಆಧುನಿಕ ಸ್ಪರ್ಶ ನೀಡುವ ಬಗ್ಗೆ ಯೋಚಿಸುತ್ತಿದ್ದೇನೆ. ಈಗ ಯಾರೂ ಸಾದಾಸೀದಾ ಲೆಹೆಂಗಾ ಧರಿಸಲು ಬಯಸುವುದಿಲ್ಲ. ಅದರೊಂದಿಗೆ ಜಾಕೆಟ್ ಅಥವಾ ಮೇಲುಡುಗೆಯನ್ನು ಹಾಕಿಕೊಳ್ಳಲು ಇಷ್ಟಪಡುತ್ತಾರೆ. ಅಂತಹ ಕಾಂಬಿನೇಷನ್‌ ವಿನ್ಯಾಸದ ಬಗ್ಗೆ ಚಿಂತನೆ ನಡೆಸಿದ್ದೇನೆ.

* ವಸ್ತ್ರವಿನ್ಯಾಸಕಿಯಾಗಿ ಕಷ್ಟ ಎನಿಸಿದ ಸಂಗತಿ ಯಾವುದು?

ಕೆಲಸದ ಅವಧಿ. ನಾವು ಎಷ್ಟು ಹೊತ್ತು ಕೆಲಸ ಮಾಡುತ್ತೀವಿ ಎಂಬುದು ಮುಖ್ಯವಲ್ಲ. ಆದರೆ ಆ ಸಮಯದಲ್ಲಿ ಒಳ್ಳೆಯ ವಿನ್ಯಾಸ ಸಿದ್ಧಪಡಿಸುವುದು ಸವಾಲು.

* ನಿಮಗೆ ಬಹಳ ಇಷ್ಟವಾದ ವಿನ್ಯಾಸ ಯಾವುದು?

ಇನ್ನೂ ಯಾವುದೂ ಇಲ್ಲ! ನನ್ನ ಪ್ರತಿಯೊಂದು ವಿನ್ಯಾಸವೂ ವಿಭಿನ್ನವಾಗಿರಲಿ ಎಂದು ಬಯಸುತ್ತೇನೆ. ನನ್ನ ವಿನ್ಯಾಸಗಳಿಂದ ಯಾವತ್ತೂ  ಸಂತೃಪ್ತಳಾಗಿಲ್ಲ.

* ಮಾಡಬೇಕಿತ್ತು ಅಂದುಕೊಂಡಿರುವ ಯಾವುದಾದರೂ ವಿನ್ಯಾಸ ಇದೆಯೇ?

ಹಾಗೇನಿಲ್ಲ. ಆದರೆ ಸದಾ ಪ್ರಯೋಗಶೀಲಳಾಗಿರುತ್ತೇನೆ.  ಪ್ರಯೋಗಗಳೇ ಯಶಸ್ಸಿನ   ಮೆಟ್ಟಿಲು ಎಂದು ನಾನು ನಂಬಿದ್ದೇನೆ.

* ನೀವೇ ಹೆಮ್ಮೆಪಡುವ ನಿಮ್ಮದೇ ವಿನ್ಯಾಸ ಯಾವುದು?

ಭಾರತೀಯ ಉಡುಗೆಗೆ 3ಡಿ  ವಿನ್ಯಾಸವುಳ್ಳ ಚರ್ಮದ ಹೂವುಗಳನ್ನು ಬಳಸಿರುವುದು ನನಗೆ ಇಷ್ಟವಾಗಿದೆ.

* ಯಾವ ಸೆಲೆಬ್ರಿಟಿಗೆ ವಸ್ತ್ರ ವಿನ್ಯಾಸ ಮಾಡಲು ಬಯಸುತ್ತೀರಿ?

ದೀಪಿಕಾ ಪಡುಕೋಣೆ ನಾನು ಬಹಳ ಮೆಚ್ಚುವ ನಟಿ. ಅವರಿಗೆ  ಉತ್ತಮ ಅಭಿರುಚಿಗಳಿವೆ. ಅವರಿಗೆ ವಸ್ತ್ರ ವಿನ್ಯಾಸ ಮಾಡಲು ಬಯಸುತ್ತೇನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry