ಏಜನ್‌ ಕ್ಲಾಸಿಕ್‌ ಟೂರ್ನಿಗೆ ಪ್ಲಿಸ್ಕೋವಾ ಅಲಭ್ಯ

7

ಏಜನ್‌ ಕ್ಲಾಸಿಕ್‌ ಟೂರ್ನಿಗೆ ಪ್ಲಿಸ್ಕೋವಾ ಅಲಭ್ಯ

Published:
Updated:
ಏಜನ್‌ ಕ್ಲಾಸಿಕ್‌ ಟೂರ್ನಿಗೆ ಪ್ಲಿಸ್ಕೋವಾ ಅಲಭ್ಯ

ಪ್ರಾಗ್‌ : ಜೆಕ್‌ ಗಣರಾಜ್ಯದ ಟೆನಿಸ್‌ ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾ ಅವರು ಜೂನ್‌ 19ರಿಂದ 25ರವರೆಗೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುವ ಏಜನ್‌ ಓಪನ್‌ ಕ್ಲಾಸಿಕ್‌ ಟೆನಿಸ್‌ ಟೂರ್ನಿಗೆ ಅಲಭ್ಯರಾಗಿದ್ದಾರೆ.

ಹೋದ ವಾರ ನಡೆದಿದ್ದ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸೆಮಿ ಫೈನಲ್‌ ಪ್ರವೇಶಿಸಿದ್ದ ಜೆಕ್‌ ಗಣರಾಜ್ಯದ ಕ್ಯಾರೋಲಿನಾ ಅವರು ಮೊಣಕೈ ಗಾಯದಿಂದ ಬಳಲುತ್ತಿದ್ದಾರೆ. ಇದರಿಂದ ಅವರು ಇನ್ನೂ ಚೇತರಿಸಿಕೊಳ್ಳದ ಕಾರಣ ಏಜನ್‌ ಕ್ಲಾಸಿಕ್‌ ಟೂರ್ನಿಯಲ್ಲಿ ಕಣಕ್ಕಿಳಿಯದಿರಲು ನಿರ್ಧರಿಸಿದ್ದಾರೆ.

‘ಮೊಣಕೈನಲ್ಲಿ ಇನ್ನೂ ವಿಪರೀತ ನೋವು ಇದೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದು ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಹೀಗಾಗಿ ಏಜನ್‌ ಕ್ಲಾಸಿಕ್‌ ಟೂರ್ನಿಯಲ್ಲಿ ಆಡುತ್ತಿಲ್ಲ’ ಎಂದು 25 ವರ್ಷದ ಆಟಗಾರ್ತಿ ತಿಳಿಸಿದ್ದಾರೆ.

‘ಜುಲೈ 3 ರಿಂದ 16ರವರೆಗೂ ನಡೆಯುವ ವಿಂಬಲ್ಡನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವುದು ನನ್ನ ಮುಂದಿರುವ ಏಕೈಕ ಗುರಿ. ಈ ಟೂರ್ನಿಗೂ ಮುನ್ನ ಈಸ್ಟ್‌ಬರ್ನ್‌ (ಜೂನ್‌ 25 ರಿಂದ ಜುಲೈ 1) ಟೂರ್ನಿಯಲ್ಲಿ ಆಡುತ್ತೇನೆ’ ಎಂದು ವಿಶ್ವ ಕ್ರಮಾಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಕ್ಯಾರೋಲಿನಾ  ನುಡಿದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry