ರಾಹುಲ್‌ಗೆ ‘ಪಪ್ಪು’ ಎಂದ ಮುಖಂಡ ಅಮಾನತು

7

ರಾಹುಲ್‌ಗೆ ‘ಪಪ್ಪು’ ಎಂದ ಮುಖಂಡ ಅಮಾನತು

Published:
Updated:
ರಾಹುಲ್‌ಗೆ ‘ಪಪ್ಪು’ ಎಂದ ಮುಖಂಡ ಅಮಾನತು

ಲಖನೌ: ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ‘ಪಪ್ಪು’ ಎಂದು ಸಂಬೋಧಿಸಿದ ಕಾಂಗ್ರೆಸ್‌ನ ಮೀರಠ್ ಘಟಕದ ಅಧ್ಯಕ್ಷ ವಿನಯ್ ಪ್ರಧಾನ್ ಅವರನ್ನು ಪಕ್ಷದ ಎಲ್ಲ ಹುದ್ದೆಗಳಿಂದ ಅಮಾನತು ಮಾಡಲಾಗಿದೆ.‘ಇಂಡಿಯನ್ ನ್ಯಾಷನಲ್ ಕಾಂಗ್ರೆಸ್’ ಎಂಬ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಅವರು ಸಂದೇಶ ಕಳುಹಿಸಿದ್ದರು.ಅದರಲ್ಲಿ ಅವರು, ‘ಪಪ್ಪು ಅವರು ಅದಾನಿ, ಅಂಬಾನಿ, ಮಲ್ಯ ಜತೆ ಕೈಜೋಡಿಸಬಹುದಾಗಿತ್ತು. ಆದರೆ ಹಾಗೆ ಮಾಡಲಿಲ್ಲ. ಪಪ್ಪು ಅವರು ಸಚಿವ, ಪ್ರಧಾನಿ ಆಗಬಹುದಾಗಿತ್ತು. ಆದರೆ ಅವರು ಮಂದ್‌ಸೌರ್‌ಗೆ ಭೇಟಿ ನೀಡುವ ಮೂಲಕ ಜೀವವನ್ನೇ ಪಣಕ್ಕಿಟ್ಟರು’ ಎಂದು ಉಲ್ಲೇಖಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry