ಒಂದೇ ಬಾರಿ ಆಜಾನ್: ಕೇರಳದ ಮಲಪ್ಪುರಂನ 17 ಮಸೀದಿಗಳ ನಿರ್ಧಾರ

7
ಶಬ್ದ ಮಾಲಿನ್ಯ ತಗ್ಗಿಸಲು ಕ್ರಮ

ಒಂದೇ ಬಾರಿ ಆಜಾನ್: ಕೇರಳದ ಮಲಪ್ಪುರಂನ 17 ಮಸೀದಿಗಳ ನಿರ್ಧಾರ

Published:
Updated:
ಒಂದೇ ಬಾರಿ ಆಜಾನ್: ಕೇರಳದ ಮಲಪ್ಪುರಂನ 17 ಮಸೀದಿಗಳ ನಿರ್ಧಾರ

ಮಲಪ್ಪುರಂ: ಮುಸ್ಲಿಮರ ಪ್ರಾರ್ಥನೆ ಆಜಾನ್‌ನಿಂದ ಶಬ್ದ ಮಾಲಿನ್ಯವಾಗುತ್ತಿದೆ ಎಂಬ ಆಕ್ಷೇಪಗಳು ಹಾಗೂ ಆಜಾನ್‌ಗೆ ಧ್ವನಿವರ್ಧಕ ಬಳಕೆಯ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಮಧ್ಯೆಯೇ ಕೇರಳದ ಮಲಪ್ಪುರಂನ ವಝಕ್ಕಾಡ್‌ನಲ್ಲಿರುವ 17 ಮಸೀದಿಗಳು ಒಂದೇ ಬಾರಿ ಆಜಾನ್‌ಗೆ ಸಮ್ಮತಿಸಿವೆ.

‘ವಝಕ್ಕಾಡ್‌ನಲ್ಲಿ ಒಟ್ಟು 17 ಮಸೀದಿಗಳಿವೆ. ವಝಕ್ಕಾಡ್‌ ಜಂಕ್ಷನ್‌ನಲ್ಲೇ 7 ಮಸೀದಿಗಳಿವೆ. ಕೆಲವೇ ಕಿ.ಮೀ.ಗಳ ಅಂತರದಲ್ಲಿ ಇನ್ನು 10 ಮಸೀದಿಗಳಿವೆ. ಈ ಮಸೀದಿಗಳಿಂದ ಬೇರೆ ಬೇರೆ ಸಮಯದಲ್ಲಿ ಕೇಳಿಬರುವ ಆಜಾನ್‌ನ ಸದ್ದಿನಿಂದ ಇಲ್ಲಿನ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿತ್ತು. ಹೀಗಾಗಿ ಒಂದೇ ಬಾರಿ ಆಜಾನ್‌ಗೆ ನಿರ್ಧರಿಸಲಾಯಿತು. ಎಲ್ಲಾ 17 ಮಸೀದಿಗಳ ಧರ್ಮ ಪ್ರಮುಖರೂ ಇದಕ್ಕೆ ಸಮ್ಮತಿಸಿದ್ದಾರೆ’ ಎಂದು ವಝಕ್ಕಾಡ್‌ ಮಸೀದಿಗಳ ಸಮಿತಿಯ ಅಧ್ಯಕ್ಷ ಟಿ.ಪಿ. ಅಬ್ದುಲ್‌ ಅಜೀಜ್‌ ತಿಳಿಸಿದ್ದಾರೆ.

ಈ 17 ಮಸೀದಿಗಳು ಒಪ್ಪಂದಕ್ಕೆ ಬಂದಿರುವ ಪ್ರಕಾರ ವಝಕ್ಕಾಡ್‌ನ ದೊಡ್ಡ ಮಸೀದಿಯಾದ ವಾಲಿಯಾ ಜುಮಾ ಮಸೀದಿಯಿಂದ ಒಂದೇ ಬಾರಿ ಆಜಾನ್‌ ಕೇಳಿಬರುತ್ತದೆ. ಉಳಿದ ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಸದೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

‘ಈ ಹೊಸ ಒಪ್ಪಂದವನ್ನು ಐದು ದಿನಗಳಿಂದ ಪಾಲಿಸುತ್ತಿದ್ದೇವೆ’ ಎಂದು ಅಜೀಜ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry