ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡೊನೇಷ್ಯಾ ಸೂಪರ್‌ ಸರಣಿ ಬ್ಯಾಡ್ಮಿಂಟನ್‌: ಎರಡನೇ ಸುತ್ತಿಗೆ ಪ್ರಣಯ್‌

Last Updated 14 ಜೂನ್ 2017, 19:30 IST
ಅಕ್ಷರ ಗಾತ್ರ

ಜಕಾರ್ತ: ದಿಟ್ಟ ಆಟ ಆಡಿದ ಭಾರತದ ಎಚ್‌.ಎಸ್‌. ಪ್ರಣಯ್‌ ಅವರು ಇಂಡೊ ನೇಷ್ಯಾ ಸೂಪರ್‌ ಸರಣಿ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಟೂರ್ನಿ ಯಲ್ಲಿ ಗೆಲುವಿನ ಆರಂಭ ಕಂಡಿದ್ದಾರೆ.

ಬುಧವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಪ್ರಣಯ್‌ 21–13, 21–18ರ ನೇರ ಗೇಮ್‌ಗಳಿಂದ ಇಂಡೊನೇಷ್ಯಾದ ಅಂಥೋಣಿ ಸಿನಿಸುಕಾ ಅವರನ್ನು ಪರಾಭವ ಗೊಳಿಸಿದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 29ನೇ ಸ್ಥಾನ ಹೊಂದಿರುವ ಪ್ರಣಯ್‌ ಶುರು ವಿನಿಂದಲೇ ಚುರುಕಿನ ಆಟಕ್ಕೆ ಒತ್ತು ನೀಡಿದರು. ಆಕರ್ಷಕ ಸರ್ವ್‌ಗಳನ್ನು ಮಾಡಿದ ಅವರು ನೆಟ್‌ನ ಸಮೀಪದಲ್ಲಿ ಷಟಲ್‌ ಡ್ರಾಪ್‌ ಮಾಡುವ ತಂತ್ರ ಅನು ಸರಿಸಿದರು. ಈ ಮೂಲಕ ಲೀಲಾಜಾಲ ವಾಗಿ ಪಾಯಿಂಟ್ಸ್‌ ಹೆಕ್ಕಿ ಮುನ್ನಡೆ ಕಂಡು ಕೊಂಡರು. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 20ನೇ ಸ್ಥಾನ ಹೊಂದಿರುವ ಅಂಥೋಣಿ ಇದರಿಂದ ವಿಚಲಿತರಾ ದಂತೆ ಕಂಡರು.  ಹಲವು ಸ್ವಯಂಕೃತ ತಪ್ಪುಗಳನ್ನು ಮಾಡಿ ಪಾಯಿಂಟ್ಸ್‌ ಕೈಚೆಲ್ಲಿದರು.

ಇದರ ಪೂರ್ಣ ಲಾಭ ಎತ್ತಿಕೊಂಡ  ಪ್ರಣಯ್‌ ಆ ನಂತರವೂ ಗುಣಮಟ್ಟದ ಆಟ ಆಡಿ ಗೇಮ್‌ ಗೆದ್ದುಕೊಂಡರು. ಎರಡನೇ ಗೇಮ್‌ನ ಆರಂಭ ದಿಂದಲೇ ಉಭಯ ಆಟಗಾರರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. ಪ್ರಣಯ್‌ ಅವರ ಬಲಿಷ್ಠ ಕ್ರಾಸ್‌ ಕೋರ್ಟ್‌ ಹೊಡೆತಗಳನ್ನು ಸಿನಿಸುಕಾ  ಚಾಕಚಕ್ಯತೆಯಿಂದ ಹಿಂತಿರುಗಿಸಿ ತವರಿನ ಅಭಿಮಾನಿಗಳ ಮನ ಗೆದ್ದರು.

ಹೀಗಾಗಿ ಪಂದ್ಯ 18–18ರಲ್ಲಿ ಸಮಬಲವಾಗಿತ್ತು. ಈ ಹಂತದಲ್ಲಿ ಪ್ರಣಯ್‌ ಮಿಂಚಿನ ಆಟ ಆಡಿದರು. ಒತ್ತಡವನ್ನು ಮೀರಿ ನಿಂತ ಅವರು ಸತತ ಮೂರು ಪಾಯಿಂಟ್ಸ್‌ ಸಂಗ್ರಹಿಸಿ ಗೆಲುವಿನ ತೋರಣ ಕಟ್ಟಿದರು.

ಸಾಯಿಪ್ರಣೀತ್‌ಗೆ ನಿರಾಸೆ: ಸಿಂಗಪುರ ಮತ್ತು ಥಾಯ್ಲೆಂಡ್‌ ಓಪನ್‌ ಟೂರ್ನಿ ಗಳಲ್ಲಿ ಪ್ರಶಸ್ತಿ ಜಯಿಸಿದ್ದ  ಬಿ. ಸಾಯಿ ಪ್ರಣೀತ್‌ ಅವರು ಆರಂಭಿಕ ಸುತ್ತಿನಲ್ಲಿ ನಿರಾಸೆ ಕಂಡರು. ಕೊರಿಯಾದ ಆಟಗಾರ ಸನ್‌ ವಾನ್‌ ಹೊ 21–14, 21–18ರಲ್ಲಿ ಪ್ರಣೀತ್‌ ಅವರನ್ನು ಸೋಲಿಸಿ ದರು.  ಪುರುಷರ ಡಬಲ್ಸ್‌ ವಿಭಾಗದಲ್ಲಿ ಸಾತ್ವಿಕ್‌ ಸಾಯಿರಾಜ್‌ ರಂಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ 9–21, 19–21ರಲ್ಲಿ ಫಜರ್‌ ಅಲ್‌ಫಿಯಾನ್‌ ಮತ್ತು ಮಹ ಮ್ಮದ್‌ ರಿಯಾನ್‌ ಆರ್ಡಿಯಾಂಟೊ ವಿರುದ್ಧ ಪರಾಭವಗೊಂಡರು.

ಮಹಿಳೆಯರ ಡಬಲ್ಸ್‌ ವಿಭಾಗದ ಪಂದ್ಯದಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್‌. ಸಿಕ್ಕಿ ರೆಡ್ಡಿ 21–19, 19–21, 13–21ರಲ್ಲಿ  ಇಂಡೊನೇಷ್ಯಾದ ಡಿಯಾನ್‌ ಫಿತ್ರಿಯಾನಿ ಮತ್ತು ನಾಡ್ಯಾ ಮೆಲಾಟಿ ಎದುರು ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT