ಅಮೆರಿಕ ಸಂಸದ ಸ್ಟೀವ್ ಸ್ಕಾಲೈಸ್ ಮೇಲೆ ಗುಂಡಿನ ದಾಳಿ

7

ಅಮೆರಿಕ ಸಂಸದ ಸ್ಟೀವ್ ಸ್ಕಾಲೈಸ್ ಮೇಲೆ ಗುಂಡಿನ ದಾಳಿ

Published:
Updated:
ಅಮೆರಿಕ ಸಂಸದ ಸ್ಟೀವ್ ಸ್ಕಾಲೈಸ್ ಮೇಲೆ ಗುಂಡಿನ ದಾಳಿ

ವಾಷಿಂಗ್ಟನ್: ವರ್ಜೀನಿಯದ ಅಲೆಕ್ಸಾಂಡ್ರಿಯಾದಲ್ಲಿ ಬೇಸ್ ಬಾಲ್ ಪಂದ್ಯದ ಅಭ್ಯಾಸ ನಡೆಸುತ್ತಿದ್ದ ರಿಪಬ್ಲಿಕನ್‌ ಪಕ್ಷದ ಸಂಸದ ಸ್ಟೀವ್ ಸ್ಕಾಲೈಸ್ (51) ಮೇಲೆ ಗುಂಡಿನ ದಾಳಿ ನಡೆದಿದೆ.ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ.ಮತ್ತೊಬ್ಬ ಸಂಸದ ರೋಜರ್ ವಿಲಿಯಮ್ ಎಂಬುವವರೂ ಗಾಯಗೊಂಡಿದ್ದಾರೆ.ಆದರೆ ಅವರು ಗುಂಡಿನ ದಾಳಿಯಿಂದ ಗಾಯಗೊಂಡಿದ್ದಾರೋ ಅಥವಾ ಬೇರೆ ಏನಾದರೂ ಕಾರಣವಿದೆಯೇ ಎಂಬುದು ತಿಳಿದುಬಂದಿಲ್ಲ.ದಾಳಿ ನಡೆಸಿದ ವ್ಯಕ್ತಿಯ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry