ವಿದ್ಯುತ್ ಸ್ಪರ್ಶ: 2 ಕಾಡಾನೆ ಸಾವು

7

ವಿದ್ಯುತ್ ಸ್ಪರ್ಶ: 2 ಕಾಡಾನೆ ಸಾವು

Published:
Updated:
ವಿದ್ಯುತ್ ಸ್ಪರ್ಶ: 2 ಕಾಡಾನೆ ಸಾವು

ಸಿದ್ದಾಪುರ (ಮಡಿಕೇರಿ): ಸಮೀಪದ ಕಣ್ಣಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂಟಿಯಂಗಡಿ ಬಳಿ ಬುಧವಾರ ವಿದ್ಯುತ್ ತಂತಿ ಸ್ಪರ್ಶದಿಂದ ಒಂದೇ ಸ್ಥಳದಲ್ಲಿ ಎರಡು ಕಾಡಾನೆಗಳು ಸಾವನ್ನಪ್ಪಿವೆ.

ಮಚ್ಚಾರಂಡ ಮಣಿ ಎಂಬುವರಿಗೆ ಸೇರಿದ ಕಾಫಿ ತೋಟದ ಬಳಿ ಕಾಡಾನೆಯೊಂದು ಮರದ ಕೊಂಬೆಯನ್ನು ಎಳೆದು ತಿನ್ನಲು ಯತ್ನಿಸಿದಾಗ ಅದು ತಂತಿ ಮೇಲೆ ಬಿದ್ದು ವಿದ್ಯುತ್ ಸ್ಪರ್ಶಿಸಿ 19 ಹಾಗೂ 26 ವರ್ಷದ ಎರಡು ಹೆಣ್ಣು ಆನೆಗಳು ಸಾವನ್ನಪ್ಪಿವೆ.

ಆನೆಗಳು ನಿರಂತರವಾಗಿ ಓಡಾಡುವ  ಪ್ರದೇಶಗಳನ್ನು ಇತ್ತೀಚೆಗೆ ಗುರುತಿಸಿರುವ ‘ಸೆಸ್ಕ್’, ವಿದ್ಯುತ್ ಕಂಬಗಳನ್ನು ಎತ್ತರಿಸುವ ಕಾಮಗಾರಿ ಕೈಗೊಂಡಿದೆ.

‘ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಪಾಲಿಬೆಟ್ಟ ಮತ್ತು ಕಣ್ಣಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಾನೆಗಳು ಸುಳಿದಾಡುವ ಪ್ರದೇಶಗಳ ಬಳಿ ಕಂಬಗಳನ್ನು ಎತ್ತರಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ, ಸರ್ಕಾರದಿಂದ ಕಂಬಗಳು ಇದುವರೆಗೂ ಬಂದಿಲ್ಲ’ ಎಂದು ‘ಸೆಸ್ಕ್‌’ ಎಂಜಿನಿಯರ್ ನವೀನ್‌ಕುಮಾರ್ ಜೈನ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry