ಅಪರಾಧಿಗೇ ‘ಬಂದಿ’ಯಾದ ಪ್ರೀತಿ

7
ಪ್ರೀತಿಗೆ ಸಿಲುಕಿ ಕೆಲಸ ಕಳೆದುಕೊಂಡ ಮಹಿಳಾ ಕಾನ್‌ಸ್ಟೆಬಲ್‌

ಅಪರಾಧಿಗೇ ‘ಬಂದಿ’ಯಾದ ಪ್ರೀತಿ

Published:
Updated:
ಅಪರಾಧಿಗೇ ‘ಬಂದಿ’ಯಾದ ಪ್ರೀತಿ

ಪಟ್ನಾ: ಪ್ರೀತಿ ಎಲ್ಲಿ, ಹೇಗೆ , ಏಕೆ ಹುಟ್ಟುತ್ತದೆ ಎನ್ನುವುದೇ ತಿಳಿಯುವುದಿಲ್ಲ ಎನ್ನುತ್ತಾರಲ್ಲ, ಇದು ಹಾಗೆನೇ...

ಇದು ಪೊಲೀಸ್‌ ಕಾನ್‌ಸ್ಟೆಬಲ್‌ ಪ್ರೀತಿ ಕುಮಾರಿ  ಅವರ ಕಥೆ. ಬಿಹಾರದ ಸೀತಾಮಹ್ರಿ ಮಹಿಳಾ   ಪೊಲೀಸ್‌ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದವರು.

2016ರಲ್ಲಿ ಆ ಠಾಣೆಗೊಬ್ಬ ಸ್ಫುರದ್ರೂಪಿ ಯುವಕನ ಪ್ರವೇಶವಾಯಿತು. ಆದರೆ ಆತ ಮಾಮೂಲಿ ಯುವಕನಲ್ಲ, ಬದಲಿಗೆ ‘ಮೋಸ್ಟ್‌ ವಾಂಟೆಡ್‌ ಕ್ರಿಮಿನಲ್‌’ ಎಂದು ಕುಖ್ಯಾತಿ ಪಡೆದಾತ. ಹೆಸರು ಮಿಥು ಶಾ.ಮಿಥುವನ್ನು ನೋಡುತ್ತಲೇ ಪ್ರೀತಿಗೆ ಪ್ರೀತಿಯ ಅಂಕುರವಾಯಿತು. ಗುಟ್ಟಾಗಿ ಇಬ್ಬರ ಮದುವೆಯೂ ಆಯಿತು. ಯಾರಿಗೂ ತಿಳಿಯದ ಹಾಗೆ ಒಟ್ಟಿಗೆ ದಾಂಪತ್ಯ ಜೀವನವನ್ನೂ ಶುರು ಮಾಡಿದರು.

ಆದರೆ ಈ ದಾಂಪತ್ಯ ಹೆಚ್ಚಿಗೆ ದಿನ ಗುಟ್ಟಾಗಿ ಉಳಿಯಲೇ ಇಲ್ಲ. ಕಾನ್‌ಸ್ಟೆಬಲ್‌ ಒಬ್ಬರು ಕ್ರಿಮಿನಲ್‌ ಒಬ್ಬನನ್ನು ಮದುವೆಯಾಗಿದ್ದಾರೆ ಎಂದು ಎಲ್ಲೆಡೆ ಸುದ್ದಿ ಹರಡಿತು. ಇದು ಠಾಣೆಯ ಎಸ್ಪಿ ಅವರ ಕಿವಿಗೂ ಮುಟ್ಟಿತು. ತನಿಖೆ ಶುರುವಿಟ್ಟುಕೊಂಡ ಪೊಲೀಸ್‌ ಅಧಿಕಾರಿಗಳು ವಿಷಯ ನಿಜ ಎಂದು ತಿಳಿದ ಮೇಲೆ ಪ್ರೀತಿ ಅವರನ್ನು ಕೆಲಸದಿಂದ ಅಮಾನತು ಮಾಡಿದರು. ನಂತರ ದೂರದ ಭಾಗಾಲ್ಪುರಕ್ಕೆ ವರ್ಗ ಮಾಡಿ ತನಿಖೆ ಮುಂದುವರಿಸಿದರು.

ತನಿಖೆಯ ವೇಳೆ ಪೊಲೀಸರಿಗೆ ಪ್ರೀತಿಯವರ ವಿರುದ್ಧ ಅನೇಕ ಸಾಕ್ಷ್ಯಾಧಾರಗಳು ಸಿಕ್ಕವು. ಅವು ಎಂದರೆ ಪೊಲೀಸ್‌ ಇಲಾಖೆಯೊಳಗೆ ಗೌಪ್ಯವಾಗಿ ಇರಬೇಕಿದ್ದ ಅನೇಕ ಸಂಗತಿಗಳನ್ನು ಪ್ರೀತಿ ಗಂಡನಿಗೆ ಹೇಳಿದ್ದರು. ಪ್ರೀತಿ ಅವರಿಗೆ ಷೋಕಾಸ್‌ ನೋಟಿಸ್‌ ನೀಡಿ ‘ನಿಮ್ಮನ್ನು ಕೆಲಸದಿಂದ ಏಕೆ ವಜಾ ಮಾಡಬಾರದು ಎಂಬ ಬಗ್ಗೆ ಕಾರಣಗಳನ್ನು ನೀಡಿ’ ಎಂದು ಕೇಳಲಾಯಿತು.

ಆದರೆ ಪ್ರೀತಿ ಅವರು ನೀಡಿದ ಉತ್ತರ ಇಲಾಖೆಗೆ ಅಷ್ಟೊಂದು ಸಮಾಧಾನ ತರಲಿಲ್ಲ. ತಮ್ಮನ್ನು ಸಮರ್ಥಿಸಿಕೊಳ್ಳುವಂಥ ಸೂಕ್ತ ಉತ್ತರದ ಬದಲು ಅಸ್ಪಷ್ಟ ಉತ್ತರ ನೀಡಿದ ಕಾರಣಕ್ಕೆ ಇದೇ 13ರಂದು ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry