ಕೊನೆಗೂ ರಂಗಾಯಣಕ್ಕೆ ನಿರ್ದೇಶಕರ ನೇಮಕ

7
ಭಾಗೀರಥಿ, ಮಹೇಶ್‌, ಗಣೇಶ್‌ ಆಯ್ಕೆ

ಕೊನೆಗೂ ರಂಗಾಯಣಕ್ಕೆ ನಿರ್ದೇಶಕರ ನೇಮಕ

Published:
Updated:
ಕೊನೆಗೂ ರಂಗಾಯಣಕ್ಕೆ ನಿರ್ದೇಶಕರ ನೇಮಕ

ಬೆಂಗಳೂರು: ನಾಟಕ ಕರ್ನಾಟಕ ರಂಗಾಯಣದ ಮೂರು ಕೇಂದ್ರಗಳಿಗೂ ನಿರ್ದೇಶಕರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮೈಸೂರು ಕೇಂದ್ರಕ್ಕೆ ಭಾಗೀರಥಿ ಬಾಯಿ ಕದಂ, ಶಿವಮೊಗ್ಗಕ್ಕೆ ಎಂ. ಗಣೇಶ್‌, ಕಲಬುರ್ಗಿ ಕೇಂದ್ರಕ್ಕೆ ಮಹೇಶ್‌  ವಿ. ಪಾಟೀಲ ಅವರನ್ನು ನೇಮಕ ಮಾಡಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅಧ್ಯಕ್ಷತೆಯಲ್ಲಿ ಮೇ 25ರಂದು ‘ರಂಗ ಸಮಾಜ’ ಸಭೆ ನಡೆಸಿ ಮೂರೂ ಕೇಂದ್ರಗಳಿಗೆ ತಲಾ ಮೂವರ ಹೆಸರನ್ನು ಶಿಫಾರಸು ಮಾಡಿತ್ತು.

ಮೈಸೂರು ಕೇಂದ್ರದ ನಿರ್ದೇಶಕರ ಹುದ್ದೆ 9 ತಿಂಗಳಿಂದ ಖಾಲಿ ಇದ್ದರೆ ಶಿವಮೊಗ್ಗ ಮತ್ತು ಕಲಬುರ್ಗಿ ಕೇಂದ್ರದ ನಿರ್ದೇಶಕರ ಸ್ಥಾನ ಖಾಲಿಯಾಗಿ ವರ್ಷವೇ ಕಳೆದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry